ಈ ಮುನಿಸು ಎಲ್ಲಿಗೆ ಕೊಂಡೊಯ್ಯುತ್ತದೆ ಗೊತ್ತಾ?

By Super

ಯಾವುದೇ ಸಂಬಂಧಗಳಾಗಿರಲಿ ಅದು ಗಟ್ಟಿಯಾಗಿದ್ದರೆ ಮಾತ್ರ ಅದಕ್ಕೊಂದು ಬೆಲೆಯಿರುತ್ತದೆ. ಸಂಬಂಧಗಳು ಗಟ್ಟಿಯಾಗಿದ್ದಾಗ ಮಾತ್ರ ಜೀವನದಲ್ಲಿ ಸುಖ-ಶಾಂತಿ ನೆಲೆಸಲು ಸಾಧ್ಯ. ಕೆಲವು ಸಂಬಂಧಗಳಲ್ಲಿ ಸಂವಹನ ಕೊರತೆಯಿಂದ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುತ್ತದೆ. ಈ ಭಿನ್ನಾಭಿಪ್ರಾಯಕ್ಕೆ ಹಲವಾರು ಕಾರಣಗಳಿವೆ. ಕೆಲವೊಮ್ಮೆ ಸಣ್ಣ ವಿಷಯಕ್ಕೂ ಸಂಬಂಧ ಕೊನೆಯಾಗಬಹುದು. ಚಾಕಚಕ್ಯತೆಯಿಂದ ಸಂವಹನ ನಿರ್ವಹಿಸುವುದನ್ನು ಕಲಿತುಕೊಂಡರೆ ತುಂಬಾ ಒಳ್ಳೆಯದು.

ಅಭಿಪ್ರಾಯ ವ್ಯತ್ಯಾಸ ಸಂವಹನದ ಕೊರತೆಗೆ ಪ್ರಮುಖ ಕಾರಣವಾಗಿದೆ. ಸಂಗಾತಿಗಳ ನಡುವೆ ಭಿನ್ನಾಭಿಪ್ರಾಯ ಬರುವುದು ಸಹಜ, ಆದರೆ ಅದನ್ನು ಸರಿ ಪಡಿಸದಿದ್ದರೆ ಅದು ನೀವು ಮಾಡುವ ದೊಡ್ಡ ತಪ್ಪು! ಗಂಡ-ಹೆಂಡತಿ ನಡುವೆ ಮಾತುಕತೆ ಕಮ್ಮಿಯಾದಷ್ಟು, ಅವರಿಬ್ಬರ ಬಂಧವೂ ಸಡಿಲವಾಗುವುದು, ಅದಕ್ಕೆ ಅವಕಾಶಕೊಡಬೇಡಿ. ನಿಮ್ಮ ಬಾಂಧವ್ಯದಲ್ಲಿ ಬಿರುಕುಗಳು ಮೂಡಿದೆ ಅನ್ನುವ ಸೂಚನೆಗಳು ಕೆಳಗಿನಂತೆ ಇರುತ್ತದೆ. ಈ ಲಕ್ಷಣಗಳು ಕಂಡು ಬಂದ ತಕ್ಷಣ ಆ ಸಮಸ್ಯೆ ಪರಿಹರಿಸಲು ತಕ್ಷಣ ಪ್ರಯತ್ನಿಸಿ, ಇಲ್ಲದಿದ್ದರೆ ಕಾಲ ಮಿಂಚಿ ಹೋಗಬಹುದು.

ಸಂಗಾತಿಯ ಭಿನ್ನ ವರ್ತನೆ

ಸಂಗಾತಿಯ ಭಿನ್ನ ವರ್ತನೆ

* ನಿಮ್ಮ ಸಂಗಾತಿ ಹಿಂದೆ ಆತ/ಆಕೆ ವರ್ತಿಸುತ್ತಿರುವುದಕ್ಕಿಂತ ಭಿನ್ನವಾಗಿ ವರ್ತಿಸುತ್ತಿದ್ದರೆ ಸಂವಹನದ ಮೂಲಕ ಇದನ್ನು ಸರಿಪಡಿಸಬಹುದು ಮತ್ತು ಕೆಲವೊಮ್ಮೆ ಇದು ದುಃಖದ ಫಲಿತಾಂಶಕ್ಕೂ ಕಾರಣವಾಗಹುದು.

 ಸಂಗಾತಿಯ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡಿದ್ದರೆ

ಸಂಗಾತಿಯ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡಿದ್ದರೆ

* ನಿಮ್ಮ ಸಂಗಾತಿಯನ್ನು ತಪ್ಪಾಗಿ ಅರ್ಥೈಸಿದರೆ ಆಗ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಇದರಿಂದ ಊಹೆ ಮಾಡುವುದನ್ನು ನಿಲ್ಲಿಸಿ ಹಾಗೂ ಸ್ಪಷ್ಟ ಚಿತ್ರಣ ಪಡೆಯಲು ಪ್ರಯತ್ನಿಸಿ.

 ಹಳೆ ನೆನಪು ಬೇಡ

ಹಳೆ ನೆನಪು ಬೇಡ

* ನಿಮ್ಮ ಹಿಂದಿನ ಅನುಭವಗಳು ಅಪ್ರಾಮಾಣಿಕವಾಗಿದ್ದರೆ ಅದನ್ನು ಹಂಚಿಕೊಳ್ಳಬೇಡಿ. ಹಳೆ ಅನುಭವಗಳನ್ನು ಇಟ್ಟುಕೊಂಡು ಹೊಸ ಸಂಗಾತಿ ಜತೆ ಸ್ನೇಹಶೀಲರಾಗಿರಲು ಪ್ರಯತ್ನಿಸಿದರೆ ಅದು ಹೊಸ ಸಮಸ್ಯೆಗಳನ್ನು ಹುಟ್ಟುಹಾಕಬಹುದು.

ಸಂಗಾತಿಯ ತಪ್ಪುಗಳನ್ನೇ ಹುಡುಕುವುದು ನಿಮ್ಮ ಕೆಲಸವಾಗದಿರಲಿ

ಸಂಗಾತಿಯ ತಪ್ಪುಗಳನ್ನೇ ಹುಡುಕುವುದು ನಿಮ್ಮ ಕೆಲಸವಾಗದಿರಲಿ

* ಸಂಗಾತಿಯ ವೈಫಲ್ಯಗಳನ್ನು ಹುಡುಕುವ ಬದಲು ಗೌರವ ಕೊಡಲು ಪ್ರಯತ್ನಿಸಿ. ಸಂಗಾತಿಗೆ ಗೌರವ ಕೊಡದಿದ್ದರೆ ಸ್ಪಷ್ಟ ಸಂವಹನ ಸಾಧ್ಯವಿಲ್ಲ.

3ನೇ ವ್ಯಕ್ತಿಗೆ ಅವಕಾಶ ಕೊಡಬೇಡಿ

3ನೇ ವ್ಯಕ್ತಿಗೆ ಅವಕಾಶ ಕೊಡಬೇಡಿ

* ಸಂವಹನದಿಂದ ಯಾವುದೇ ಸಮಸ್ಯೆ ಪರಿಹಾರವಾಗದಿದ್ದರೆ ಆಗ ಮೂರನೇ ವ್ಯಕ್ತಿಗೆ ಪ್ರವೇಶ ಕೊಡಬೇಡಿ. ಇದು ನಿಮ್ಮ ಭಿನ್ನಾಭಿಪ್ರಾಯವನ್ನು ಹೆಚ್ಚಿಸಿ ಸಂಬಂಧಕ್ಕೂ ಮಾರಕವಾಗಬಹುದು.

ಸ್ಪಷ್ಟ ನಿರೀಕ್ಷೆ ಇರಲಿ

ಸ್ಪಷ್ಟ ನಿರೀಕ್ಷೆ ಇರಲಿ

* ಸ್ಪಷ್ಟ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಇದು ಸಂಬಂಧವನ್ನು ಉತ್ತಮಪಡಿಸಿ, ವಾದಗಳಿಲ್ಲದಂತೆ ಮಾಡುತ್ತದೆ.

ಅಭಿರುಚಿಯ ವ್ಯತ್ಯಾಸ

ಅಭಿರುಚಿಯ ವ್ಯತ್ಯಾಸ

* ನಿಮ್ಮ ಸಂಗಾತಿ ಭಿನ್ನ ವಾತಾವರಣದಲ್ಲಿ ಬೆಳದವರಾಗಿದ್ದರೆ ಅವರು ಪ್ರತ್ಯೇಕ ಅಭಿರುಚಿ ಹಾಗೂ ಭಾವನೆಗಳನ್ನು ಹೊಂದಿರಬಹುದು. ಅವರ ಭಾವನೆಗಳನ್ನು ಬದಲಾಯಿಸುವ ಬದಲು ಗೌರವಿಸಲು ಪ್ರಯತ್ನಿಸಿ.

ಸಂಗಾತಿಯ ತಟಸ್ಥ ಮನೋಭಾವ

ಸಂಗಾತಿಯ ತಟಸ್ಥ ಮನೋಭಾವ

* ನಿಮ್ಮ ಸಂಗಾತಿ ತಟಸ್ಥ ಅಥವಾ ನಿಮ್ಮ ಭಾವನೆಗಳಿಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದಿದ್ದರೆ ಆ ವ್ಯಕ್ತಿ ಜೀವನದಲ್ಲಿ ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ದಾರೆಂದರ್ಥ. ನಿಮ್ಮ ಸಂಗಾತಿ ಇಂತಹ ಲಕ್ಷಣಗಳನ್ನು ತೋರಿದರೆ ಇದರೊಂದಿಗೆ ಯಾವ ರೀತಿ ವ್ಯವಹರಿಸಬೇಕೆಂದು ಯೋಚಿಸಿ ಅಥವಾ ಈ ಸಂಬಂಧವನ್ನು ನಿಜವಾಗಿಯೂ ಮುಂದುವರಿಸಲು ಬಯಸಿದ್ದೀರಾ? ಇಂತಹ ಲಕ್ಷಣಗಳಿರುವ ಸಂಗಾತಿ ಜತೆ ಸಂಬಂಧ ಮುಂದುವರಿಸುವುದು ತುಂಬಾ ಕಠಿಣ.

ಸೂಕ್ತ ಅಭಿಪ್ರಾಯ

ಸೂಕ್ತ ಅಭಿಪ್ರಾಯ

* ವಿವಿಧ ವಿಷಯಗಳ ಬಗ್ಗೆ ಸಂಗಾತಿಗಳಿಬ್ಬರಿಗೆ ಸೂಕ್ತ ಪ್ರಜ್ಞೆ ಇರಬೇಕು ಮತ್ತು ಇದರಿಂದ ಸಂವಹನದ ಮೇಲೆ ವಿಶ್ವಾಸದ ಕೊರತೆ ನೀಗಿಸಲು ನೆರವಾಗುತ್ತದೆ.

X
Desktop Bottom Promotion