Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ವಿಚ್ಛೇದನದ ಹಿಂದಿರುವ 7 ಪ್ರಮುಖ ಕಾರಣಗಳಿವು
ಇತ್ತೀಚಿನ ವರ್ಷಗಳಲ್ಲಿ ಡಿವೋರ್ಸ್ ಎಂಬುವುದು ತುಂಬಾನೇ ಕಾಮನ್ ಆಗುತ್ತಿದೆ, ನಮ್ಮ ಆಪ್ತರು ಅಥವಾ ನಮಗೆ ಗೊತ್ತಿರುವ ದಂಪತಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಕೇಳಿದಾಗ ಅವರು ಚೆನ್ನಾಗಿಯೇ ಇದ್ದಾರಲ್ಲ ವಿಚ್ಛೇದನ ಒಡೆಯುವಂಥದ್ದು ಏನಾಯ್ತು ಎಂದು ಮಾತನಾಡಿಕೊಳ್ಳುತ್ತೇವೆ. ಯಾವುದೇ ದಾಂಪತ್ಯ ಜೀವನ ಮುರಿದು ಬೀಳಲು ಇವೇ ಪ್ರಮುಖ ಕಾರಣಗಳಾಗಿರುತ್ತದೆ....
* ಪ್ರೀತಿ, ದೈಹಿಕ ತೃಪ್ತಿ ಇಲ್ಲದಿರುವುದು
* ಸಂವಹನ ಕೊರತೆ
* ಹೊಂದಾಣಿಕೆ, ನಂಬಿಕೆ, ಅನುಕಂಪ ಇಲ್ಲದಿರುವುದು
* ಇಬ್ಬರ ನಡುವೆ ಆಸಕ್ತಿಗಳು ಭಿನ್ನವಾಗಿದ್ದು ಈ ವಿಷಯಕ್ಕೆ ಇಬ್ಬರಲ್ಲಿ ಜಗಳ

ಯಾರ ದಾಂಪತ್ಯ ಜೀವನ ಹೀಗಿರುತ್ತದೋ ಅವರ ದಾಂಪತ್ಯ ಮುರಿದು ಬೀಳುವುದು...
1. ಕಮಿಟ್‌ಮೆಂಟ್ ಇಲ್ಲದಿರುವುದು: ಮದುವೆಯಾದ ಮೇಲೆ ಬದ್ಧತೆ ಎಂಬುವುದು ಇರಬೇಕು. ಅದು ಇಲ್ಲದಿದ್ದರೆ ದಾಂಪತ್ಯ ಜೀವನ ತುಂಬಾ ಸಮಯ ನೆಲೆ ನಿಲ್ಲಲ್ಲ. ಕಮಿಟ್‌ಮೆಂಟ್ ಇಲ್ಲದಿರುವುದು ಸಂಸಾರದ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ, ಈ ಕಾರಣಕ್ಕೆ ಸಂಸಾರದಲ್ಲಿ ಸಮಸ್ಯೆಗಳು ಉಂಟಾಗುವುದು.
2. ಯಾವಾಗಲೂ ಜಗಳ: ಜಗಳವಾಡದ ದಂಪತಿ ಇರಲ್ಲ, ಆದರೆ ಯಾವಾಗಲೂ ಜಗಳ, ತರ್ಕವಿದ್ದರೆ ಅಂಥ ಸಂಸಾರದಲ್ಲಿ ನೆಮ್ಮದಿ ಇರಲ್ಲ. ಇಬ್ಬರಿಗೆ ದಾಂಪತ್ಯ ಜೀವನ ಸಾಕಾಗುವುದು, ಈ ಕಾರಣಕ್ಕೆ ದಾಂಪತ್ಯ ಜೀವನ ಮುರಿದು ಬೀಳುವುದು.
3. ವಂಚನೆ: ಗಂಡ ಹೆಂಡತಿಗೆ ಅಥವಾ ಹೆಂಡತಿ ಗಂಡನಿಗೆ ಮೋಸ ಮಾಡಿದರೆ ಅಂಥ ಸಂಗಾತಿ ಜೊತೆ ಬಾಳ್ವೆ ಮಾಡಲು ಸಾಧ್ಯವಾಗುವುದಿಲ್ಲ, ಈ ಕಾರಣಕ್ಕೆ ದಾಂಪತ್ಯ ಜೀವನ ಮುರಿದು ಬೀಳುತ್ತದೆ.
4. ಅತಿಯಾದ ನಿರೀಕ್ಷೆ: ಕೆಲವರಿಗೆ ಅತಿಯಾದ ನಿರೀಕ್ಷೆ, ಒಂಥರಾ ಭ್ರಮೆಯಲ್ಲಿ ಬದುಕುತ್ತಿರುತ್ತಾರೆ, ಅತಿಯಾದ ನಿರೀಕ್ಷೆಯಿಂದಾಗಿ ದಾಂಪತ್ಯ ಜೀವನದಲ್ಲಿ ಸಮಸ್ಯೆ ಉಂಟಾಗುವುದು.
5. ಸಂಗಾತಿ ನಡುವೆ ಅಸಮಾನತೆ: ಇಬ್ಬರ ನಡುವೆ ಹಲವಾರು ವಿಷಯಗಳಲ್ಲಿ ಅಸಮಾನತೆ ಇದ್ದರೆ ಆ ಸಂಸಾರದಲ್ಲಿ ತುಂಬಾನೇ ಸಮಸ್ಯೆ ಉಂಟಾಗುವುದು.
6. ಕೌಟುಂಬಿಕ ದೌರ್ಜನ್ಯ: ಈ ಕಾರಣಕ್ಕೆ ಹಲವು ದಾಂಪತ್ಯ ಮುರಿದು ಬೀಳುತ್ತದೆ, ದೈಹಿಕ, ಮಾನಸಿಕ ಹಿಂಸೆ ನೀಡುವ ವ್ಯಕ್ತಿ ಜೊತೆ ಬಾಳುವುದಕ್ಕಿಂತ ಅಂಥ ವ್ಯಕ್ತಿಯಿಂದ ದೂರಾಗುವುದೇ ಬೆಸ್ಟ್.
7. ಆರ್ಥಿಕ ಸಮಸ್ಯೆ: ಆರ್ಥಿಕ ಸಮಸ್ಯೆ ಎಲ್ಲಾ ದಾಂಪತ್ಯದಲ್ಲಿ ದೊಡ್ಡ ಸಮಸ್ಯೆ ತರಲ್ಲ, ಪತಿ-ಪತ್ನಿ ಕಷ್ಟದ ಪರಿಸ್ಥಿತಿಯನ್ನು ಜೊತೆಯಾಗಿ ಎದುರಿಸುವವರು ಇದ್ದಾರೆ, ಆದರೆ ಇನ್ನು ಕೆಲವರು ಆರ್ಥಿಕ ಸಮಸ್ಯೆ ಬಂದಾಗ ಸಂಗಾತಿಯನ್ನು ದೂರುವುದು ಮಾಡುತ್ತಾರೆ. ಈ ಕಾರಣಕ್ಕೆ ಸಂಬಂಧ ಮುರಿದು ಬೀಳುವುದು.



Click it and Unblock the Notifications