Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ
ಗರ್ಲ್ ಫ್ರೆಂಡ್ ಗೆ ಇಷ್ಟವಾಗುವ ಚಟುವಟಿಕೆಗಳು
ಕೆಲವೊಮ್ಮೆ ಏನು ಮಾಡಬೇಕೆನ್ನುವುದರ ಬಗ್ಗೆ ನಮ್ಮ ತಲೆ ಓಡುವುದೇ ಇಲ್ಲ. ಇಂತ ಸಂದರ್ಭದಲ್ಲಿ ಕೆಲವೊಂದು ಮೋಜಿನ ಚಟುವಟಿಕೆಗಳಲ್ಲಿ ಈಗೀಂದೀಗಲೇ ನಿಮ್ಮ ಗರ್ಲ್ ಫ್ರೆಂಡ್ ನ್ನು ಸೇರಿಸಿಕೊಳ್ಳಿ ಮತ್ತು ಆಕೆ ನಿಮ್ಮ ಬಗ್ಗೆ ಆಸಕ್ತಿಯಿಂದ ಇರುವಂತೆ ಮಾಡಿ. ಇಂತಹ ಕೆಲವೊಂದು ಕುತೂಹಲಕಾರಿ ಮತ್ತು ಮೋಜಿನ ಚಟುವಟಿಕೆಗಳು ನಿಮ್ಮಿಬ್ಬರ ಸಂಬಂಧದ ಮಿಂಚನ್ನು ಜೀವಂತವಾಗಿಡುತ್ತದೆ. ನಿಮ್ಮ ಆಲೋಚನೆಗಳು ಮತ್ತು ನಿಮ್ಮಿಬ್ಬರ ಮೋಜಿನ ಸಮಯ ಮತ್ತು ಆಸಕ್ತಿಗಳು ಸೃಜನಶೀಲವಾಗಿರಬೇಕು. ಇದರಿಂದ ನಿಮ್ಮ ಗರ್ಲ್ ಫ್ರೆಂಡ್ ನಿಮ್ಮೊಂದಿಗೆ ಹೆಚ್ಚಿನ ಸಮಯ ಕಳೆಯುವಂತೆ ಮಾಡಬಹುದು.
ನಿಮ್ಮಿಬ್ಬರ ನಡುವಿನ ಮೋಜಿನ ಚಟುವಟಿಕೆ ಪರಸ್ಪರರನ್ನು ಒಳ್ಳೆಯ ರೀತಿ ಅರಿತುಕೊಳ್ಳಲು ಮತ್ತು ಗರ್ಲ್ ಫ್ರೆಂಡ್ ಜತೆಗಿನ ಸಂಪರ್ಕಕ್ಕೆ ನೆರವಾಗುತ್ತದೆ. ಇದು ಆಕೆಯೊಂದಿಗೆ ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಆಕೆಯನ್ನು ಎಷ್ಟು ಇಷ್ಟಪಡುತ್ತೀರಿ ಮತ್ತು ಕಾಳಜಿ ವಹಿಸುತ್ತೀರಿ ಎನ್ನುವುದನ್ನು ಇದು ತೋರಿಸುತ್ತದೆ. ಮೋಜಿನ ಚಟವಟಿಕೆಯನ್ನು ಕಾಳಜಿಯಿಂದ ಆಯ್ಕೆ ಮಾಡುವುದು ಮತ್ತು ಇದರಲ್ಲಿ ನಿಮ್ಮ ಗರ್ಲ್ ಫ್ರೆಂಡ್ ನ್ನು ಸೇರಿಸುವುದು ಸಂಬಂಧವನ್ನು ಗಟ್ಟಿಗೊಳಿಸುವ ಚಟುವಟಿಕೆ. ಇಂತಹ ಸಣ್ಣ ಚಟುವಟಿಕೆಗಳು ಸಂಬಂಧದ ಬಗ್ಗೆ ನಿಮ್ಮ ಬದ್ಧತೆ ತೋರಿಸುತ್ತದೆ.
ಇಂತಹ ಮೋಜಿನ ಚಟುವಟಿಕೆಗಳಲ್ಲಿ ನಿಮ್ಮ ಗರ್ಲ್ ಫ್ರೆಂಡ್ ಜತೆಗೆ ಪ್ರಶಾಂತವಾದ ಸಂಜೆಯಲ್ಲಿ ಪಾರ್ಕ್ ನಲ್ಲಿ ಒಂದು ವಾಕ್ ಗೆ ಹೋಗುವುದು, ಸಣ್ಣ ಜೋಕ್ ಗಳಿಗೆ ಮನಬಿಚ್ಚಿ ನಗುವುದು, ವಾರಾಂತ್ಯದಲ್ಲಿ ಅರಣ್ಯ ಪ್ರದೇಶದಲ್ಲಿ ಶಿಬಿರ ಹಾಕಿ ಕುಳಿತುಕೊಳ್ಳುವುದು ಸೇರಿದೆ. ಗರ್ಲ್ ಫ್ರೆಂಡ್ ನ ಆಸಕ್ತಿ ಮತ್ತು ಇಷ್ಟವನ್ನು ಗಮನದಲ್ಲಿರಿಸಿಕೊಂಡು ಮೋಜಿನ ಚಟುವಟಿಕೆಗಳನ್ನು ಆಯ್ಕೆ ಮಾಡಿ. ಗರ್ಲ್ ಫ್ರೆಂಡ್ ಜತೆಗಿನ ಇಂತಹ ಉಲ್ಲಾಸಮಯ ಮೋಜಿನ ಚಟುವಟಿಕೆಗಳು ಶಾಶ್ವತವಾಗಿ ಪರಿಣಾಮಬೀರುತ್ತವೆ. ಇಂತಹ ಸುಂದರ ನೆನಪುಗಳು ನಿಮ್ಮ ಗರ್ಲ್ ಫ್ರೆಂಡ್ ಜತೆಗೆ ಆರೋಗ್ಯಕರ ಸಂಬಂಧ ನಿರ್ಮಿಸಲು ನೆರವಾಗುತ್ತದೆ.

1. ಪಾರ್ಕ್ ನಲ್ಲಿ ವಾಕ್
ಒಂದು ಪ್ರಶಾಂತವಾದ ಇಳಿಸಂಜೆಯಲ್ಲಿ ವಾಕ್ ಗೆ ಹೋಗುವುದು ಸರಳವಾದರೂ ಅಲ್ಲಿ ಹಲವಾರು ಮೋಜಿನ ಚರ್ಚೆಯೊಂದಿಗೆ ಕಳೆಯುವ ಸಮಯವು ಮರೆಯಲಾಗದ್ದು.

2. ಬೈಕ್ ರೈಡ್
ಗರ್ಲ್ ಫ್ರೆಂಡ್ ಜತೆಗೆ ಬೈಕ್ ನಲ್ಲಿ ರೈಡ್ ಗೆ ಹೋಗುವುದು ತುಂಬಾ ಖುಷಿ ನೀಡುತ್ತದೆ. ಇದು ಆಕೆ ನಿಮ್ಮ ಲವರ್ ಬಾಯ್ ಸ್ವಭಾವ ತೋರಿಸುತ್ತದೆ. ದ್ವಿಚಕ್ರ ವಾಹನದಲ್ಲಿನ ಸವಾರಿಯ ರೋಮಾಂಚನ ತುಂಬಾ ಮೋಜನ್ನುಂಟು ಮಾಡುತ್ತದೆ.

3. ಮೋಜಿನ ಆಟಗಳು
ಸರಳ ಬೋರ್ಡ್ ನ ಆಟದಂತಹ ಮೋಜಿನ ಚಟುವಟಿಕೆ ಆಯ್ಕೆ ಮಾಡಿ ಅಥವಾ ನಿಮ್ಮ ಪ್ರೀತಿಯ ಜೀವನಕ್ಕೆ ಮಸಾಲೆ ಹಚ್ಚಲು ಶನಿವಾರ ರಾತ್ರಿ ಸ್ಟ್ರಿಪ್ ಪೋಕರ್ ಆಡಿ. ಪೇಂಟ್ಬಾಲ್ ಮೈದಾನದಲ್ಲಿ ಜಗಳವಾಡಲು ಆಕೆಯನ್ನು ಆಯ್ಕೆ ಮಾಡಿ.

4. ಈಜು
ಗರ್ಲ್ ಫ್ರೆಂಡ್ ನೊಂದಿಗೆ ಈಜಿನ ಕೊಳಕ್ಕೆ ಇಳಿದಾಗ ಹಲವಾರು ಮೋಜಿನ ಆಟಗಳನ್ನು ಆಡಬಹುದು. ನೀರೆರಚುವ ಮತ್ತು ಮೋಜಿನ ಚೆಂಡಿನ ಆಟಗಳನ್ನು ಹಲವಾರು ಗಂಟೆಗಳವರೆಗೆ ಆಡಬಹುದು.

5. ಡ್ಯುಯೆಟ್ ಹಾಡಿ
ರಾಗಗಳಿಗೆ ಪದಗಳನ್ನು ತುಂಬುವುದು ತುಂಬಾ ಮೋಜಿನದ್ದಾಗಿರುತ್ತದೆ. ನಿಮ್ಮ ಫೇವರಿಟ್ ಪಬ್ ಗೆ ಆಕೆಯನ್ನು ಕರೆದುಕೊಂಡು ಹೋಗಿ ಮತ್ತು ಆಕೆಯೊಂದಿಗೆ ಡ್ಯುಯೆಟ್ ಹಾಡಿ.

6. ಡ್ಯಾನ್ಸ್
ನೀವಿಬ್ಬರು ಒಳ್ಳೆಯ ರೀತಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದರೆ, ವಾರಾಂತ್ಯದ ರಾತ್ರಿಗಳಲ್ಲಿ ಡ್ಯಾನ್ಸ್ ಫ್ಲೋರ್ ಹಂಚಿಕೊಳ್ಳಿ. ನಿಮಗೆ ಡ್ಯಾನ್ಸ್ ಬರುತ್ತಿಲ್ಲ ಮತ್ತು ಕಲಿಯಬೇಕೇಂದಿದ್ದರೆ ಗರ್ಲ್ ಫ್ರೆಂಡ್ ಜತೆಗೆ ಡ್ಯಾನ್ಸ್ ಕ್ಲಾಸ್ ಗೆ ಸೇರಿ ಮತ್ತು ಸಿಗುವ ಆನಂದ ಅನುಭವಿಸಿ.

7. ಚಲಿಸುವ ಚಿತ್ರಮಂದಿರ
ಯಾವಾಗಲೂ ಹೋಗುವ ಥಿಯೇಟರ್ ಗಳಿಗಿಂತ ಚಲಿಸುವ ಚಿತ್ರಮಂದಿರಕ್ಕೆ ನಿಮ್ಮ ಗರ್ಲ್ ಫ್ರೆಂಡ್ ನ್ನು ಕರೆದುಕೊಂಡು ಹೋಗಿ ಮತ್ತು ನಕ್ಷತ್ರಗಳ ಅಡಿಯಲ್ಲಿ ಕುಳಿತುಕೊಂಡು ನೋಡುವುದು ಹೆಚ್ಚಿನ ಖುಷಿ ನೀಡುತ್ತದೆ.

8. ಜತೆಯಾಗಿ ಅಡುಗೆ ಮಾಡಿ
ಜತೆಯಾಗಿ ಅಡುಗೆ ಮಾಡುವುದರಿಂದ ಸಿಗುವ ಮೋಜು ಬೇರೆ ಯಾವುದರಲ್ಲೂ ಸಿಗಲಾರದು. ಅಡುಗೆ ಮನೆ ಅಥವಾ ಪಾತ್ರೆಗಳನ್ನು ಅಲ್ಲಲ್ಲಿ ಹರಡಿ. ಬಳಿಕ ಇದನ್ನು ಜೋಡಿಸುವಾಗ ಒಂಥರಾ ಖುಷಿ ನೀಡತ್ತೆ.

9. ಮೀನು ಹಿಡಿಯುವುದು
ವಾರಾಂತ್ಯದಲ್ಲಿ ಶಿಬಿರಗಳನ್ನು ಹಾಕಿ ಮೀನು ಹಿಡಿಯುವುದು ಮತ್ತು ಇತರ ಸಾಹಸಮಯ ಚಟುವಟಿಕೆಗಳಲ್ಲಿ ಭಾಗಿಯಾಗಿ. ಅಡುಗೆ ಮಾಡಲು ಜತೆಯಾಗಿ ಮೀನು ಹಿಡಿಯುವುದು ತುಂಬಾ ಸಂತಸವನ್ನುಂಟು ಮಾಡುತ್ತದೆ. ಹಿಡಿದ ಮೀನನ್ನು ಅಲ್ಲೇ ಬೆಂಕಿ ಹಾಕಿ ಅಡುಗೆ ಮಾಡಿ ತಿನ್ನಿ. ಆಗ ಸಿಗುವ ಖುಷಿ ಹೇಳಲು ಅಸಾಧ್ಯ.

10. ರಾತ್ರಿ ವೀಡಿಯೋ ಗೇಮ್
ರಾತ್ರಿ ನಡೆಯುವ ಗೇಮಿಂಗ್ ನಲ್ಲಿ ಮೋಜಿನ ಬದಲಾವಣೆ ಮಾಡಿ. ನಿಮ್ಮ ಗರ್ಲ್ ಫ್ರೆಂಡ್ ಜತೆಗೆ ಆಡಲು ಕೆಲವು ಟೆನಿಸ್, ಪಿಂಗ್ ಪಾಂಗ್ ನ್ನು ಆಡಿ ಅಥವಾ ಬಾಕ್ಸ್ ಮತ್ತು ಎಕ್ಸ್ ಬಾಕ್ಸ್ ಮತ್ತು ವರ್ಚುವಲ್ ಬಾಕ್ಸಿಂಗ್ ನಂತಹ ಆಟಗಳನ್ನು ಆಡಿ.



Click it and Unblock the Notifications
