Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸುಂದರ ದಾಂಪತ್ಯ ಜೀವನದ 7 ರಹಸ್ಯಗಳು - ಜಾತ್ಯತೀತ
ದಿನದಿಂದ ದಿನಕ್ಕೆ ವಿಚ್ಛೇದನಗಳು ಜಾಸ್ತಿಯಾಗುತ್ತಿವೆ. ಈ ರೀತಿ ಹೆಚ್ಚಾಗುತ್ತಿರುವ ವಿಚ್ಛೇದನ ಹಾಗೂ ಮದುವೆಯ ನಂತರ ಅಕ್ರಮ ಸಂಬಂಧ ಇವೆಲ್ಲವನ್ನು ನೋಡುತ್ತಿರುವ ಯುವ ಜನಾಂಗವೂ ಮದುವೆಯ ಮೇಲೆ ನಂಬಿಕೆ ಇಲ್ಲ ಎಂದು ಹೇಳುತ್ತಿದ್ದರೆ ಮತ್ತೆ ಕೆಲವು ಬಿಸಿ ರಕ್ತದವರು ಲೀವ್ ಇನ್ ರಿಲೇಷನ್ ಶಿಪ್ ಬೆಸ್ಟ್ ಅನ್ನುತ್ತಿದ್ದಾರೆ.
ಕೊನೆಯವರೆಗೂ ಜೊತೆಯಲ್ಲಿ ಬಾಳುತ್ತೇವೆ ಎಂದು ಮದುವೆಯಾಗಿ ಸ್ವಲ್ಪ ಕಾಲದಲ್ಲಿ ಸಂಸಾರದಲ್ಲಿ ಅಪಸ್ವರಗಳು ಎದ್ದರೆ ಸಂಸಾರ ಅನ್ನುವುದು ಬೀದಿಗೆ ಬೀಳುತ್ತದೆ.ಸಂಸಾರದಲ್ಲಿ ಮೇಲೆ ಸಣ್ಣ-ಪುಟ್ಟ ಜಗಳಗಳು ಕಂಡು ಬರುವುದು ಸಾಮಾನ್ಯ. ಆದರೆ ಆ ಸಮಸ್ಯೆಗಳನ್ನು ಅಲ್ಲಿಗೆ ಪರಿಹರಿಸಿದರೆ ಜೀವನ ಸುಂದರವಾಗಿ ನಡೆಯುವುದು. ದಾಂಪತ್ಯ ಜೀವನ ಸುಂದರವಾಗಿರಬೇಕೆಂದರೆ ಈ ಕೆಳಗಿನ ಗುಣಗಳು ಗಂಡ-ಹೆಂಡತಿ ಇಬ್ಬರಲ್ಲೂ ಇರಬೇಕಾಗುತ್ತದೆ.

ಭಾವನೆಗಳನ್ನು ಹಂಚಿಕೊಳ್ಳುವುದು: ಗಂಡ-ಹೆಂಡತಿ ಪರಸ್ಪರ ಮನಬಿಚ್ಚಿ ಮಾತನಾಡಬೇಕು. ಎಷ್ಟೋ ಸಂಸಾರಗಳಲ್ಲಿ ಗಂಡ-ಹೆಂಡತಿಯ ನಡುವೆ ಮಾತುಕತೆನೇ ಇರುವುದಿಲ್ಲ. ಇಬ್ಬರೂ ತಾವಾಯಿತು, ತಮ್ಮ ಕೆಲಸವಾಯಿತು ಎಂದು ಇದ್ದು ಬಿಡುತ್ತಾರೆ. ಈ ರೀತಿಯ ನಡುವಳಿಕೆ ಸಂಸಾರದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಎಷ್ಟೇ ಬ್ಯೂಸಿಯಾಗಿದ್ದರೂ ದಿನದಲ್ಲಿ ಒಂದು 10 ನಿಮಿಷವಾದರೂ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮೀಸಲಿಡಿ.
ಗೌರವ: ಗಂಡನಿಗೆ ಹೆಂಡತಿ ಮೇಲೆ, ಹೆಂಡತಿಗೆ ಗಂಡನ ಮೇಲೆ ಗೌರವ ಇರಬೇಕು. ಯಾವುದೇ ಕಾರಣಕ್ಕೂ ದಬ್ಬಾಳಿಕೆ ಮಾಡಬಾರದು, ಹಿಂಸೆ ಮಾಡಬಾರದು. ಮನೆಯವರ ಮುಂದೆ ಅಥವಾ ಸ್ನೇಹಿತರ ಮುಂದೆ ನಿಮ್ಮ ಬಾಳ ಸಂಗಾತಿಯನ್ನು ಅವಮಾನ ಮಾಡಬಾರದು.
ಹೊಂದಾಣಿಕೆ: ನನ್ನದೇ ಸರಿ ಎಂಬ ಹಠ ಸಾಧಿಸುವ ಗುಣವನ್ನು ಸಂಸಾರದಲ್ಲಿ ತೋರಿಸಬಾರದು. ಸಣ್ಣ-ಪುಟ್ಟ ತಪ್ಪುಗಳನ್ನು ದೊಡ್ಡದು ಮಾಡದೇ ಪರಸ್ಪರ ಬಿಟ್ಟುಕೊಟ್ಟು ಬಾಳುವುದನ್ನು ಕಲಿತರೆ ದಾಂಪತ್ಯ ಜೀವನ ಮಧುರವಾಗಿರುತ್ತದೆ.
ಮುಚ್ಚುಮರೆ ಇರಬಾರದು: ಯಾವುದೇ ವಿಷಯಕ್ಕೆ ಮುಚ್ಚುಮರೆ ಇರಬಾರದು, ಮುಚ್ಚು ಮರೆಯಿಂದಾಗಿ ಸಂಶಯ ರೋಗ ಶುರುವಾಗುತ್ತದೆ.
ಅತ್ತೆ-ಮಾವನ ಜೊತೆ ಒಳ್ಳೆಯ ಸಂಬಂಧ: ಅತ್ತೆ-ಸೊಸೆ ಪ್ರೀತಿಯಿಂದ ಬಾಳಬೇಕು ಎಂದು ಹೇಳುವುದು ಸುಲಭ. ಆದರೆ ಸಾಕಷ್ಟು ಜನರ ಜೀವನದಲ್ಲಿ ವಾಸ್ತವನೇ ಬೇರೆಯಾಗಿರುತ್ತದೆ. ಆದರೂ ಸಂಬಂಧಗಳನ್ನು ಚೆನ್ನಾಗಿ ಇಟ್ಟಿರಲು ಪ್ರಯತ್ನಿಸಬೇಕು.
ರೊಮ್ಯಾನ್ಸ್: ದಾಂಪತ್ಯ ಜೀವನದಲ್ಲಿ ರೊಮ್ಯಾನ್ಸ್ ಮುಖ್ಯವಾಗಿರುವುದರಿಂದ ಅದನ್ನು ಕಡೆಗಣಿಸಬೇಡಿ.



Click it and Unblock the Notifications
