ತರಕಾರಿ ಮಿಶ್ರಿತ ರವಾ ಉಪ್ಪಿಟ್ಟು ಪಾಕವಿಧಾನ

By: Divya pandith
Subscribe to Boldsky

ತರಕಾರಿ ಮಿಶ್ರಿತ ರವಾ ಉಪ್ಪಿಟ್ಟು ಪಾಕವಿಧಾನ

ತರಕಾರಿ ಮಿಶ್ರಿತ ರವಾ ಉಪ್ಪಿಟ್ಟು ದಕ್ಷಿಣ ಭಾರತೀಯರ ಸಾಂಪ್ರದಾಯಿಕ ಉಪಹಾರಗಳಲ್ಲಿ ಒಂದು. ಇದನ್ನು ಉಪ್ಮಾ, ಖಾರಾ ಬಾತ್ ಎಂದು ಕರೆಯುತ್ತಾರೆ. ಇದನ್ನು ಸವಿಯುವಾಗ ಕೇಸರಿ ಬಾತ್ ಅನ್ನು ಜೊತೆಗೆ ಸೇಸೇರಿಸುವುದು ಒಂದು ಸುಂದರವಾದ ಸಂಯೋಜನೆ ಎನ್ನಬಹುದು. ಇದರ ತಯಾರಿಯಲ್ಲಿ ಬಳಸುವ ಕ್ಯಾರೆಟ್, ಕ್ಯಾಪ್ಸಿಕಮ್, ಬಟಾಣಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಇದರ ರುಚಿಯನ್ನು ಹೆಚ್ಚಿಸುತ್ತವೆ.

ಆರೋಗ್ಯಕರ ಉಪಹಾರಗಳಲ್ಲಿ ಒಂದಾದ ಈ ತಿಂಡಿಯನ್ನು ಬಹಳ ಸರಳ ಹಾಗೂ ಸುಲಭ ವಿಧಾನಗಳಲ್ಲಿ ತಯಾರಿಸಬಹುದು. ಇದನ್ನು ಕೆಲವರು ಭೋಜನಕ್ಕೂ ತಯಾರಿಸುತ್ತಾರೆ. ಈ ಉಪಹಾರದಲ್ಲಿ ಹೆಚ್ಚು ಎಣ್ಣೆಯನ್ನು ಬಳಸಲಾಗುತ್ತದೆ. ರವಾ ಮತ್ತು ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುವುದರಿಂದ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುವುದು.

ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಮುಂಜಾನೆಯ ಉಪಹಾರವಾಗಿ ಈ ತಿಂಡಿಯನ್ನು ತಯಾರಿಸಲಾಗುತ್ತದೆ. ಇದನ್ನು ನೀವು ಸಹ ತಯಾರಿಸಿ ಸವಿಯಬೇಕು ಎನ್ನುವ ಉತ್ಸಾಹದಲ್ಲಿದ್ದರೆ ಈ ಮುಂದೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಿ.

Upma recipe
ತರಕಾರಿ ಮಿಶ್ರಿತ ಉಪ್ಪಿಟ್ಟು| ಉಪ್ಪಿಟ್ಟು ಮಾಡುವುದು ಹೇಗೆ| ತರಕಾರಿ ಉಪ್ಪಿಟ್ಟು ರೆಸಿಪಿ| ರವಾ ತರಕಾರಿ ಉಪ್ಪಿಟ್ಟು ರೆಸಿಪಿ| ಖಾರ ಬಾತ್ ರೆಸಿಪಿ
ತರಕಾರಿ ಮಿಶ್ರಿತ ಉಪ್ಪಿಟ್ಟು| ಉಪ್ಪಿಟ್ಟು ಮಾಡುವುದು ಹೇಗೆ| ತರಕಾರಿ ಉಪ್ಪಿಟ್ಟು ರೆಸಿಪಿ| ರವಾ ತರಕಾರಿ ಉಪ್ಪಿಟ್ಟು ರೆಸಿಪಿ| ಖಾರ ಬಾತ್ ರೆಸಿಪಿ
Prep Time
15 Mins
Cook Time
25M
Total Time
40 Mins

Recipe By: ಕಾವ್ಯಶ್ರೀ ಎಸ್.

Recipe Type: ಉಪಹಾರ

Serves: 2-3

Ingredients
 • ಎಣ್ಣೆ - 10 ಟೇಬಲ್ ಚಮಚ

  ಸಾಸಿವೆ - 1 ಟೀ ಚಮಚ

  ಉದ್ದಿನ ಬೇಳೆ -1 ಟೀ ಚಮಚ

  ಕಡ್ಲೆ ಬೇಳೆ -1 ಟೀ ಚಮಚ

  ಕರಿಬೇವು -6-8 ಎಸಳು

  ಶುಂಠಿ - 1 ಇಂಚು (ತುರಿದಿರುವುದು)

  ಕೊತ್ತಂಬರಿ ಸೊಪ್ಪು -1/4 ಕಪ್

  ತೆಂಗಿನ ತುರಿ -1/2 ಕಪ್

  ಹೆಚ್ಚಿಕೊಂಡ ಈರುಳ್ಳಿ -1 ಕಪ್

  ಕ್ಯಾಪ್ಸಿಕಮ್ -1/2 ಕಪ್

  ಹಸಿ ಮೆಣಸಿನಕಾಯಿ -5-6 (ತುಂಡುಗಳು)

  ನಿಂಬೆ ರಸ - ಅರ್ಧ ನಿಂಬೆ ಹಣ್ಣು

  ಹೆಚ್ಚಿಕೊಂಡ ಕ್ಯಾರೆಟ್ -1/2 ಕಪ್

  ಬಟಾಣಿ -1/4 ಕಪ್

  ಸೂಜಿ ರವಾ - ಒಂದು ಬೌಲ್‍ನ 3/4 ಭಾಗ

  ಉಪ್ಪು -3/4 ಟೇಬಲ್ ಚಮಚ

  ನೀರು -3 ಬೌಲ್

Red Rice Kanda Poha
How to Prepare
 • 1. ಒಂದು ದಪ್ಪ ತಳದ ಪಾತ್ರೆಯಲ್ಲಿ ರವಾ ಹಾಕಿ ಬಿಸಿ ಮಾಡಿ.

  2. ಸುಮಾರು 3-5 ನಿಮಿಷಗಳಕಾಲ, ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ.

  3. ಹುರಿದ ನಂತರ ಒಂದು ಬೌಲ್‍ಗೆ ವರ್ಗಾಯಿಸಿ ಒಂದೆಡೆ ಇಡಿ.

  4. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

  5. ನಂತರ ಉದ್ದಿನ ಬೇಳೆ ಮತ್ತು ಸಾಸಿವೆಯನ್ನು ಹಾಕಿ.

  6. ನಂತರ ಕಡ್ಲೆ ಬೇಳೆ ಮತ್ತು ತುರಿದುಕೊಂಡ ಶುಂಠಿ ಸೇರಿಸಿ.

  7. ಚೆನ್ನಾಗಿ ಕಲುಕಿ.

  8. ಕರಿಬೇವಿನ ಎಲೆ ಮತ್ತು ಹೆಚ್ಚಿಕೊಂಡ ಹಸಿಮೆಣಸಿನ ಕಾಯನ್ನು ಸೇರಿಸಿ ಕಲುಕಿ.

  9. ನಂತರ ಹೆಚ್ಚಿಕೊಂಡ ಈರುಳ್ಳಿ ಹಾಕಿ. ಅದು ತಿಳಿ ಕಂದು ಬಣ್ಣಕ್ಕೆ ತಿರುಗುವ ವರೆಗೆ ಹುರಿಯಿರಿ.

  10. ನಂತರ ಹೆಚ್ಚಿಕೊಂಡ ಕ್ಯಾರೆಟ್ ಸೇರಿಸಿ.

  11. ಚೆನ್ನಾಗಿ ತಿರುವಿ ಹಾಗೂ ಸ್ವಲ್ಪ ಸಮಯ ಬೇಯಲು ಬಿಡಿ.

  12. ನಂತರ ಹೆಚ್ಚಿಕೊಂಡ ಕ್ಯಾಪ್ಸಿಕಮ್ ಮತ್ತು ಬಟಾಣಿಯನ್ನು ಸೇರಿಸಿ.

  13. ನಂತರ 3 ಬೌಲ್ ನೀರನ್ನು ಸೇರಿಸಿ. ಸಾಮಾನ್ಯವಾಗಿ ಒಂದು ಕಪ್ ರವಾಕ್ಕೆ ಎರಡು ಕಪ್ ಅಥವಾ ಮೂರು ಕಪ್ ನೀರಿನ ಪ್ರಮಾಣ ಬಳಸುತ್ತಾರೆ. ಅದು ನಿಮ್ಮ ಆಧ್ಯತೆಗೆ ಬಳಸಬಹುದು.

  14. ತೆಂಗಿನ ತುರಿ ಮತ್ತು ಉಪ್ಪನ್ನು ಸೇರಿಸಿ.

  15. ನಂತರ ಮುಚ್ಚಳವನ್ನು ಮುಚ್ಚಿ 8-10 ನಿಮಿಷಗಳಕಾಲ ಬೇಯಲು ಬಿಡಿ.

  16. ನಂತರ ಮುಚ್ಚಳವನ್ನು ತೆರೆದು ಒಮ್ಮೆ ಮಿಶ್ರಣವನ್ನು ತಿರುವಿ.

  17. ನಿಧಾನವಾಗಿ ರವಾವನ್ನು ಸೇರಿಸುತ್ತಾ ಹೋಗಿ. ರವಾ ಗಂಟಾಗದಂತೆ ತಿರುವುತ್ತಿರಬೇಕು.

  18. ಎಲ್ಲಾ ಸಾಮಾಗ್ರಿಗಳು ಬೆರೆತುಕೊಳ್ಳಲು ಚೆನ್ನಾಗಿ ತಿರುವುತ್ತಿರಬೇಕು.

  19. ನೀರು ಸಂಪೂರ್ಣವಾಗಿ ಆವಿಯಾಗುವವರೆಗೂ ಮುಚ್ಚಳವನ್ನು ಮುಚ್ಚಿಡಬೇಕು.

  20. ನಂತರ ಮುಚ್ಚಳವನ್ನು ತೆರೆದು ಅರ್ಧ ಟೇಬಲ್ ಚಮಚ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಮಿಶ್ರಗೊಳಿಸಿ.

  21. ನಂತರ ಉರಿಯನ್ನು ಆರಿಸಿ.

  22. ನಂತರ ಒಂದು ಟೇಬಲ್ ಚಮಚ ನಿಂಬೆ ರಸವನ್ನು ಸೇರಿಸಿ ಮಿಶ್ರಗೊಳಿಸಿ.

  23 ಬಳಿಕ ಒಂದು ಬೌಲ್‍ಗೆ ವರ್ಗಾಯಿಸಿ, ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.

Instructions
 • ತರಕಾರಿಯನ್ನು ಒಗ್ಗರಣೆ ಮಾಡುವ ಮೊದಲೇ ರವಾವನ್ನು ಹುರಿದಿಟ್ಟುಕೊಂಡಿರಬೇಕು. ಕ್ಯಾಪ್ಸಿಕಮ್ ಬಹುಬೇಗ ಬೇಯುವುದರಿಂದ ಕೊನೆಯಲ್ಲಿ ಸೇರಿಸಿ
 • ಹುರಿದುಕೊಂಡ ರವಾ ಗಂಟಾಗದಂತೆ ನಿಧಾನವಾಗಿ ಸೇರಿಸುತ್ತಾ ಹೋಗಬೇಕು
 • ಅಲಂಕಾರಕ್ಕಾಗಿ ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಹಾಗೂ ನಿಂಬೆ ರಸವನ್ನು ಸೇರಿಸುವುದರಿಂದ ರುಚಿಯನ್ನು ಹೆಚ್ಚಿಸಬಹುದು.
Nutritional Information
 • ಪ್ರಮಾಣ - 1 ಬೌಲ್ ಉಪ್ಪಿಟ್ಟು
 • ಕ್ಯಾಲೋರಿ - 180 ಕ್ಯಾಲ್
 • ಕೊಬ್ಬು - 4.4 ಗ್ರಾಂ
 • ಪ್ರೋಟೀನ್ - 11 ಗ್ರಾಂ
 • ಕಾರ್ಬೋಹೈಡ್ರೇಟ್ - 59 ಗ್ರಾಂ
 • ಫೈಬರ್ - 2.9 ಗ್ರಾಂ

ಹಂತ ಹಂತವಾದ ಚಿತ್ರವಿವರಣೆ:

1. ಒಂದು ದಪ್ಪ ತಳದ ಪಾತ್ರೆಯಲ್ಲಿ ರವಾ ಹಾಕಿ ಬಿಸಿ ಮಾಡಿ.

Upma recipe

2. ಸುಮಾರು 3-5 ನಿಮಿಷಗಳಕಾಲ, ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ.

Upma recipe
Upma recipe

3. ಹುರಿದ ನಂತರ ಒಂದು ಬೌಲ್‍ಗೆ ವರ್ಗಾಯಿಸಿ ಒಂದೆಡೆ ಇಡಿ.

Upma recipe
Upma recipe

4. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

Upma recipe

5. ನಂತರ ಉದ್ದಿನ ಬೇಳೆ ಮತ್ತು ಸಾಸಿವೆಯನ್ನು ಹಾಕಿ.

Upma recipe
Upma recipe

6. ನಂತರ ಕಡ್ಲೆ ಬೇಳೆ ಮತ್ತು ತುರಿದುಕೊಂಡ ಶುಂಠಿ ಸೇರಿಸಿ.

Upma recipe
Upma recipe

7. ಚೆನ್ನಾಗಿ ಕಲುಕಿ.

Upma recipe

8. ಕರಿಬೇವಿನ ಎಲೆ ಮತ್ತು ಹೆಚ್ಚಿಕೊಂಡ ಹಸಿಮೆಣಸಿನ ಕಾಯನ್ನು ಸೇರಿಸಿ ಕಲುಕಿ.

Upma recipe
Upma recipe
Upma recipe

9. ನಂತರ ಹೆಚ್ಚಿಕೊಂಡ ಈರುಳ್ಳಿ ಹಾಕಿ. ಅದು ತಿಳಿ ಕಂದು ಬಣ್ಣಕ್ಕೆ ತಿರುಗುವ ವರೆಗೆ ಹುರಿಯಿರಿ.

Upma recipe
Upma recipe

10. ನಂತರ ಹೆಚ್ಚಿಕೊಂಡ ಕ್ಯಾರೆಟ್ ಸೇರಿಸಿ.

Upma recipe

11. ಚೆನ್ನಾಗಿ ತಿರುವಿ ಹಾಗೂ ಸ್ವಲ್ಪ ಸಮಯ ಬೇಯಲು ಬಿಡಿ.

Upma recipe
Upma recipe

12. ನಂತರ ಹೆಚ್ಚಿಕೊಂಡ ಕ್ಯಾಪ್ಸಿಕಮ್ ಮತ್ತು ಬಟಾಣಿಯನ್ನು ಸೇರಿಸಿ.

Upma recipe
Upma recipe

13. ನಂತರ 3 ಬೌಲ್ ನೀರನ್ನು ಸೇರಿಸಿ. ಸಾಮಾನ್ಯವಾಗಿ ಒಂದು ಕಪ್ ರವಾಕ್ಕೆ ಎರಡು ಕಪ್ ಅಥವಾ ಮೂರು ಕಪ್ ನೀರಿನ ಪ್ರಮಾಣ ಬಳಸುತ್ತಾರೆ. ಅದು ನಿಮ್ಮ ಆಧ್ಯತೆಗೆ ಬಳಸಬಹುದು.

Upma recipe

14. ತೆಂಗಿನ ತುರಿ ಮತ್ತು ಉಪ್ಪನ್ನು ಸೇರಿಸಿ.

Upma recipe
Upma recipe

15. ನಂತರ ಮುಚ್ಚಳವನ್ನು ಮುಚ್ಚಿ 8-10 ನಿಮಿಷಗಳಕಾಲ ಬೇಯಲು ಬಿಡಿ.

Upma recipe
Upma recipe

16. ನಂತರ ಮುಚ್ಚಳವನ್ನು ತೆರೆದು ಒಮ್ಮೆ ಮಿಶ್ರಣವನ್ನು ತಿರುವಿ.

Upma recipe
Upma recipe

17. ನಿಧಾನವಾಗಿ ರವಾವನ್ನು ಸೇರಿಸುತ್ತಾ ಹೋಗಿ. ರವಾ ಗಂಟಾಗದಂತೆ ತಿರುವುತ್ತಿರಬೇಕು.

Upma recipe

18. ಎಲ್ಲಾ ಸಾಮಾಗ್ರಿಗಳು ಬೆರೆತುಕೊಳ್ಳಲು ಚೆನ್ನಾಗಿ ತಿರುವುತ್ತಿರಬೇಕು.

Upma recipe

19. ನೀರು ಸಂಪೂರ್ಣವಾಗಿ ಆವಿಯಾಗುವವರೆಗೂ ಮುಚ್ಚಳವನ್ನು ಮುಚ್ಚಿಡಬೇಕು.

Upma recipe

20. ನಂತರ ಮುಚ್ಚಳವನ್ನು ತೆರೆದು ಅರ್ಧ ಟೇಬಲ್ ಚಮಚ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಚೆನ್ನಾಗಿ ಮಿಶ್ರಗೊಳಿಸಿ.

Upma recipe
Upma recipe
Upma recipe

21. ನಂತರ ಉರಿಯನ್ನು ಆರಿಸಿ.

Upma recipe

22. ನಂತರ ಒಂದು ಟೇಬಲ್ ಚಮಚ ನಿಂಬೆ ರಸವನ್ನು ಸೇರಿಸಿ ಮಿಶ್ರಗೊಳಿಸಿ.

Upma recipe
Upma recipe

23. ಬಳಿಕ ಒಂದು ಬೌಲ್‍ಗೆ ವರ್ಗಾಯಿಸಿ, ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.

Upma recipe
Upma recipe
[ 4.5 of 5 - 52 Users]
Story first published: Wednesday, December 13, 2017, 11:16 [IST]
Please Wait while comments are loading...
Subscribe Newsletter