Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಹೆಣ್ಣೆ ನೀ ಏಕೆ ಹೀಗೆ ಎಂದು ನನಗೆ ಅರ್ಥವಾಗುತ್ತಿಲ್ಲ!

ಈ ರೀತಿ ಗಂಡ ತನ್ನ ಹೆಂಡತಿಯ ಬಗ್ಗೆ ಸಾಕಷ್ಟು ಬಾರಿ ಯೋಚಿಸುತ್ತಾನೆ. ಆದರೆ ಹೆಣ್ಣಿಗೆ ಇತರರ ವಿಷಯ ತಿಳಿದುಕೊಳ್ಳುವುದರಲ್ಲಿ ಪುರುಷರಿಗಿಂತ ಆಸಕ್ತಿ ಜಾಸ್ತಿ. ಅಲ್ಲದೆ ತಾನು ಸುರಕ್ಷಿತವಾಗಿರಬೇಕು. ಗಂಡ ತನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅವನ ಗಮನವನ್ನು ತನ್ನೆಡೆಗೆ ಸೆಳೆಯಲು ಪ್ರಯತ್ನಿಸುತ್ತಾಳೆ. ಅವಳ ಈ ರೀತಿಯ ಸ್ವಭಾವ ಪುರುಷರಿಗೆ ಅವಳು ನನ್ನನ್ನು ಕಂಟ್ರೋಲ್ ಮಾಡುತ್ತಿದ್ದಾಳೆ ಎಂದು ಅನಿಸುವುದು.
7. ಏಕೆ ತುಂಬಾ ಚಪ್ಪಲಿಗಳನ್ನು ಕೊಳ್ಳುತ್ತಾರೆ?
ಒಂದು ಜೊತೆ ಚಪ್ಪಲಿ ಇದ್ದರೆ ಹೆಣ್ಣು ಮಕ್ಕಳಿಗೆ ತೃಪ್ತಿ ಇರುವುದಿಲ್ಲ. ಹೊಸ ಫ್ಯಾಷನ್ ಬಂದರೆ ಆ ಮಾಡಲ್ ಚಪ್ಪಲಿ ಬೇಕೆಂದು ಬಯಸುತ್ತಾರೆ. ಚಪ್ಪಲಿ, ಬಟ್ಟೆ, ಆಭರಣ ಅವರಿಗೆ ಎಷ್ಟು ಇದ್ದರೂ ಸಾಕಾಗುವುದಿಲ್ಲ.
8. ಚಾಕಲೇಟ್ ತುಂಬಾ ಇಷ್ಟಪಡಲು ಕಾರಣವೇನು?
ಗಂಡಿಗಿಂತ ಹೆಣ್ಣು ತುಂಬಾ ಚಾಕಲೇಟ್ ತಿನ್ನಲು ಇಷ್ಟಪಡುತ್ತಾಳೆ. ಚಾಕಲೇಟ್ ತಿಂದರೆ ಆ ಸಮಯದಲ್ಲಿ ಬೇರೆಲ್ಲಾ ಮರೆತು ಚಾಕಲೇಟ್ ಸಿಹಿಯನ್ನು ಸವಿಯುತ್ತಿರುತ್ತಾಳೆ. ಈ ಪ್ರಶ್ನೆ ಅವಳಲ್ಲಿ ಕೇಳಿದರೂ ಉತ್ತರ ಸಿಗುವುದಿಲ್ಲ. ಕಾರಣ ಅವಳು ಚಾಕಲೇಟ್ ಇಷ್ಟ ಪಡುತ್ತಾಳೆ ಅಷ್ಟೆ.
9.ಏಕೆ ಇವಳು ವಿಚಿತ್ರವಾಗಿ ಆಡುತ್ತಾಳೆ?
ಇದು ಎಲ್ಲಾ ಪುರುಷರು ಹೆಣ್ಣಿನ ಬಗ್ಗೆ ಕೇಳುವ ಪ್ರಶ್ನೆ. ತುಂಬಾ ಇಷ್ಟ ಪಟ್ಟು ಒಂದು ವಸ್ತುವನ್ನು ತಂದಿರುತ್ತಾಳೆ. ಆದರೆ ಕೆಲವು ಸಮಯದ ಬಳಿಕ ಅದು ಇಷ್ಟವಿಲ್ಲ ಅನ್ನುತ್ತಾರೆ. ಕಾರಣ ಇಷ್ಟೆ ಅವಳು ಬದಲಾವಣೆಯನ್ನು ಇಷ್ಟಪಡುತ್ತಾಳೆ.
10. ಸ್ಪೋರ್ಟ್ಸ್ ಮತ್ತು ವೀಡಿಯೊಗೇಮ್ಸ್ ಇಷ್ಟಪಡಲ್ಲ ಏಕೆ?
ಹೆಚ್ಚಿನ ಹೆಣ್ಣು ಮಕ್ಕಳಿಗೆ ವೀಡಿಯೊ ಗೇಮ್ಸ್ ಅಥವಾ ಸ್ಪೋರ್ಟ್ಸ್ ಇಷ್ಟವಾಗುವುದಿಲ್ಲ. ಆದರೆ ಅವರು ಭಾವನಾತ್ಮಕವಾದ ವಿಷಯಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಾರೆ.
11.ನಮ್ಮ ಜೋಕ್ ಗಳು ಏಕೆ ಅವರಿಗೆ ಇಷ್ಟವಾಗಲ್ಲ?
ನಾವು ಹೇಳುವ ಜೋಕ್ ಗಳಿಗೆ ಏಕೆ ಹೆಂಡತಿ ನಗುವುದಿಲ್ಲ ಎಮದು ಗಂಡ ಯೋಚಿಸುತ್ತಾನೆ. ಆದರೆ ಅವಳು ಅದಕ್ಕೆ ಬೇರೆಯದೆ ಅರ್ಥ ಕಲ್ಪಿಸಿಕೊಂಡರೆ ನಗುವುದಿಲ್ಲ. ಗಂಡು-ಹೆಣ್ಣು ಪರಸ್ಪರ ಅರೆತು ಬಾಳ್ವೆ ನಡೆಸಿದರೆ ಈ ಪ್ರಶ್ನೆಗಳು ಆಗ್ಗಿಂದಾಗೆ ಬರುವುದಿಲ್ಲ.



Click it and Unblock the Notifications











