Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಡಿವೋರ್ಸ್ ವದಂತಿ ಬಗ್ಗೆ ನಟ ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ನಟಿ ಐಶ್ವರ್ಯ ರೈ ದಾಂಪತ್ಯದಲ್ಲಿ ಬಿರುಕು ಮೂಡಿದೆ, ಇಬ್ಬರೂ ದೂರಾಗುತ್ತಾರೆ ಎನ್ನುವ ವದಂತಿ ಪದೇ ಪದೆ ಕೇಳಿಬರುತ್ತದೆ. ಈ ಬಗ್ಗೆ ಇಬ್ಬರೂ ಪ್ರತಿಕ್ರಿಯಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಹಾಗಾಗಿ ಮತ್ತಷ್ಟು ಸುಳ್ಳು ಸುದ್ದಿ ಹರಿದಾಡುತ್ತಲೇ ಇತ್ತು. ಇದೇ ಮೊದಲ ಬಾರಿಗೆ ನಟ ಅಭಿಷೇಕ್ ಬಚ್ಚನ್ ಈ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಅಭಿ ಹಾಗೂ ಐಶ್ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಒಬ್ಬಳು ಮಗಳಿದ್ದಾಳೆ. ಮದುವೆ ಬಳಿಕ ಕೂಡ ಮಾಜಿ ವಿಶ್ವ ಸುಂದರಿ ಸಿನಿಮಾಗಳಲ್ಲಿ ನಟಿಸುತ್ತಾ ಬರ್ತಿದ್ದಾರೆ. ಆದರೆ ಸಾಕಷ್ಟು ಬಾರಿ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ, ಆದಷ್ಟು ಡಿವೋರ್ಸ್ ಪಡೆಯುತ್ತಾರೆ ಎನ್ನುವ ಊಹಾಪೋಹ ಕೇಳಿಬಂದಿತ್ತು. ಇದೆಲ್ಲದಕ್ಕೂ ಅಭಿಷೇಕ್ ಉತ್ತರಿಸಿದ್ದಾರೆ. ಸುಳ್ಳು ವದಂತಿ ಹರಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. Peeping Moon ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅಭಿ ಮನದಾಳ ತೆರೆದಿಟ್ಟಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಇರುವವರ ಬಗ್ಗೆ ಜನ ಊಹಿಸಿಕೊಳ್ಳುವುದು ಜಾಸ್ತಿ ಎಂದು ಅಭಿಷೇಕ್ ಹೇಳಿದ್ದಾರೆ. "ಅಂತಹ ಯಾವುದೇ ಸುದ್ದಿ ಬಗ್ಗೆ ನನಗೆ ಗೊತ್ತಿಲ್ಲ. ಅದಕ್ಕೆಲ್ಲಾ ಸ್ಪಷ್ಟನೆ ಕೊಡುತ್ತರಾ ಕೂರುವ ಅಗತ್ಯವಿಲ್ಲ. ನೀವು ಸೆಲೆಬ್ರಿಟಿ ಆಗಿದ್ದರೆ, ಜನರು ಎಲ್ಲದರ ಬಗ್ಗೆಯೂ ಊಹಿಸಲು ಬಯಸುತ್ತಾರೆ. ಹೀಗೆ ಬರೆದಿರುವ ಯಾವುದೇ ಸುದ್ದಿ ಸುಳ್ಳು, ಯಾವುದು ಸತ್ಯವಲ್ಲ" ಎಂದು ತಿಳಿಸಿದ್ದಾರೆ.
ಮಾತು ಮುಂದುವರೆಸಿರುವ ಅಭಿಷೇಕ್ ಬಚ್ಚನ್ ತಮ್ಮ ಮಡದಿ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡುವವರನ್ನು ಉದ್ದೇಶಿಸಿ "ನಾವು ಮದುವೆ ಆದ ಸಮಯದಿಂದಲೂ ಅವರು ಇದನ್ನು ಮಾಡ್ತಿದ್ದಾರೆ. ಮೊದಲಿಗೆ ನಾವು ಯಾವಾಗ ಮದುವೆ ಆಗುತ್ತೇವೆ ಎಂದು ಮಾತನಾಡುತ್ತಿದ್ದರು. ಬಳಿಕ ಮದುವೆ ಆಯ್ತು. ಈಗ ಯಾವಾಗ ಡಿವೋರ್ಸ್ ಅಂತ ಚರ್ಚಿಸಲು ಶುರು ಮಾಡಿದ್ದಾರೆ. ಇದೆಲ್ಲ ಅಸಂಬದ್ಧ. ನನಗೆ ಅವಳ(ಐಶ್ವರ್ಯ ರೈ) ಬಗ್ಗೆ ಗೊತ್ತು, ಅವಳಿಗೆ ನನ್ನ ಬಗ್ಗೆ ಗೊತ್ತು. ನಾವು ಸದಾ ಖುಷಿಯಾಗಿ ಒಂದು ಕುಟುಂಬವಾಗಿರಲು ಬಯಸುತ್ತೇವೆ" ಎಂದು ವಿವರಿಸಿದ್ದಾರೆ.
ಈ ಊಹಾಪೋಹಗಳು ನಿಮ್ಮ ಮೇಲೆ ಪರಿಣಾಮ ಬೀರಿದ್ಯಾ ಎನ್ನುವ ಬಗ್ಗೆ ಮಾತನಾಡಿರುವ ಅಭಿಷೇಕ್ "ಖಂಡಿತ ಇಲ್ಲ.. ಸ್ವಲ್ಪವಾದರೂ ಸತ್ಯವಿದ್ದರೆ, ಬಹುಶಃ ಹಾಗೆ ಆಗುತ್ತಿತ್ತು. ಆದರೆ ಸತ್ಯವಿಲ್ಲ. ನನ್ನ ಕುಟುಂಬದ ಬಗ್ಗೆ ಅಥವಾ ನನ್ನ ಬಗ್ಗೆ ಕಟ್ಟುಕಥೆಗಳು ಅಥವಾ ಸುಳ್ಳುಗಳನ್ನು ನಾನು ಸಹಿಸುವುದಿಲ್ಲ" ಎಂದು ತಿಳಿಸಿದ್ದಾರೆ.
'ದಾಯಿ ಅಕ್ಷರ್ ಪ್ರೇಮ್ ಕೆ', 'ಕುಚ್ ನಾ ಕಹೋ', 'ಉಮ್ರಾವ್ ಜಾನ್' ಮತ್ತು 'ಗುರು' ಸಿನಿಮಾಗಳಲ್ಲಿ ಅಭಿ-ಐಶ್ ಒಟ್ಟಿಗೆ ನಟಿಸಿದ್ದರು. ಇದೇ ವೇಳೆ ಶುರುವಾಗಿದ್ದ ಪರಿಚಯ, ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿತ್ತು. ಅದಕ್ಕೂ ಮುನ್ನ ಇಬ್ಬರ ಹೆಸರುಗಳು ಬೇರೆಯವರ ಜೊತೆ ತಳುಕು ಹಾಕಿಕೊಂಡಿತ್ತು. ನ್ಯೂಯಾರ್ಕ್‌ನಲ್ಲಿ ಸ್ವತಃ ಅಭಿ ಪ್ರಪೋಸ್ ಮಾಡಿದ್ದರು. 2007ರಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನೆರವೇರಿತ್ತು. ತಮ್ಮ ನಿವಾಸದಲ್ಲೇ ಅಮಿತಾಬ್ ಮಗನ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದರು.



Click it and Unblock the Notifications
