Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಭಾವನೆಗಳು ಸತ್ತರೆ ವಿಚ್ಛೇದನ ಒಳ್ಳೆಯದು!

ಪರಸ್ಪರ ಕೂಡಿ ಜೀವನ ಮಾಡಲು ಸಾಧ್ಯವಾಗದದಿದ್ದಾಗ ವಿಚ್ಛೇದನ ತೆಗೆದುಕೊಳ್ಳುವುದೇ ಒಳ್ಳೆಯದು! ಆದರೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ಎಲ್ಲರಿಂದ ಸಾಧ್ಯವಾಗುವುದು ಇಲ್ಲ. ಸಮಾಜದ ಕಟ್ಟುಪಾಡುಗಳಿಗೆ ಎದುರಿ ಅನೇಕರು ವಿಚ್ಛೇದನ ತೆಗೆದುಕೊಳ್ಳದೆ ನರಕದ ಜೀವನವನ್ನು ಅನುಭವಿಸುತ್ತಾರೆ. ಕೊನೆಗೆ ಆತ್ಮಹತ್ಯೆಯಂತಹ ಮುಠ್ಠಾಳ ತೀರ್ಮಾನ ಕೈಗೊಳ್ಳುತ್ತಾರೆ. ನರಕದ ಜೀವನ ಸಾಗಿಸುವುದು, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ವಿಚ್ಛೇದನ ತೆಗೆದುಕೊಳ್ಳುವುದು ಒಳ್ಳೆಯದು! ಭಾವನೆಗಳು ಸತ್ತ ಮೇಲೆ ಜೊತೆಗೆ ಬಾಳಿ ಪ್ರಯೋಜವೇನು?
ಬಾಳಸಂಗಾತಿಗೆ ನಮ್ಮೊಂದಿಗೆ ಬಾಳಲು ಇಷ್ಟವಿಲ್ಲದಿದ್ದರೆ ಅದನ್ನು ಅವರ ನಡುವಳಿಕೆಗಳಿಂದ ತಿಳಿದುಕೊಳ್ಳಬಹುದು. ದೈಹಿಕ ಹಿಂಸೆ ನೀಡುವುದು, ಸಣ್ಣ ಪುಟ್ಟ ವಿಷಯಕ್ಕೂ ವಾದ ಮಾಡುವುದು, ನಿಮ್ಮ ಭಾವನೆಗಳಿಗೆ ಬೆಲೆಯೆ ಕೊಡದಿರುವುದು, ಸಣ್ಣ-ಪುಟ್ಟ ವಿಷಯವನ್ನು ದೊಡ್ಡದು ಮಾಡಿ ಜಗಳವಾಡುವುದು ಅಂತಹವರ ಜೊತೆ ಬಾಳಿಯೂ ಪ್ರಯೋಜನವಿಲ್ಲ, ಯಾವಾಗ ಭಾವನೆಗಳು ಸಾಯುತ್ತವೆಯೊ ಆಗ ಸಂಬಂಧಗಳನ್ನು ಕೊನೆಗೊಳಿಸುವುದು ಒಳ್ಳೆಯದು.
ಏಕೆಂದರೆ ಜೊತೆಗೆ ಇದ್ದು ಪ್ರತಿಕ್ಷಣ ನರಕ ಅನುಭವಿಸುವ ಬದಲು ದೂರವಾದರೆ ಸ್ವಲ್ಪವಾದರೂ ಮಾನಸಿಕ ನೆಮ್ಮದಿ ದೊರೆಯುತ್ತದೆ.
ಈಗ ಸಾಕಷ್ಟು ಸಂಬಂಧಗಳು ಕೊನೆಗೊಳ್ಳುತ್ತಿರುವುದು ಅನೈತಿಕ ಸಂಬಂಧಗಳಿಂದ. ನಿಮ್ಮ ಜೀವನ ಸಂಗಾತಿ ಅನೈತಿಕ ಸಂಬಂಧ ಹೊಂದಿದ್ದರೆ ಯೋಚಿಸಲು ಹೋಗಲೇ ಬಾರದು. ಆ ಕ್ಷಣದಲ್ಲಿಯೆ ಅವರಿಂದ ದೂರವಾಗಿ ಬಿಡಬೇಕು. ಆದರೆ ಅನೇಕ ಹೆಣ್ಣು ಮಕ್ಕಳು ಗಂಡನಿಗೆ ಮತ್ತೊಂದು ಸಂಬಂಧಿವಿದ್ದರೂ ಕೂಡ ಸಹಿಸಿಕೊಂಡು ಇರುತ್ತಾರೆ. ಆದರೆ ಒಂದು ವಿಷಯ ಯೋಚಿಸಿ ನಿಮ್ಮ ಬಗ್ಗೆ ಕಿಂಚಿತ್ತು ಪ್ರೀತಿ ಅಥವಾ ನಿಮ್ಮ ಭಾವನೆಗಳಿಗೆ ಬೆಲೆಯಿದ್ದಿದ್ದರೆ ಅವನು ಬೇರೆ ಸಂಬಂಧ ನೋಡುತ್ತಿರಲಿಲ್ಲ. ನಿಮ್ಮ ವ್ಯಕ್ತಿತ್ವಕ್ಕೆ ಬೆಲೆಯಿಲ್ಲದ ಜಾಗದಲ್ಲಿ ನೀವು ಇರಬೇಕೆ?
ಸಣ್ಣ-ಪುಟ್ಟ ಕಾರಣಗಳಿಗೆ ಡಿವೋರ್ಸ್ ತೆಗೆದುಕೊಂಡರೆ ಬದುಕನ್ನು ನಮ್ಮ ಕೈಯಿಂದ ಒಡೆದುಕೊಂಡಂತೆ. ಜೀವನದಲ್ಲಿ ಹೊಂದಾಣಿಕೆ ಇರಬೇಕು. ಯಾವಾಗ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ತಲುಪಿದಾಗ ಹಿಂಸೆ ಅನುಭವಿಸುವುದರಲ್ಲಿ ಯಾವುದೇ ಅರ್ಥವಿಲ್ಲ.



Click it and Unblock the Notifications
