Latest Updates
-
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ
ದಾಂಪತ್ಯದ ಲಯ ತಪ್ಪಿದೆ ಎನ್ನುವ ಎಚ್ಚರಿಕೆಯ ಘಂಟೆಗಳಿವು
ಇತ್ತೀಚೆಗೆ ವಿಚ್ಛೇದನಗೊಂಡ ವಿವಾಹಗಳನ್ನು ಅವಲೋಕಿಸಿದರೆ ಅವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪ್ರಕರಣಗಳು ಪ್ರೇಮವಿವಾಹವೆಂದು ಕಂಡುಬಂದಿದೆ. ಒಬ್ಬರನ್ನೊಬ್ಬರು ಪರಸ್ಪರ ಅರಿತುಕೊಂಡು, ಪ್ರೀತಿಸಿ ಹಿರಿಯರನ್ನು ಒಪ್ಪಿಸಿ ಬಾಳಸಂಗಾತಿಗಳಾದವರು ಮದುವೆಯ ಕೊಂಚ ಕಾಲದ ಬಳಿಕ ಕ್ಷುಲ್ಲುಕ ವಿಷಯಗಳಿಗೆ ಜಗಳವಾಗಿ ಕಡೆಗೆ ಬೇರೆಯಾಗಿದ್ದಾರೆ. ಬೇರೆಯಾಗಲೇಬೇಕೆಂಬ ಕಠಿಣ ನಿರ್ಧಾರ ಕೈಗೊಳ್ಳುವಂತಹ ಕಾರಣಗಳು ಏನು? ಈ ಕಾರಣಗಳಿಗೆ ಸುಲಭ ಪರಿಹಾರವಿರಲಿಲ್ಲವೇ? ಕೊಂಚ ತಾಳ್ಮೆ ತಳೆದಿದ್ದರೆ, ಹಿರಿಯರ ಸೂಕ್ತ ಮಾರ್ಗದರ್ಶನ ಪಡೆದಿದ್ದರೆ, ಕೊಂಚ ನಿಧಾನವಾಗಿ ಯೋಚಿಸಿ ಸಂಧಾನ ಕೈಗೊಂಡಿದ್ದಿದ್ದರೆ, ಪರ್ಯಾಯ ಉಪಾಯಗಳನ್ನು ಕಂಡುಕೊಂಡಿದ್ದಿದ್ದರೆ ಮುರಿದು ಹೋಗಲಿದ್ದ ದಾಂಪತ್ಯ ಜೀವನ ಉಳಿಯಬಹುದಿತ್ತಲ್ಲವೇ?
ಹೌದು, ಯಾರಿಗೇ ಆದರೂ ವಿಚ್ಛೇದನದಂತಹ ನಿರ್ಧಾರ ಖುಷಿ ತರದ ವಿಚಾರ. ಇಬ್ಬರು ವ್ಯಕ್ತಿಗಳ ನಡುವಣ ಯೋಚನಾಲಹರಿ ಯಾವಾಗಲೂ ಒಂದೇ ಸಮನಾಗಿರುವುದಿಲ್ಲ. ಇದೇ ವಿಷಯ ದಂಪತಿಗಳಿಗೂ ಅನ್ವಯಿಸುತ್ತದೆ. ಪತಿ ಅಥವಾ ಪತ್ನಿಯ ದಿನಚರಿಯ ಕೆಲವು ವಿಷಯಗಳಲ್ಲಿ ಯಾವುದಾದರೊಂದು ವಿಷಯದಲ್ಲಿ ಅನುಮಾನ ಬಂದರೆ ಮಾತ್ರ ಚಿಕ್ಕ ವಿರಸ ಉಂಟಾಗುವುದು ಸಹಜ. ಆದರೆ ಇದರಿಂದುಂಟಾದ ಬಿಕ್ಕಟ್ಟನ್ನು ಕೂಡಲೇ ಮಾತುಕತೆಯಿಂದ ಪರಿಹರಿಸಿಕೊಂಡರೆ ಮಾತ್ರ ಬಿಕ್ಕಟ್ಟು ನಿವಾರಣೆಯಾಗುವುದೇ ವಿನಃ ಬಿಕ್ಕಟ್ಟು ಬಿಗಡಾಯಿಸಿದರೆ ಮಾತ್ರ ದಾಂಪತ್ಯದಲ್ಲಿ ಬಿರುಕುಂಟಾಗಿ ಒಡಕಿನತ್ತ ತೆರಳುವುದು ಮಾತ್ರ ಖಚಿತ.
ಸಾಮಾನ್ಯವಾಗಿ ದಾಂಪತ್ಯದಲ್ಲಿ ಬಿರುಕನ್ನು ಗಮನಿಸಬಹುದಾದ ಒಂಭತ್ತು ವಿಷಯಗಳನ್ನು ಕೆಳಗೆ ನೀಡಲಾಗಿದ್ದು ಇದರಲ್ಲಿ ಯಾವುದೇ ಒಂದು ಸತ್ಯವಾದರೂ ಆ ವಿಷಯದಲ್ಲಿ ಎಚ್ಚರಿಕೆ ವಹಿಸುವುದರ ಮೂಲಕ ದಾಂಪತ್ಯವನ್ನು ರಕ್ಷಿಸಿಕೊಳ್ಳಬಹುದಾಗಿದೆ.

1) ವಿವಾಹಪೂರ್ವ ವಿಷಯಗಳನ್ನು ಕೆದಕುವುದು, ಹೆಸರು ಹಿಡಿದು ಕರೆಯುವುದು, ಗಂಡನ/ಹೆಂಡತಿಯ ಮನೆಯವರ ಕುರಿತು ಹೀಯಾಳಿಕೆಯ ಮಾತುಗಳು.
2) ದಿನನಿತ್ಯದ ಚಿಕ್ಕ ಚಿಕ್ಕ ವಿಷಯಗಳನ್ನು ಕೆದಕಿ ಜಗಳವಾಡಲು ತೊಡಗುವುದು, ಒಬ್ಬರನ್ನೊಬ್ಬರು ತಪ್ಪಿಸಿಕೊಳ್ಳಲು ಯತ್ನಿಸುವುದು, ಮನೆಗೆ ಬರದೇ ಇರುವುದು ಅಥವಾ ತಡವಾಗಿ ಬರುವುದು, ಇಬ್ಬರ ನಡುವೆ ಇರುವ ಚಿಕ್ಕ ವಿರಸಕ್ಕೂ ಪರಿಹಾರವೇ ಇಲ್ಲವೆನ್ನುವಂತೆ ವರ್ತಿಸುವುದು.
3) ಇಬ್ಬರೂ ಕೂಡಿ ಒಮ್ಮತದ ನಿರ್ಧಾರಕ್ಕೆ ಬರದೇ ಇರುವುದು, ತಾನು ಪ್ರತಿಪಾದಿಸಿದ್ದೇ ಸರಿ ಎಂದು ಇಬ್ಬರೂ ವಾದಿಸುವುದು. ಇದರಲ್ಲಿ ಗಂಡ ಹೆಂಡಿರ ನಡುವಣ ಅಹಮಿಕೆ ಅಥವಾ ಒಣಪ್ರತಿಷ್ಠೆಯೇ (ego) ಹೊರತು ಬೇರೆ ಕಾರಣವಿಲ್ಲ.
4) ಸಂಗಾತಿಯ ಏಳ್ಗೆಯಿಂದ ಹೊಟ್ಟೆಕಿಚ್ಚು ಪಡುವುದು. ಇಬ್ಬರ ನಡುವೆ ಉತ್ತಮ ಸ್ಪರ್ಧೆ ಇಲ್ಲದೇ ಇರುವುದು, ತನಗೆ ಗೊತ್ತಿದ್ದ ಹಾಗೂ ಸಂಗಾತಿಗೆ ಅಗತ್ಯವಿದ್ದ ಮಾಹಿತಿಯನ್ನು ನೀಡದೇ ಇರುವುದು, ಸಂಗಾತಿಗೆ ಹೇಳಲೇಬೇಕಾಗಿರುವ ವಿಷಯಗಳನ್ನು ಗುಟ್ಟಾಗಿರಿಸುವುದು.
5) ಇಬ್ಬರಲ್ಲೊಬ್ಬರು ಕೇವಲ ತಮ್ಮ ಬಗ್ಗೆ ಮಾತ್ರ ಯೋಚಿಸುವುದು. ಪರಿಣಾಮವಾಗಿ ಸಂಗಾತಿ ಉಪೇಕ್ಷಿತನಾದ/ಳಾದ ಭಾವನೆಯಿಂದ ಬಳಲಿ ಕುಟುಂಬಕ್ಕೆ ಸೇರ್ಪಡೆಯಾಗಲು ಅನರ್ಹನು/ಳು ಎಂಬ ನಿರ್ಧಾರಕ್ಕೆ ಬರುವುದು. ಈ ಭಾವನೆ ಬರುವುದು ಮಾತ್ರ ಅತ್ಯಂತ ಆತಂಕಕಾರಿ.
6) ದಾಂಪತ್ಯದ ಹೊರಗೆ ಸಂಗ ನಡೆಸುವುದು. ಎಷ್ಟೇ ಕಷ್ಟವಾದರೂ ದಾಂಪತ್ಯದಿಂದ ಹೊರಗಿನ ಸಂಬಂಧದಿಂದ ದೂರವಿದ್ದಷ್ಟು ಒಳ್ಳೆಯದು. ಗುಟ್ಟಾಗಿಡಲು ಸಾಧ್ಯವೇ ಇಲ್ಲದ ಈ ಸಂಗ ಮದುವೆಯನ್ನು ಮುರಿಯುವುದು ಮಾತ್ರ ಖಂಡಿತ.
7) ಲೈಂಗಿಕಕ್ರಿಯೆಯಲ್ಲಿ ಇಷ್ಟವಿಲ್ಲದೇ ಭಾಗವಹಿಸುವುದು ಅಥವಾ ಭಾಗವಹಿಸಲು ಆದಷ್ಟು ಹಿಂದೇಟು ಹಾಕುವುದು. ಪ್ರೀತಿಯೇ ಇಲ್ಲದ ಮಿಲನ ಕೇವಲ ಯಾಂತ್ರಿಕ ಸಮಾಗಮ.
8) ಜಗಳಕ್ಕೆ ಕಾರಣವಾದ ವಿಷಯಗಳನ್ನು ಅಂದೇ ಪರಾಮರ್ಶಿಸಿ ಪರಿಹರಿಸಿಕೊಳ್ಳಲು ಒಲವು ತೋರದೇ ಇರುವುದು. ಸಮಸ್ಯೆಗಳಿಂದ ಓಡಿ ಹೋಗುವುದು ಅಥವಾ ಸಮಸ್ಯೆಗಳನ್ನು ಎದುರಿಸಲು ಒಲವು ತೋರದೇ ಇರುವುದು. ಹೀಗೇ ಒಂದರ ಹಿಂದೊಂದು ಜಗಳಗಳು ಪೇರುತ್ತಾ ಹೋಗಿ ಒಂದು ದಿನ ಎಲ್ಲವೂ ಒಮ್ಮೆಲೇ ಢಮಾರನೇ ಬಿದ್ದಾಗ ಒಡೆಯುವ ದಾಂಪತ್ಯ ಸುಲಭಕ್ಕೆ ಪರಿಹಾರವಾಗದು.
9) ಇಬ್ಬರ ನಡುವೆ ಮಾತುಕತೆ ಬಂದ್ ಆಗುವುದು. ನೇರವಾಗಿ ಮಾತನಾಡುವುದು ಬಿಡಿ, ಈಮೇಲ್ ಅಥವಾ ಮೊಬೈಲ್ ಮೆಸೇಜ್ ಮೂಲಕವಾದರೂ " ಹೇಗಿದ್ದೀರಿ" ಎಂದು ಕೇಳುವ ಸೌಜನ್ಯವನ್ನೂ ತೋರುವುದಿಲ್ಲ. ಮನೆಯಲ್ಲಿದ್ದೂ ಒಂದೂ ಮಾತು ಆಡದ ದಂಪತಿಗಳ ದಾಂಪತ್ಯ ಕಡೆಯ ಹಂತದಲ್ಲಿದೆ ಎಂದೇ ತಿಳಿಯಬೇಕು.



Click it and Unblock the Notifications











