Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅಣ್ಣನೊಬ್ಬ ಇದ್ದಾನೆ ಎಂದರೆ ತಂಗಿಗೆ ಅದೇನೋ ಸಮಾಧಾನ
ಒಂದೂರಿನ ಅಕ್ಕ ತಮ್ಮ. ಅಕ್ಕ ಸ್ವಲ್ಪ ತಮ್ಮನಿಗಿಂತ ದೊಡ್ಡವಳು ತಮ್ಮ ಬಹಳವೇ ಸಣ್ಣವನು ಆ ಅಕ್ಕ ಇನ್ನಿಲ್ಲಾ ಎಂಬಂತೆ ತಮ್ಮನನ್ನು ಗೋಳುಹೊಯ್ದುಕೊಳ್ಳುತ್ತಾ ಇದ್ದಳು ಪ್ರತಿ ದಿನ ತಮ್ಮನ ಕಣ್ಣಲ್ಲಿ ನೀರು ಬಾರದೆ ದಿನ ಮುಗಿಯುತ್ತಾ ಇರಲಿಲ್ಲ. ಆದರೆ ಮರುದಿನ ಅದೇ ನಗುಮೊಗ ಮತ್ತದೇ ಜಗಳಗಳು ಅದೇ ಅಳು. ತಮ್ಮನಿಗೆ ತನ್ನ ಅಕ್ಕನ ಮೇಲೆ ಎಲ್ಲಿಲ್ಲದ ಸಿಟ್ಟು ಆದರೇನು ಮಾಡೋದು ಜಗಳಕ್ಕೆ ನಿಲ್ಲಲು ತಾನಿನ್ನೂ ಸಣ್ಣವನು ಎಂದು ಗೊತ್ತು.
ಅದಕ್ಕೆ ಸರಿಯಾದ ಸಮಯಕ್ಕೆ ಕಾಯುತ್ತಾ ಇರುತ್ತಿದ್ದ. ಅಕ್ಕ ಸಂಗೀತ ಅಭ್ಯಾಸಕ್ಕೆ ಕೂತದ್ದೇ ತಡ ತಮ್ಮ ಅಲ್ಲಿ ಹಾಜರು. ಸಂಗೀತ ಕೇಳಲಿಕ್ಕಲ್ಲ. ರಾಗವನ್ನು ವಿರಾಗ ಮಾಡಲು. ಅಕ್ಕನಿಗೆ ಕೀಟಲೆ ಕೊಡಲು. ಆದರೆ ಅಕ್ಕ ತಮ್ಮನಿಗೆ ಸತಾಯಿಸುವಾಗ ಆಗಲಿ ಅಥವಾ ತಮ್ಮ ಅಕ್ಕನಿಗೆ ಕೀಟಲೆ ಕೊಡುವಾಗ ಆಗಲಿ ಅಮ್ಮ ಅಥವಾ ಅಜ್ಜಿ ಬಂದು ಯಾರ ಕಡೆಗಾದರೂ ವಾದ ಮಾಡಲು ಆರಂಭಿಸಿದರೆ ಅಕ್ಕ ತಮ್ಮ ಒಂದೇ ಪಾರ್ಟಿ. ತಮ್ಮ ಸಣ್ಣವನು ಎಂದು ಬಂದ ಅಜ್ಜಿಗೆ ಯಾಕಾದರೂ ಇವರಿಬ್ಬರ ನಡುವೆ ಬಂದೆನೋ ಎಂದು ಅನ್ನಿಸುವಂತೆ ಮಾಡುತ್ತಿದ್ದರು.

ಇದು ಕೇವಲ ಒಂದೂರಿನ ಅಕ್ಕ ತಂಗಿ ಸಂಬಂಧದ ಮಾತಲ್ಲ ಎಲ್ಲಾ ಕಡೆಗೂ ಹೀಗೇ ಯಾವ ಸಂಬಂಧದಲ್ಲಿ ಅತೀ ಹೆಚ್ಚು ಜಗಳವಾಗಿದೆ ಹಾಗೂ ಯಾವ ಸಂಬಂಧದಲ್ಲಿ ಅತೀ ಹೆಚ್ಚಿನ ಪ್ರೀತಿ ಇದೆ ಎಂದು ಕೇಳಿದರೆ ಬಹುಶಃ ಎರಡಕ್ಕೂ ಸಹೋದರ ಸಹೋದರಿ ಸಂಬಂಧ ಎಂಬ ಉತ್ತರ ಬರಬಹುದು. ಜಗಳ ಆಡಬೇಕು ಎಂದು ಜಗಳವಾಡುವುದಲ್ಲ. ಆದರೆ ಪ್ರೀತಿ ಇದ್ದಲ್ಲಿ ಜಗಳವೂ ಜಾಸ್ತಿ ಎಂಬಂತೆ ಇಲ್ಲೂ.
ಮನೆಯಲ್ಲಿ ಯಾರಿಗೂ ತಿಳಿಯದ ವಿಷಯ ಸಹೋದರ ಸಹೋದರಿಯರ ನಡುವೆ ತಿಳಿದಿರುತ್ತದೆ. ತಮ್ಮ ಸೇದಿದ ಮೊದಲ ಸಿಗರೇಟು ಅಕ್ಕನಿಗೆ ಮಾತ್ರ ಗೊತ್ತಾದರೆ ಅಕ್ಕನ ಬಾಯ್ ಫ್ರೆಂಡ್ ತಮ್ಮನಿಗೆ ಮಾತ್ರ ಗೊತ್ತಿರುತ್ತದೆ. ತಂಗಿ ಶಾಲೆಗೆ ಹೋಗಲು ಬೇಜಾರಾಗಿ ಹೊಟ್ಟೆ ನೋವು ಎಂದು ಸುಳ್ಳು ಹೇಳಿದ್ದು ಅಣ್ಣ ಬಾಯಿ ಬಿಡುವುದಿಲ್ಲ ಅಣ್ಣ ಪಕ್ಕದ ಮನೆಯ ತೋಟದಿಂದ ಹಣ್ಣನ್ನು ಕದ್ದು ತಂದಿದ್ದು ತಂಗಿ ಹೇಳುವುದಿಲ್ಲ. ಹಾಗೂ ಇಂತಹ ಗುಟ್ಟುಗಳನ್ನು ಗುಟ್ಟಾಗಿಡಲು ಆಮಿಷಗಳು ಇಲ್ಲದಿಲ್ಲ.
ಇಂತಹ ಸುಂದರ ಸಂಬಂಧದ ಆಚರಣೆಯ ದಿನವೇ ರಕ್ಷಾ ಬಂಧನ. ಸಹೋದರಿ ಕಟ್ಟಿದ ರಕ್ಷಾ ಬಂಧನ ಕೈಗೆ ಕಟ್ಟಿಕೊಳ್ಳಲು ಅಣ್ಣನಿಗೆ ಅದೇನೋ ಹೆಮ್ಮೆ. ಸಹೋದರ ಏನು ಗಿಫ್ಟ್ ಕೊಡುತ್ತಾನೆ ಎಂದು ತಿಳಿಯಲು ಸಹೋದರಿಗೆ ಕಾತರ. ಮಾರುಕಟ್ಟೆಯಲ್ಲಿ ಎಷ್ಟೇ ಸುತ್ತಾಡಿದರೂ ಅಣ್ಣನ ಕೈಗೆ ಸರಿಹೊಂದುವ ಚೆಂದ ಕಾಣುವ ರಕ್ಷಾ ಬಂಧನವೇ ಕಾಣದು. ಬೇರೆ ಯಾವುದೇ ಕಾರಣಕ್ಕೂ ಮಾರುಕಟ್ಟೆಯಲ್ಲಿ ಅಷ್ಟೊಂದು ಸುತ್ತಾಡದ ತಂಗಿ ಈ ದಿನ ಇಷ್ಟವಾದ ಸಮಾಧಾನವಾಗುವ ರಕ್ಷಾ ಬಂಧನ ಸಿಗುವ ತನಕ ಬಿಡುವುದಿಲ್ಲ.
ಈ ಸಂಬಂಧ ಕೇವಲ ಸಹೋದರ ಸಹೋದರಿ ಎಂಬ ಸಂಬಂಧಕ್ಕೆ ತನ್ನನ್ನು ಸೀಮಿತವಾಗಿಸಿಲ್ಲ. ಒಂದು ಕಡೆ ತಂಗಿಗೆ ಅಣ್ಣನೇ ತಂದೆಯ ಸ್ಥಾನದಲ್ಲೂ ಇರುತ್ತಾನಾದರೆ ಇನ್ನೊಂದು ಕಡೆ ಅಣ್ಣನಿಗೆ ಜಗತ್ತಿನ ಅತ್ಯುತ್ತಮ ಗೆಳೆಯ ತನ್ನ ತಂಗಿಯೇ ಆಗಿರುತ್ತಾಳೆ. ಏನೇ ವಿಚಾರವಿದ್ದರೂ ತಂದೆ ತಾಯಿಯ ಬಳಿ ಹೋಗುವುದಕ್ಕೆ ಮುನ್ನ ಅಣ್ಣ ತಂಗಿಯರಲ್ಲಿ ಒಂದು ಸುತ್ತಿನ ಮಾತುಕತೆಯಾದ ಬಳಿಕವೇ ಮುಂದೆ ಹೋಗುವುದು. ಯಾವುದೇ ಸಮಯದಲ್ಲಿ ಯಾವುದೇ ಅಗತ್ಯವಿದ್ದರೂ ಅಣ್ಣನೊಬ್ಬ ಇದ್ದಾನೆ ಎಂದರೆ ತಂಗಿಗೆ ಅದೇನೋ ಸಮಾಧಾನ. ಅಂಗಡಿಗಳ ಮುಂದೆ ಇಂದು ಕಾಣುವ ರಕ್ಷಾ ಬಂಧನಗಳ ಬಣ್ಣಗಳಂತೆ ಈ ಸಂಬಂಧವೂ ಎಂದಿಗೂ ಎವರ್ ಗ್ರೀನ್ ಮತ್ತು ಕಲರ್ ಫುಲ್.



Click it and Unblock the Notifications
