Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಾನೊಂದು ತೀರ, ನೀನೊಂದು ತೀರ, ಈ ಪ್ರೀತಿ ಮಧುರ

ಹಿರಿಯರು ಗಂಡ ಹೆಂಡತಿ ಜೊತೆಯಲ್ಲಿಯೇ ಬಾಳಬೇಕೆಂದು ಹೇಳುತ್ತಾರೆ. ಕಾರಣವಿಷ್ಟೆ ದೂರದಲ್ಲಿದ್ದರೆ ಪರಸ್ಪರ ಮಾತುಕತೆ ಕಮ್ಮಿಯಾಗುತ್ತದೆ. ಸಣ್ಣ ಪುಟ್ಟ ವಿಷಯಗಳಿಗೆ ಜಗಳವಾಗಬಹುದು ಅಥವಾ ಕೆಲವರು ಅನೈತಿಕ ಸಂಬಂಧ ಇಟ್ಟುಕೊಳ್ಳಬಹುದು. ಈ ಎಲ್ಲಾ ಸಮಸ್ಯೆಗಳನ್ನು ತಡೆಯಲು ಗಂಡ ಹೆಂಡತಿ ಜೊತೆಯಲ್ಲಿ ಇರಬೇಕು ಎಂದು ಹೇಳುತ್ತಾರೆ. ಜೊತೆಗಿದ್ದರೆ ಒಬ್ಬರನ್ನೊಬ್ಬರು ಮತ್ತಷ್ಟು ಚೆನ್ನಾಗಿ ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ.
ಹಾಗಂತ ಗಂಡ ಒಂದು ಕಡೆ ಹೆಂಡತಿ ಒಂದು ಕಡೆ ಇದ್ದು ವಾರದಲ್ಲಿ ಅಥವಾ ತಿಂಗಳಿಗೆ ಒಮ್ಮೆ ಬರುವವರ ಎಷ್ಟೊ ಸಂಸಾರ ಹಾಲು ಜೇನಿನಂತೆ ಇರುತ್ತದೆ. ದೂರವಿದ್ದರೂ ಹೇಗೆ ಒಬ್ಬರಿಗೊಬ್ಬರು ಇಷ್ಟು ಪ್ರೀತಿಯಿಂದ ಇದ್ದಾರೆ ಎಂದು ಸ್ವಲ್ಪ ಗಮನ ಹರಿಸಿ ನೋಡಿದಾಗ ಗೊತ್ತಾಗುತ್ತದೆ ಆ ದಂಪತಿಗಳ ನಡುವೆ ಯಾವುದೇ ಮುಚ್ಚು ಮರೆ ಇರುವುದಿಲ್ಲ, ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಂಡಿರುತ್ತಾರೆ.
ಅದರಲ್ಲೂ ಮಹಿಳೆಯರು ಯಾವಾಗಲೂ ತನಗೆ ತನ್ನ ಪುರುಷನ ರಕ್ಷಣೆ ಬೇಕೆಂದು ಬಯಸುತ್ತಿರುತ್ತಾರೆ. ಗಂಡ ಕೆಲಸದ ಕಾರಣದಿಂದ ದೂರ ಹೋಗಬೇಕಾದ ಅನಿವಾರ್ಯ ಸ್ಥಿತಿ ಬಂದಾಗ ಗಂಡನಾದವನು ಅವಳಿಗೆ ಮಾನಸಿಕ ಧೈರ್ಯ ತುಂಬ ಬೇಕಾಗುತ್ತದೆ. ಜೊತೆಯಲ್ಲಿಯೇ ಇದ್ದರೂ ಸಣ್ಣ ಪುಟ್ಟ ಜಗಳಗಳು ಬರುವುದು ಸಹಜ. ಆದರೆ ಸ್ವಲ್ಪ ಹೊತ್ತಿಗೆ ಬಂದ ಸಿಟ್ಟು ತಣ್ಣಗಾಗಿ ಮತ್ತೆ ಚೆನ್ನಾಗಿ ಇರುತ್ತಾರೆ. ಆದರೆ ದೂರದಲ್ಲಿದ್ದಾಗ ಸಣ್ಣ ವಿಷಯಕ್ಕೆ ನಡೆಯುವ ವಾದಗಳು ಕೆಲವೊಮ್ಮೆ ಜೋರಾಗುತ್ತದೆ. ಸಮಧಾನ ಮಾಡಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಸಂಬಂಧಗಳಲ್ಲಿ ವಿರಸಗಳು ಉಂಟಾಗುತ್ತದೆ.
ಮೈಲಿಗಳ ದೂರದಲ್ಲಿ ವಾಸಿಸುವ ದಂಪತಿಗಳಲ್ಲಿ ಮುಖ್ಯವಾಗಿ ಸಂವಹನ ಇರಬೇಕು. ಪ್ರತಿದಿನ ಒಬ್ಬರಿಗೊಬ್ಬರು ತಮ್ಮ ಅನಿಸಿಕೆಗಳನ್ನು, ಅನುಭವಗಳನ್ನು ಹೇಳಿಕೊಳ್ಳಬೇಕು. ಹೀಗಂತೂ ಫೋನ್, ಮೇಲ್ ಹೀಗೆ ಅನೇಕ ಸೌಲಭ್ಯಗಳಿವೆ. ಎಷ್ಟೇ ಕೆಲಸದ ಒತ್ತಡವಿರಲಿ ಪ್ರತಿದಿನ ಯೋಗ ಕ್ಷೇಮವನ್ನು ವಿಚಾರಿಸುತ್ತಾ ಇರಬೇಕು. ನಿಮ್ಮ ಸಂಗಾತಿಗೆ ಇಷ್ಟವಾದ ವಸ್ತುಗಳನ್ನು ಕೊಂಡು ಗಿಫ್ಟ್ ಮಾಡಿ.
ಸಂಶಯ ಎಂಬ ಭೂತವನ್ನು ಮಾತ್ರ ಯಾವತ್ತಿಗೂ ಹತ್ತಿರ ಬಿಟ್ಟಕೊಳ್ಳಬಾರದು. ದಂಪತಿಗಳಲ್ಲಿ ಯಾರಿಗಾದರೂ ಒಬ್ಬರಿಗೆ ಸಂಶಯವಿದ್ದರೆ ದಾಂಪತ್ಯ ಜೀವನದ ನಡೆಸುವುದು ಕಷ್ಟಕರವಾಗುತ್ತದೆ. ಯಾವತ್ತಿಗೂ ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳಿಕೊಳ್ಳಬೇಕು. ಸಂಶಯಕ್ಕೆ ಎಡೆ ಮಾಡುವಂತೆ ನಡೆದುಕೊಳ್ಳಬಾರದು. ಅದರಲ್ಲೂ ಮೂರನೆಯವರ ಮಾತಿಗೆ ಕಿವಿಗೊಡಬಾರದು.
ನಮ್ಮ ಮತ್ತು ನಮ್ಮ ಮಕ್ಕಳ ಜೀವನ ಸುಂದರವಾಗಿರಬೇಕೆಂಬ ಕಾರಣಕೋಸ್ಕರ ಕಾಣದ ಊರಿಗೆ ಹೋಗಿ ದುಡಿಯುತ್ತಿರುತ್ತೇವೆ. ಸ್ವಲ್ಪ ಕಾಲವಷ್ಟೆ ನಂತರ ಜೊತೆಯಲ್ಲಿ ಸಂತೋಷದಿಂದ ಬಾಳುತ್ತೇವೆ ಎಂಬ ನಂಬಿಕೆ ಮತ್ತು ಕನಸು ಇರುತ್ತದೆ. ಆ ಕನಸು ಮತ್ತು ನಂಬಿಕೆಯು ಚಿಕ್ಕ ಪುಟ್ಟ ವಿಷಯಗಳಿಂದಾಗಿ ಚದುರದಿರಲಿ.



Click it and Unblock the Notifications
