For Quick Alerts
ALLOW NOTIFICATIONS  
For Daily Alerts

ರೆಸಿಪಿ: ಮಧುಮೇಹಿಗಳಿಗೆ, ತೂಕ ಇಳಿಕೆಗೆ ಬೆಸ್ಟ್ ಈ ಓಟ್ಸ್ ಕಿಚಡಿ, ಟೇಸ್ಟ್ ಸೂಪರ್

Posted By:
|

ಮಧುಮೇಹವಿದ್ದರೆ ಪಥ್ಯ ಆಹಾರ ಸೇವಿಸಬೇಕೆಂದಿಲ್ಲ, ರಕ್ತದಲ್ಲಿ ಸಕ್ಕರೆಯಂಶ ಹೆಚ್ಚು ಮಾಡುವ ಆಹಾರ ಸೇವಿಸಬಾರದು ಅಷ್ಟೇ.... ಮಧುಮೇಹಿಗಳಿಗೆ ಅತ್ಯುತ್ತಮವಾದ ಆಹಾರಗಳಲ್ಲಿ ಒಂದು ಓಟ್ಸ್. ಆದರೆ ಕೆಲವರಿಗೆ ಓಟ್ಸ್‌ ಅನ್ನು ರುಚಿಕರವಾಗಿ ಮಾಡುವುದು ಹೇಗೆ ಎಂಬುವುದೇ ಗೊತ್ತಿರುವುದಿಲ್ಲ. ಈ ಕಾರಣಕ್ಕೆ ಓಟ್ಸ್ ಎಂದ ಕ್ಷಣ ಮುಖ ಸಿಂಡರಿಸುತ್ತಾರೆ.

Recipe For Diabetes

ಆದರೆ ಒಟ್ಸ್ ಅನ್ನು ತುಂಬಾ ರುಚಿಯಾಗಿ ಮಾಡಬಹುದು. ಇದರಿಂದ ಇಡ್ಲಿ ಮಾಡಬಹುದು, ಉಪ್ಪಿಟ್ಟು ಮಾಡಬಹುದು, ಅಷ್ಟೇ ಏಕೆ ರುಚಿಕರವಾದ ಕಿಚಡಿ ಕೂಡ ಮಾಡಬಹುದು. ಇನ್ನು ತೂಕ ಇಳಿಕೆಗೂ ಓಟ್ಸ್ ಕಿಚಡಿ ಬೆಸ್ಟ್.

ಈ ಓಟ್ಸ್‌ ಕಿಚಡಿ ಮಾಡುವುದು ಬಲು ಸುಲಭವಾಗಿದ್ದು ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್‌ ಓಟ್ಸ್
1 ಚಮಚ ಹೆಸರು ಬೇಳೆ
3 ಚಮಚ ಆಲೀವ್‌ ಎಣ್ಣೆ
2 ಚಮಚ ಬೆಳ್ಳುಳ್ಳಿ ಪೇಸ್ಟ್
ಹಸಿ ಮೆಣಸಿನಕಾಯಿ ಪೇಸ್ಟ್ ಅಥವಾ ಹಸಿ ಮೆಣಸಿನಕಾಯಿ (ನಿಮ್ಮ ರುಚಿಗೆ ತಕ್ಕಷ್ಟು)
1 ಚಿಕ್ಕ ಚಮಚ ಅರಿಶಿಣ ಪುಡಿ
ರುಚಿಗೆ ತಕ್ಕ ಉಪ್ಪು
ಡ್ರೈ ಫ್ರೂಟ್ಸ್ (ಬೇಕಿದ್ದರೆ)

ಮಾಡುವ ವಿಧಾನ:

* ಪ್ರೆಶರ್‌ ಕುಕ್ಕರ್ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಹಸಿ ಮೆಣಸಿನಕಾಯಿ ಪೇಸ್ಟ್ ಹಾಗೂ ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಫ್ರೈ ಮಾಡಿ.

Recipe For Diabetes

* ಈಗ ಓಟ್ಸ್ ಹಾಗೂ ತೊಳೆದ ಹೆಸರು ಬೇಳೆ ಹಾಕಿ 2 ನಿಮಿಷ ಉರಿಯಿರಿ.

Recipe For Diabetes

* ಇದಕ್ಕೆ 4 ಕಪ್‌ ನೀರು ಹಾಕಿ ರುಚಿಗೆ ತಕ್ಕ ಉಪ್ಪು, ಅರಿಶಿಣ ಪುಡಿ ಸೇರಿಸಿ.

Recipe For Diabetes

* ಎರಡು ವಿಶಲ್‌ ಆದರೆ ಸವಿಯಲು ಓಟ್ಸ್ ಕಿಚಡಿ ರೆಡಿ.

Recipe For Diabetes

*ಇದಕ್ಕೆ ನೀವು ಡ್ರೈ ಫ್ರೂಟ್ಸ್ ಅಥವಾ ಬೆರ್ರಿ ಫ್ರೂಟ್ಸ್ ಹಾಕಿ ಸವಿದರೆ ಮತ್ತಷ್ಟು ರುಚಿಯಾಗಿರುತ್ತದೆ.

[ of 5 - Users]
Story first published: Monday, December 5, 2022, 22:29 [IST]
X
Desktop Bottom Promotion