Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕಲ್ಲಂಗಡಿ ಹಣ್ಣು ಹಾಕಿ ಮಾಡಿದ ಚಿಕನ್ ಬಿರಿಯಾನಿ: ರೆಸಿಪಿ ವೀಡಿಯೋ ತುಂಬಾನೇ ವೈರಲ್
ಬಗೆ ಬಗೆಯ ಬಿರಿಯಾನಿ ಕೇಳಿರುತ್ತೀರಿ, ರುಚಿ ನೋಡಿರುತ್ತೀರಿ, ಆದರೆ ಈ ಬಿರಿಯಾನಿ ರುಚಿ ನೋಡಿರಲ್ಲ ನೀವು., ಏಕೆಂದರೆ ಇದು ಕಲ್ಲಂಗಡಿ ಹಣ್ಣಿನ ಜ್ಯೂಸ್ ಹಾಕಿ ಮಾಡುವ ಬಿರಿಯಾನಿ.
ಈ ವೀಡಿಯೋವನ್ನು villagefoodchannel ನವರು ಈ ವೀಡಿಯೋ ಮಾಡಿದ್ದು ಹೀಗೂ ಬಿರಿಯಾನಿ ಮಾಡಬಹುದೇ ಎಂದು ಜನ ಕೇಳುತ್ತಿದ್ದಾರೆ.
ಬಿರಿಯಾನಿ ಎಂದರೆ ನಮಗೆ ಮಸಾಲೆ ಹಾಕಿ ಮಾಡುವ ಬಿರಿಯಾನಿ ಗೊತ್ತಿರುತ್ತದೆ, ಆದರೆ ಅದರ ಜೊತೆಗೆ ಈ ಕಲ್ಲಂಗಡಿ ಹಣ್ಣಿನ ರಸ ಹಾಕಿದರೆ ಸಿಹಿಯಾಗುವುದಿಲ್ಲವೇ? ಏನೇ ಆಗಲಿ ಅವರು ಈ ರೀತಿ ಬಿರಿಯಾನಿ ಮಾಡಿದ್ದಾರೆ.

ರೆಸಿಪಿ
1. ಮೊದಲು ಕಲ್ಲಂಗಡಿಯ ಸಿಪ್ಪೆ ಸುಲಿದು ಕತ್ತರಿಸಿ ನಂತರ ಜಾರಡಿಯಿಂದ ಅದರ ರಸವನ್ನು ಬೇರೆ ಪಾತ್ರೆಯಲ್ಲಿ ಸಂಗ್ರಹಿಸಿದ್ದಾರೆ. ಅವರು ತುಂಬಾ ಜನರಿಗೆ ಮಾಡಿರುವುದರಿಂದ ಹೆಚ್ಚು ಕಲ್ಲಂಗಡಿ ಹಣ್ಣು ಬಳಸಿದ್ದಾರೆ, ನೀವು ಇದನ್ನು ಟ್ರೈ ಮಾಡುವುದಾದರೆ 1 ಬಳಸಿದರೆ ಸಾಕಾಗುತ್ತೆ.
2. ನಂತರ ಮಾಂಸ ತೊಳೆದು ಇಡಬೇಕು
ಪ್ಯಾನ್ ಬಿಸಿ ಮಾಡಿ ಅದಕ್ಕೆ ತುಪ್ಪ ಸೇರಿಸಿ ನಂತರ ಚಕ್ಕೆ, ಲವಂಗ , ಪಲಾವ್ ಎಲೆ
ಹಾಕಿ, ಹಸಿ ಮೆಣಸು ಹಾಕಿ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಪೇಸ್ಟ್ ಸೇರಿಸಿ
ಮಿಕ್ಸ್ ಮಾಡಬೇಕು.
3. ನಂತರ ಈರುಳ್ಳಿ ಹಾಕಿ ಫ್ರೈ ಮಾಡಲಾಗುವುದು'
ಟೊಮೆಟೊ ಸೇರಿಸಲಾಗುವುದು
ಬಳಿಕ ಕೊತ್ತಂಬರಿ ಸೊಪ್ಪು ಸೇರಿಸಲಾಗುವುದು.
4. ನಂತರ ಚಿಕನ್ ಹಾಕಿ , ರುಚಿಗೆ ತಕ್ಕ ಉಪ್ಪು ಸೇರಿಸಿ, ಸ್ವಲ್ಪ ಹೊತ್ತು
ಬೇಯಿಸಿ ಬಳಿಕ ಮೆಣಸಿನ ಪುಡಿ (ತರಿ ತರಿ ಇರುವುದು), ಗರಂ ಮಸಾಲ ಪುಡಿ, ಸ್ವಲ್ಪ
ಕಾಶ್ಮೀರಿ ಮೆಣಸಿನ ಪುಡಿ ಸೇರಿಸಬೇಕು.
ಈಗ ಮೊಸರು ಸೇರಿಸಿ ಮಿಕ್ಸ್ ಮಾಡಬೇಕು.
5. ನಂತರ ನಾವು ನೀರು ಸೇರಿಸುತ್ತೇವೆ ಅಲ್ವಾ ಅವರು ಕಲ್ಲಂಗಡಿ ಹಣ್ಣಿನ ರಸ ಸೇರಿಸಿ ಅದಕ್ಕೆ ಅಕ್ಕಿ ಹಾಕಿ ಬೇಯಲು ಇಡುತ್ತಾರೆ.
6. ನಂತರ ಬೇರೆ ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ ಅದರಲ್ಲಿ ಬಿಳಿ ಎಳ್ಳು ಫ್ರೈ ಮಾಡಿ ಬೆಂದ ಬಿರಿಯಾನಿ ಜೊತೆ ಮಿಕ್ಸ್ ಮಾಡಿ , ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸರ್ವ್ ಮಾಡುತ್ತಾರೆ.
ಈ ಕಲ್ಲಂಗಡಿ ಹಣ್ಣಿನ ಬಿರಿಯಾನಿ ಸೂಪರ್ ಆಗಿದೆ ಅಂತ ಅದನ್ನು ಟೇಸ್ಟ್ ಮಾಡಿದವರು ಹೇಳುತ್ತಿದ್ದಾರೆ, ನಾವು ಮಾಡಿಲ್ಲ, ಈ ಪಾಕ ವಿಧಾನ ವೈರಲ್ ಆಗಿರುವ ಕಾರಣ ಇಲ್ಲಿ ನೀಡಲಾಗಿದೆ.
ಈ ವೀಡಿಯೋ ನೋಡಿದವರು ಕಲ್ಲಂಗಡಿ ಹಣ್ಣನ್ನು ಸುಮ್ಮನೆ ಹೀಗೆ ವ್ಯರ್ಥ ಮಾಡುವ ಬದಲಿಗೆ ಹಾಗೇ ತಿನ್ನುವುದು ಒಳ್ಳೆಯದು ಎಂದು ಕೆಮೆಂಟ್ ಮಾಡಿದ್ದಾರೆ, ಇನ್ನು ಕೆಲವರು ಸೂಪರ್ ಆಗಿರುತ್ತಾ ಎಂದು ಕೇಳುತ್ತಿದ್ದಾರೆ, ಏನೇ ಆಗಲಿ ಈ ರೀತಿ ವೆರೈಟಿ ಫುಡ್ ನೋಡುವಾಗ ಇಷ್ಟವಾಗುತ್ತೆ.
ಇಲ್ಲಿ ವೀಡಿಯೋ ನೋಡುವಾಗ ಅವರು ಕಲ್ಲಂಗಡಿ ಹಣ್ಣಿನ ರಸ ತೆಗೆಯುವಾಗ ತುಂಬಾ ಕಲ್ಲಂಗಡಿ ಹಣ್ಣನ್ನು ವ್ಯರ್ಥ ಮಾಡುತ್ತಿದ್ದಾರೆ, ಅದು ನೋಡುವಾಗ ಈ ರೀತಿ ರಸ ತೆಗೆಯುವ ಬದಲಿಗೆ ಗ್ರೈಂಡ್ ಮಾಡಿದರೆ ಬರೀ ಬೀಜ ಹಾಗೂ ಸ್ವಲ್ಪ ನಾರಿನಂಶ ಉಳಿಯುತ್ತಿತ್ತು ಅನಿಸುತ್ತೆ...ಏನೇ ಆಗಲಿ ಅವರೊಂದು ಹೊಸ ಟ್ರೈ ಮಾಡಿದ್ದಾರೆ, ಅದಕ್ಕೆ ಮೆಚ್ಚಬೇಕು ಅಲ್ವಾ...
ಐಸ್‌ಕ್ರೀಂ ಪಾನಿಪುರಿ, ಮಾವಿನ ಹಣ್ಣಿನ ರಸದ ಪಾನಿಪುರಿ, ಐಸ್‌ಕ್ರೀಂ ದೋಸೆ ಹೀಗೆ ಹಲವು ವಿಚಿತ್ರ ರೆಸಿಪಿಗಳನ್ನು ಟ್ರೈ ಮಾಡಿದ್ದನ್ನು ನೋಡಿದ್ದೇವೆ, ಅವುಗಳಿಗೆ ಹೋಲಿಸಿದರೆ ಇದು ಸ್ವಲ್ಪ ಒಕೆ ಅನಿಸುತ್ತೆ, ಸ್ವಲ್ಪ ರುಚಿ ಸಿಹಿ ಬರಬಹುದೇನೋ ಅಷ್ಟೇ..
ನೀವು ಏನಾದರೂ ರೀತಿ ವಿಚಿತ್ರ ಕಾಂಬಿನೇಷನ್ ಟ್ರೈ ಮಾಡಿದ್ದೀರಾ?



Click it and Unblock the Notifications
