Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದಂಪತಿಗಳು ಜಗಳ ಆಡಲು ಪ್ರಮುಖ 3 ಕಾರಣ ಇವು..! ಅದನ್ನು ನಿಭಾಯಿಸೋದು ಹೇಗೆ?
ದಾಂಪತ್ಯ ಅನ್ನೋದು ಎಲ್ಲಾ ಸಂಬಂಧಕ್ಕಿಂತ ವಿಶೇಷ ಎನ್ನಬಹುದು. ಪ್ರೀತಿ, ಸಾಮರಸ್ಯ, ನಂಬಿಕೆ, ಬಾಂಧವ್ಯದ ಪ್ರತೀಕವಾಗಿದೆ. ದಾಂಪತ್ಯ ಯಾವಾಗಲು ಹೂವಿನ ಹಾಸಿಗೆಯಾಗಿರುವುದಿಲ್ಲ ಬದಲಿಗೆ ಅಲ್ಲಿ ಜಗಳ, ಮನಸ್ತಾಪ ಇರುವುದು ಸಾಮಾನ್ಯ. ಹಾಗೆ ಎಲ್ಲಿ ಈ ಕೋಪ, ಜಗಳ ಇರುತ್ತೋ ಅಲ್ಲಿಯೇ ಪ್ರೀತಿ ಕೂಡ ಇರುತ್ತೆ ಅನ್ನೋದು ಹಿರಿಯರ ಮಾತು.
ಆದ್ರೆ ಇತ್ತಿಚಿಗೆ ಸಂಬಂಧಗಳು ಹುಟ್ಟಿಕೊಳ್ಳುವುದು ಎಷ್ಟು ಸುಲಭವೋ ಹಾಗೆ ಸಂಬಂಧದಲ್ಲಿ ತೊಡಕುಗಳು ಎದುರಾಗಿ ಅಷ್ಟೇ ಬೇಗ ಹಾಳಾಗುವುದು ಕೂಡ ನಾವು ನೋಡುತ್ತಿದ್ದೇವೆ. ಇದಕ್ಕೆ ಹಲವು ಕಾರಣಗಳಿದ್ದರೂ ಈ ಹೆಚ್ಚಿನ ದಾಂಪತ್ಯಗಳಿಂದು ಸಣ್ಣಪುಟ್ಟ ಸಮಸ್ಯೆಗಳ ನಡುವೆಯೇ ದಿನ ಕಳೆಯುವುದು ನೋಡಬಹುದು. ಹಾಗೆ ಕೆಲವೊಮ್ಮೆ ಸಣ್ಣ ಪುಟ್ಟ ಸಮಸ್ಯೆಗಳೇ ದೊಡ್ಡದಾಗಿ ಇಡೀ ಸಂಬಂಧವನ್ನು ಕ್ಯಾನ್ಸರ್‌ನಂತೆ ಕಾಡುವ ಸಾಧ್ಯತೆ ಇರುತ್ತದೆ.

ಸಂಪೂರ್ಣವಾಗಿ ಯಶಸ್ವಿ ಮತ್ತು ಯಾವುದೇ ಜಗಳ, ವಾದವಿಲ್ಲದ ದಾಂಪತ್ಯ ಹುಡುಕುವುದು ಬಹಳ ಕಷ್ಟ. ಯಾವುದಾದರು ಸಣ್ಣ ವಿಚಾರಗಳಿಗೂ ಕೂಡ ದೊಡ್ಡ ಮನಸ್ತಾಪ ಬರಬಹುದು. ಆದ್ರೆ ಪ್ರತಿದಿನ ಸಂಬಂಧದಲ್ಲಿ ನೋವುಗಳೆ ತುಂಬಿದರೆ ಆ ಸಂಬಂಧ ಮನಶಾಂತಿ ಹಾಳುಮಾಡುತ್ತದೆ. ಹಾಗೆ ನಿಮ್ಮ ಜೀವನವನ್ನು ನರಕವಾಗಿಸಬಹುದು. ಇನ್ನು ದಂಪತಿಗಳು ತಮ್ಮ ಸಂಬಂಧದಲ್ಲಿ ಪ್ರೀತಿಯ ಬದಲಾಗಿ ಹೆಚ್ಚಾಗಿ ಜಗಳಕ್ಕೆ ಮುಂದಾಗಲು ಪ್ರಮುಖ ಕಾರಣಗಳೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಯಾವ ಮೂರು ಕಾರಣ ದಂಪತಿಯ ನಡುವೆ ಜಗಳಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಹಣ
ಹಣವು ಸಂಬಂಧದಲ್ಲಿ ಬಿರುಕುಗಳನ್ನು ಉಂಟುಮಾಡುವುದು ಸಾಮಾನ್ಯ, ಇದು ದಂಪತಿಗಳಲ್ಲಿಯೂ ಹೊರತಾಗಿಲ್ಲ. ಹಣವು ಯಾವ ಸಂಬಂಧವನ್ನೂ ನೋಡುವುದಿಲ್ಲ, ಅದರಂತೆ ದಾಂಪತ್ಯದಲ್ಲಿ ಮನಸ್ತಾಪಗಳು, ಜಗಳಗಳಿಗೆ ಕಾರಣವಾಗುವ ಅಂಶಗಳಲ್ಲಿ ಹಣ ಕೂಡ ಒಂದಾಗಿದೆ. ಆರ್ಥಿಕ ಸಮಸ್ಯೆಗಳು ಮತ್ತು ಅಸ್ಥಿರತೆಗಳು ವೈವಾಹಿಕ ಆಶಾಂತಿಗೆ ಪ್ರಮುಖ ಕಾರಣ ಎಂಬುದು ತಿಳಿದುಬರುತ್ತದೆ. ಒಬ್ಬ ವ್ಯಕ್ತಿ ಅಥವಾ ಮಹಿಳೆ ಎಲ್ಲಾ ಹಣಕಾಸಿನ ಜವಾಬ್ದಾರಿಗಳನ್ನು ತಾನೇ ತೆಗೆದುಕೊಳ್ಳುತ್ತಿದ್ದಾನೆ ಎಂದು ಭಾವಿಸಿದಾಗ, ಅಥವಾ ಎಲ್ಲಾ ಆರ್ಥಿಕ ಅವಶ್ಯಕತೆಗಳನ್ನು ತಾನೆ ನಿಭಾಯಿಸುವ ಅನಿವಾರ್ಯತೆ ಎದುರಾದಾಗ ಈ ಸಮಸ್ಯೆಗಳು ಉದ್ಭವಿಸಬಹುದು. ಇದು ಹಣಕಾಸು ವಿಚಾರವಾಗಿ ಜಗಳ, ಮನಸ್ಥಾಪಕ್ಕೆ ಕಾರಣವಾಗಬಹುದು. ಹೀಗಾಗಿ ಸಂಬಂಧದಲ್ಲಿ ಸಮಾನತೆ ಇರುವಂತೆ, ಹಣಕಾಸು ವಿಚಾರವಾಗಿಯೂ ಪರಸ್ಪರ ಹೊಂದಾಣಿಕೆ ಅಗತ್ಯ.
ಮನೆ ಜವಾಬ್ದಾರಿ
ದಂಪತಿಗಳ ದಾಂಪತ್ಯ ಸಮಸ್ಯೆಗಳ ಪೈಕಿ ಈ ಮನೆ ಜವಾಬ್ದಾರಿ ಅನ್ನೋದು ಕೂಡ ಮುಖ್ಯ ಕಾರಣವಾಗಿದೆ. ಇದೊಂದು ಸೈಲೆಂಟ್ ರೀಸನ್ ಎನ್ನಬಹುದು, ಏಕೆಂದರೆ ಹಲವು ಬಾರಿ ಇದು ಪತಿಯ ಜವಾಬ್ದಾರಿ ಹಾಗೆ ಪತ್ನಿಯ ಜವಾಬ್ದಾರಿ ಎಂದು ಅವರೆ ಹಾಕಿಕೊಂಡು ಬೌಂಡರಿಯಲ್ಲಿ ಯಾವ ವಿಚಾರವನ್ನೂ ಮಾತುಕತೆಗೆ ತರಲಾಗದೆ ಹಾಗೆ ಉಳಿದುಬಿಟ್ಟಿರುತ್ತದೆ. ಇದು ಮನದಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಉದಾಹರಣೆಗೆ ಮಕ್ಕಳ ನೋಡಿಕೊಳ್ಳುವುದು, ಉಡುಗೆ, ಮನೆಯನ್ನು ಸ್ವಚ್ಛವಾಗಿಡುವುದು ಕೇವಲ ಪತ್ನಿಯ ಕೆಲಸ ಎಂದು ಭಾವಿಸುವುದು ಬಹಳ ಅಪಾಯಕಾರಿಯಾಗಿ ಕಾಡಬಹುದು. ಹಾಗೆ ಮನೆಯ ಅವಶ್ಯಕತೆಗಳ ನಿಭಾಯಿಸುವುದು ದುಡಿಮೆ ಮಾಡುವುದು ಪತಿಯ ಜವಾಬ್ದಾರಿ ಅಷ್ಟೇ ಎಂದು ಭಾವಿಸುವುದು ದಂಪತಿಗಳ ನಡುವಿನ ಸಾಮರಸ್ಯ ಹಾಳಾಗಲು ಒಂದು ಕಾರಣವಾಗಿರಲಿದೆ.
ಗುರಿಗಳು ಮತ್ತು ಕರ್ತವ್ಯ
ದಾಂಪತ್ಯದಲ್ಲಿ ನಿಗಧಿತ ಕರ್ತವ್ಯಗಳು, ಗುರಿಗಳ ಕುರಿತಾಗಿ ಹೆಚ್ಚಾಗಿ ಮನಸ್ತಾಪ ಉಂಟಾಗುವುದು ನೋಡಬಹುದು. ಇಬ್ಬರ ಮುಂದಿನ ಗುರಿ ಒಂದೇ ಆಗಿದ್ದರೆ ಅಥವಾ ಒಂದೇ ದಾರಿಯಲ್ಲಿ ಸಾಗುತ್ತಿದ್ದರೆ ಸಂಬಂಧ ಕೂಟ ಅಷ್ಟೇ ಸ್ಪಷ್ಟ ಹಾಗೂ ಸುಂದರವಾಗಿರುತ್ತೆ. ಆದ್ರೆ ಇಬ್ಬರ ಗುರಿಯು ಬೇರೆ ಬೇರೆ ಆದರೆ ದಾಂಪತ್ಯದಲ್ಲಿ ಜಗಳ ಸಾಮಾನ್ಯ ಎನ್ನುವಂತಾಗುತ್ತದೆ.



Click it and Unblock the Notifications