Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹೊಸದಾಗಿ ಮದುವೆಯಾದವರು ಈ 6 ದಾಂಪತ್ಯ ಸೂತ್ರ ಅನುಸರಿಸಿದರೆ ಬದುಕು ಬಂಗಾರವಾಗುತ್ತೆ
ಡ್ರೀಮಿ ವೆಡ್ಡಿಂಗ್ ಬಳಿಕ ಸಂಸಾರದ ನೌಕೆ ಸಾಗಲಾರಂಭಿಸಿದಾಗ ಅಲ್ಲಿ ಕೆಲವೊಮ್ಮೆ ದೊಡ್ಡ ಅಲೆಗಳು ಬಂದಪ್ಪಳಿಸಿ ನೌಕೆಯನ್ನೇ ಮಗುಚಿ ಹಾಕಬಹುದು, ಎಷ್ಟೋ ಸಂಸಾರಗಳು ಈ ಸಮಯದಲ್ಲಿ ಮುರಿದು ಬೀಳುತ್ತದೆ. ಮದುವೆ ಎಂದಾಗ ಸಾಕಷ್ಟು ಕನಸುಗಳಿರುತ್ತದೆ. ಮದುವೆ ಹೇಗೆ ಮಾಡಬೇಕು, ಡ್ರೆಸ್ಸಿಂಗ್ ಹೇಗೆ ಮಾಡಬೇಕು ಎಂಬ ನೂರೆಂಟು ಕನಸುಗಳು, ಆದರೆ ಮದುವೆಯ ನಂತರದ ಬದುಕನ್ನು ತುಂಬಾ ಕಲರ್‌ಫುಲ್ ಮಾಡಲು ಏನು ಮಾಡಬೇಕೆಂದು ಬಹುತೇಕರು ಯೋಚನೆ ಮಾಡುವುದೇ ಇಲ್ಲ.

ಮದುವೆಯ ಬಳಿಕ ಇಬ್ಬರಿಗೆ ಹೊಂದಿಕೊಂಡು, ಪರಸ್ಪರ ಅರ್ಥಮಾಡಿಕೊಂಡು ಬಾಳಲು ಸ್ವಲ್ಪ ಸಮಯ ಹಿಡಿಯುತ್ತೆ, ಅದು ಲವ್‌ಮ್ಯಾರೇಜ್ ಆಗಿದ್ದರೂ ಕೂಡ... ಜೊತೆಯಲ್ಲಿ ಬಾಳುವಾಗಲೇ ಒಬ್ಬರಿಗೊಬ್ಬರು ಎಷ್ಟು ಹೊಂದಿಕೊಂಡು ಹೋಗುತ್ತಿದ್ದೀರಿ ಎಂಬುವುದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು.
ವೈವಾಹಿಕ ಬದುಕು ಯಾರದ್ದು ಹೇಗಿರುತ್ತದೆ ಎಂದು ಹೇಳುವುದು ಕಷ್ಟ, ಆದರೆ ಈ ಸರಳ ಸೂತ್ರ ಅನುಸರಿಸಿದ್ದೇ ಆದರೆ ನಮ್ಮ ಸಂಸಾರ ಆನಂದ ಸಾಗರ ಎಂದು ಹೇಳುವಿರಿ...
ಸಂವಹನ
ಇದು ತುಂಬಾನೇ ಮುಖ್ಯ, ನಿಮ್ಮಿಬ್ಬರ ನಡುವೆ ಎಷ್ಟು ಮುಕ್ತ ಸಂವಹನ ಇರುತ್ತದೆಯೋ ಅಷ್ಟೇ ಒಳ್ಳೆಯದು. ಇಬ್ಬರ ನಡುವೆ ಸಂವಹನ ಚೆನ್ನಾಗಿದ್ದರೆ ನಿಮ್ಮಿಬ್ಬರ ನಡುವಿನ ಬಾಂಧವ್ಯ ಗಟ್ಟಿಯಾಗುವುದು. ಏನೇ ಭಿನ್ನಾಭಿಪ್ರಾಯ ಉಂಟಾದರೂ ಅದನ್ನು ಬಗೆಹರಿಸುವುದು ಸುಲಭವಾಗುವುದು. ಅಲ್ಲದೆ ನೀವು ಮುಕ್ತ ಸಂವಹನ ಮಾಡಿದಾಗ ನಿಮ್ಮ ನಡುವೆ ತಪ್ಪು ತಿಳುವಳಿಕೆ, ಸಂಶಯ ಇವೆಲ್ಲಾ ಉಂಟಾಗುವುದೂ ಇಲ್ಲ.
ಜೊತೆಯಾಗಿ ಸಮಯ ಕಳೆಯಬೇಕು
ಇಬ್ಬರ ಸಂಬಂಧ ಬೆಡ್‌ರೂಂಗೆ ಸೀಮಿತವಾಗಿರದೆ ಹೆಚ್ಚು ಜೊತೆಯಾಗಿ ಸಮಯ ಕಳೆಯಲು ಪ್ರಯತ್ನಿಸಬೇಕು, ಶಾ ಪಿಂಗ್, ಟ್ರಿಪ್ ಅಂತ ಹೋಗುವುದು, ಮನೆಯಲ್ಲಿ ಇಬ್ಬರು ಜೊತೆಯಾಗಿ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುವುದು ಹೀಗೆ ಇಬ್ಬರು ಕ್ವಾಲಿಟಿ ಸಮಯವನ್ನು ಜೊತೆಯಾಗಿ ಕಳೆಯಬೇಕು.
ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಬೇಕು
ಇಬ್ಬರು ಮದುವೆಯಾದ ಮೇಲೆ ಹಲವಾರು ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ, ಏಕೆಂದರೆ ನಮ್ಮಂತೆಯೇ ಅವರು ಇರಬೇಕು ಎಂದು ಭಾವಿಸುವುದು ತಪ್ಪು. ಹೊಂದಾಣಿಕೆ ಇರಬೇಕು, ಸಣ್ಣ ಪುಟ್ಟ ತಪ್ಪುಗಳನ್ನು ಕ್ಷಮಿಸಬೇಕಾಗುತ್ತದೆ, ನಿಮ್ಮ ಮನೆಯ ಕೆಲವೊಂದು ವಿಷಯಗಳು ಅವರಿಗೆ ಗೊತ್ತಿರುವುದಿಲ್ಲ, ಅದನ್ನು ತಿಳಿಸಿ ಹೇಳಬೇಕಾಗುತ್ತದೆ ಹೊಂದಾಣಿಕೆ ತುಂಬಾನೇ ಮುಖ್ಯವಾಗುತ್ತದೆ.
ಭಾವನಾತ್ಮಕ ಬೆಂಬಲ ನೀಡಬೇಕು
ಇದು ತುಂಬಾನೇ ಮುಖ್ಯ, ಒಬ್ಬರಿಗೊಬ್ಬರು ತುಂಬಾನೇ ಬೆಂಬಲ ನೀಡಬೇಕು, ಭಾವನಾತ್ಮಕವಾಗಿ ಸಪೋರ್ಟ್ ನೀಡಬೇಕು, ಪರಸ್ಪರ ಗೌರವ ಹೆಚ್ಚಾಗಲಿದೆ, ಪ್ರೀತಿ ಹೆಚ್ಚಾಗುವುದು, ನಿಮ್ಮಿಬ್ಬರ ನಡುವೆ ಬಾಂಧವ್ಯ ತುಂಬಾ ಗಟ್ಟಿಯಾಗಿರಲಿದೆ.
ಭವಿಷ್ಯದ ನಿರ್ಧಾರ ಜೊತೆಯಾಗಿ ತೆಗೆದುಕೊಳ್ಳಬೇಕು
ಮದುವೆಯಾಗುವ ಮುನ್ನ ನಿರ್ಧಾರಗಳನ್ನು ನಿಮಗೆ ಅನಿಸಿದಂತೆ ತೆಗೆದುಕೊಳ್ಳಬಹುದು, ಆದರೆ ಮದುವೆಯಾದ ಬಳಿಕ ಭವಿಷ್ಯದ ಕುರಿತ ಪುಟ್ಟ ನಿರ್ಧಾರಕೂಡ ಜೊತೆಯಾಗಿ ತೆಗೆದುಕೊಳ್ಳಬೇಕು, ಏನೇ ಮಾಡುವ ಮುನ್ನ ಸಂಗಾತಿಯ ಅಭಿಪ್ರಾಯ ಕೇಳಿದಾಗ ಇಬ್ಬರಿಗೂ ನಾವಿಬ್ಬರು ಜೊತೆಯಾಗಿ ನಮ್ಮ ಗೂಡು ಸುಂದರವಾಗಿಸುತ್ತಿದ್ದೇವೆ ಎಂದನಿಸಲಾರಂಭಿಸುತ್ತದೆ.
ಅಗ್ಯತ ಬಿದ್ದರೆ ಕೌನ್ಸಿಲಿಂಗ್ ಪಡೆಯಿರಿ
ಕೆಲವೊಮ್ಮೆ ಬದುಕು ನಾವಂದುಕೊಂಡಂತೆ ಇರಲ್ಲ, ಏಕೋ ನಮ್ಮ ನಡುವೆ ಯಾವುದೋ ಕೆಲ ಸಂಗತಿಗಳು ಸರಿಯಾಗಿ ಬರ್ತಾ ಇಲ್ಲ ಎಂದಾದರೆ ಕೌನ್ಸಿಲಿಂಗ್ ನಿಮ್ಮ ಸಂಬಂಧ ಉಳಿಸಿಕೊಳ್ಳಲು ಸಹಾಯ ಮಾಡುವುದು ನೋಡಿ.



Click it and Unblock the Notifications
