ವಾಂಗಿ ಬಾತ್ ರೆಸಿಪಿ

Posted By: Divya Pandith
Subscribe to Boldsky

ಕರ್ನಾಟಕ ಶೈಲಿಯ ರುಚಿಕರವಾದ ಪಾಕವಿಧಾನ ವಾಂಗಿ ಬಾತ್. ಸಾಮಾನ್ಯವಾಗಿ ಕರ್ನಾಟಕದ ಮನೆ ಮನೆಯಲ್ಲೂ ತಯಾರಿಸುವ ಬಹು ಮುಖ್ಯವಾದ ಪಾಕವಿಧಾನಗಳಲ್ಲಿ ಒಂದು. ಬದನೆಕಾಯಿಯ ಜೊತೆ ಅನ್ನ ಹಾಗೂ ಉತ್ತಮ ಮಸಾಲೆಗಳ ಮಿಶ್ರಣದಿಂದ ತಯಾರಾಗುವ ಈ ಖಾದ್ಯವನ್ನು ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕು ಎನ್ನುವಂತೆ ಮಾಡುವುದು. ಇದು ಪರಿಪೂರ್ಣವಾದ ಪೌಷ್ಟಿಕಾಂಶ ಹಾಗೂ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಕೂಡಿದೆ. ಈ ಪಾಕವಿಧಾನವನ್ನು ಮುಂಜಾನೆಯ ಉಪಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟವನ್ನಾಗಿಯೂ ಸಹ ಸೇವಿಸಬಹುದು.

ಲವಂಗ, ಏಲಕ್ಕಿ, ದಾಲ್ಚಿನ್ನಿ, ಮೇಥಿ ಬೀಜ, ಸೇರಿದಂತೆ ಇನ್ನಿತರ ಆರೋಗ್ಯಕರವಾದ ಮಸಾಲ ಪದಾರ್ಥಗಳು ಇದರಲ್ಲಿ ಸೇರಿರುವುದರಿಂದ ದೇಹದ ಆರೋಗ್ಯದ ಸುಧಾರಣೆಗೂ ಸಹಾಯ ಮಾಡುವುದು. ಬದನೆಕಾಯಿ ಮತ್ತು ತೆಂಗಿನ ತುರಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಬಹಳ ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದಾದ ಈ ಪಾಕವಿಧಾನವನ್ನು ನೀವು ಮಾಡಬೇಕು ಎನ್ನುವ ಹಂಬಲವನ್ನು ಹೊಂದಿದ್ದರೆ ಮುಂದಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಿ.

Vangi bhaat recipe
ವಾಂಗಿ ಬಾತ್ ರೆಸಿಪಿ| ವಾಂಗಿ ಬಾತ್ ಅನ್ನ ಮಾಡುವುದು ಹೇಗೆ| ಕರ್ನಾಟಕ ಶೈಲಿಯ ವಾಂಗಿ ಬಾತ್ ರೆಸಿಪಿ| ಸ್ಟೆಪ್ ಬೈ ಸ್ಟೆಪ್ ವಾಂಗಿ ಬಾತ್| ವಾಂಗಿ ಬಾತ್ ವಿಡಿಯೋ
ವಾಂಗಿ ಬಾತ್ ರೆಸಿಪಿ| ವಾಂಗಿ ಬಾತ್ ಅನ್ನ ಮಾಡುವುದು ಹೇಗೆ| ಕರ್ನಾಟಕ ಶೈಲಿಯ ವಾಂಗಿ ಬಾತ್ ರೆಸಿಪಿ| ಸ್ಟೆಪ್ ಬೈ ಸ್ಟೆಪ್ ವಾಂಗಿ ಬಾತ್| ವಾಂಗಿ ಬಾತ್ ವಿಡಿಯೋ
Prep Time
20 Mins
Cook Time
25M
Total Time
45 Mins

Recipe By: ಕಾವ್ಯ

Recipe Type: ಪ್ರಮುಖ ಖಾದ್ಯ

Serves: 2

Ingredients
 • ಬದನೆಕಾಯಿ -4-5

  ಕೊತ್ತಂಬರಿ ಸೊಪ್ಪು- ಒಂದು ಮುಷ್ಟಿ

  ಹುಣಸೆ ಹಣ್ಣಿನ ರಸ -1 ಟೇಬಲ್ ಚಮಚ

  ಧನಿಯಾ- 1 ಟೇಬಲ್ ಚಮಚ

  ಎಣ್ಣೆ- ಒಗ್ಗರಣೆ + ಹುರಿಯಲು

  ಒಣ ಮೆಣಸು - 5-6

  ತುರಿದ ಒಣ ಕೊಬ್ಬರಿ- 1/2 ಕಪ್

  ಅಕ್ಕಿ -1 ಕಪ್

  ಸಾಸಿವೆ ಕಾಳು- 1 ಟೇಬಲ್ ಚಮಚ

  ಉದ್ದಿನ ಬೇಳೆ - 1 ಟೇಬಲ್ ಚಮಚ

  ಕಡ್ಲೇ ಬೇಳೆ - 1 ಟೇಬಲ್ ಚಮಚ

  ಮಸಾಲೆ (ಏಲಕ್ಕಿ, ದಾಲ್ಚಿನ್ನಿ, ಲವಂಗ)- 1 ಟೇಬಲ್ ಚಮಚ

  ಬೆಲ್ಲ - 1 ಟೇಬಲ್ ಚಮಚ

  ಉಪ್ಪು - ರುಚಿಗೆ ತಕ್ಕಷ್ಟು

  ಎಳ್ಳು - 1 ಟೇಬಲ್ ಚಮಚ

  ಮೇಥಿ -1 ಟೇಬಲ್ ಚಮಚ

  ಜೀರಿಗೆ - 1 ಟೇಬಲ್ ಚಮಚ

  ಕರಿಬೇವಿನ ಎಲೆ 7-8

  ಅರಿಶಿನ ಪುಡಿ-1 ಟೇಬಲ್ ಚಮಚ

Red Rice Kanda Poha
How to Prepare
 • 1. ಒಂದು ಬೌಲ್‍ಅನ್ನು ತೆಗೆದುಕೊಂಡು ಅಕ್ಕಿಯನ್ನು ಹಾಕಿ.

  2. ನೀರನ್ನು ಸೇರಿಸಿ ಸ್ವಲ್ಪ ಸಮಯ ನೆನೆಯಿಡಿ.

  3. ಕುಕ್ಕರ್ ಪಾತ್ರೆಯಲ್ಲಿ ಅಕ್ಕಿಯನ್ನು ಹಾಕಿ.

  4. ನೀರನ್ನು ಸೇರಿಸಿ

  5. ಕುಕ್ಕರ್ ಮುಚ್ಚಳವನ್ನು ಮುಚ್ಚಿ 3 ಸೀಟಿ ಕೂಗಿಸಿ.

  6. ಅನ್ನವನ್ನು ಪಕ್ಕಕ್ಕೆ ಇಡಿ.

  7. ಬದನೆಕಾಯಿಯನ್ನು ತೆಗೆದುಕೊಂಡು ತೆಳುವಾಗಿ ಹೆಚ್ಚಿಕೊಳ್ಳಿ.

  8. ಎಲ್ಲಾ ಬದನೆಕಾಯಿ ಹೋಳನ್ನು ಒಂದು ಬೌಲ್‍ನಲ್ಲಿ ಹಾಕಿ ನೀರಿನಲ್ಲಿ ನೆನೆಯಿಡಿ.

  9. ಒಂದು ಪಾತ್ರೆ ತೆಗೆದುಕೊಳ್ಳಿ.

  10. ಎಣ್ಣೆಯನ್ನು ಸೇರಿಸಿ.

  11. ಉದ್ದಿನ ಬೇಳೆ, ಜೀರಿಗೆ, ಕಡ್ಲೇ ಬೇಳೆ, ಎಳ್ಳು, ಮೇಥಿ, ಲವಂಗ, ಧನಿಯಾವನ್ನು ಸೇರಿಸಿ.

  12. ಎಲ್ಲವನ್ನು ಚೆನ್ನಾಗಿ ಹುರಿಯಿರಿ.

  13. ಮೆಣಸು ಮತ್ತು ತೆಂಗಿನ ತುರಿಯನ್ನು ಸೇರಿಸಿ, ಹುರಿಯಿರಿ.

  14. ತೆಂಗಿನಕಾಯಿ ಪರಿಮಳ ಹಾಗೂ ಎಲ್ಲಾ ಸಾಮಾಗ್ರಿಗಳು ಪ್ರತ್ಯೇಕವಾಗುವವ ವರೆಗೂ ಚೆನ್ನಾಗಿ ಹುರಿಯಿರಿ.

  15. ಅದನ್ನು 3-4 ನಿಮಿಷ ಆರಲು ಬಿಡಿ.

  16. ಹುರಿದುಕೊಂಡ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸರ್ ಪಾತ್ರೆಗೆ ವರ್ಗಾಯಿಸಿ.

  17. ನುಣ್ಣನೆಯ ಪುಡಿಯಂತೆ ರುಬ್ಬಿಕೊಳ್ಳಿ.

  18. ಒಂದು ಪಾತ್ರೆಯನ್ನು ತೆಗೆದುಕೊಳ್ಳಿ.

  19. ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡ್ಲೇ ಬೇಳೆ, ಕರಿಬೇವಿನ ಎಲೆ, ಅರಿಶಿನ, ಬದನೆಕಾಯಿ ಎಲ್ಲವನ್ನೂ ಸೇರಿಸಿ ಒಂದು ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ.

  20. ಹುಣಸೆ ರಸ ಮತ್ತು ಬೆಲ್ಲವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

  21. ಉಪ್ಪನ್ನು ಸೇರಿಸಿ.

  22. ಎಲ್ಲವೂ ಚೆನ್ನಾಗಿ ಬೆರೆವಂತೆ ತಿರುವಿ, 2-3 ನಿಮಿಷಗಳಕಾಲ ಬೇಯಲು ಬಿಡಿ.

  23. ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ.

  24. ಮುಚ್ಚಳವನ್ನು ಮುಚ್ಚಿ, ಎಲ್ಲವೂ ಚೆನ್ನಾಗಿ ಹೀರಿಕೊಳ್ಳುವಂತೆ 2-3 ನಿಮಿಷಗಳ ಕಾಲ ಬೇಯಿಸಿ.

  25. ಮುಚ್ಚಳವನ್ನು ತೆರೆದು ಬದನೆಕಾಯಿಯನ್ನು ತಿರುವಿ.

  26. ಅನ್ನವನ್ನು ಸೇರಿಸಿ ಚೆನ್ನಾಗಿ ತಿರುವಿ.

  27. ಒಂದು ಬೌಲ್‍ಗೆ ವರ್ಗಾಯಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

  28. ಉಪ್ಪಿನಕಾಯಿ ಅಥವಾ ಮೊಸರಿನೊಂದಿಗೆ ಸವಿಯಲು ನೀಡಿ.

Instructions
 • 1. ಅನ್ನವನ್ನು ಮೊದಲೇ ಮಾಡಿಕೊಂಡು ಗಂಟಾಗದಂತೆ ಸ್ವಲ್ಪ ಸಮಯ ಆರಲು ಬಿಡಿ.
 • 2. ಬದನೆಕಾಯಿಯನ್ನು ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿಟ್ಟುಕೊಂಡರೆ ಕಡಿಮೆ ಸಮಯದಲ್ಲಿಯೇ ಬೇಯುತ್ತದೆ.
Nutritional Information
 • ಬಡಿಸುವ ಪ್ರಮಾಣ - 1 ಬೌಲ್
 • ಕ್ಯಾಲೋರಿ - 150 ಕ್ಯಾಲ್
 • ಕೊಬ್ಬು - 7 ಗ್ರಾಂ.
 • ಪ್ರೋಟೀನ್ - 2 ಗ್ರಾಂ.
 • ಕಾರ್ಬೋಹೈಡ್ರೇಟ್ - 18 ಗ್ರಾಂ.
 • ಫೈಬರ್ - 2 ಗ್ರಾಂ.

ಚಿತ್ರ ವಿವರಣೆ

1. ಒಂದು ಬೌಲ್‍ಅನ್ನು ತೆಗೆದುಕೊಂಡು ಅಕ್ಕಿಯನ್ನು ಹಾಕಿ.

Vangi bhaat recipe

2. ನೀರನ್ನು ಸೇರಿಸಿ ಸ್ವಲ್ಪ ಸಮಯ ನೆನೆಯಿಡಿ.

Vangi bhaat recipe
Vangi bhaat recipe
Vangi bhaat recipe

3. ಕುಕ್ಕರ್ ಪಾತ್ರೆಯಲ್ಲಿ ಅಕ್ಕಿಯನ್ನು ಹಾಕಿ.

Vangi bhaat recipe
Vangi bhaat recipe

4. ನೀರನ್ನು ಸೇರಿಸಿ

Vangi bhaat recipe
Vangi bhaat recipe

5. ಕುಕ್ಕರ್ ಮುಚ್ಚಳವನ್ನು ಮುಚ್ಚಿ 3 ಸೀಟಿ ಕೂಗಿಸಿ.

Vangi bhaat recipe

6. ಅನ್ನವನ್ನು ಪಕ್ಕಕ್ಕೆ ಇಡಿ.

Vangi bhaat recipe
Vangi bhaat recipe
Vangi bhaat recipe

7. ಬದನೆಕಾಯಿಯನ್ನು ತೆಗೆದುಕೊಂಡು ತೆಳುವಾಗಿ ಹೆಚ್ಚಿಕೊಳ್ಳಿ.

Vangi bhaat recipe

8. ಎಲ್ಲಾ ಬದನೆಕಾಯಿ ಹೋಳನ್ನು ಒಂದು ಬೌಲ್‍ನಲ್ಲಿ ಹಾಕಿ ನೀರಿನಲ್ಲಿ ನೆನೆಯಿಡಿ.

Vangi bhaat recipe

9. ಒಂದು ಪಾತ್ರೆ ತೆಗೆದುಕೊಳ್ಳಿ.

Vangi bhaat recipe

10. ಎಣ್ಣೆಯನ್ನು ಸೇರಿಸಿ.

Vangi bhaat recipe
Vangi bhaat recipe
Vangi bhaat recipe
Vangi bhaat recipe
Vangi bhaat recipe
Vangi bhaat recipe
Vangi bhaat recipe

11. ಉದ್ದಿನ ಬೇಳೆ, ಜೀರಿಗೆ, ಕಡ್ಲೇ ಬೇಳೆ, ಎಳ್ಳು, ಮೇಥಿ, ಲವಂಗ, ಧನಿಯಾವನ್ನು ಸೇರಿಸಿ.

Vangi bhaat recipe

12. ಎಲ್ಲವನ್ನು ಚೆನ್ನಾಗಿ ಹುರಿಯಿರಿ.

Vangi bhaat recipe
Vangi bhaat recipe
Vangi bhaat recipe

13. ಮೆಣಸು ಮತ್ತು ತೆಂಗಿನ ತುರಿಯನ್ನು ಸೇರಿಸಿ, ಹುರಿಯಿರಿ.

Vangi bhaat recipe

14. ತೆಂಗಿನಕಾಯಿ ಪರಿಮಳ ಹಾಗೂ ಎಲ್ಲಾ ಸಾಮಾಗ್ರಿಗಳು ಪ್ರತ್ಯೇಕವಾಗುವವ ವರೆಗೂ ಚೆನ್ನಾಗಿ ಹುರಿಯಿರಿ.

Vangi bhaat recipe

15. ಅದನ್ನು 3-4 ನಿಮಿಷ ಆರಲು ಬಿಡಿ.

Vangi bhaat recipe

16. ಹುರಿದುಕೊಂಡ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸರ್ ಪಾತ್ರೆಗೆ ವರ್ಗಾಯಿಸಿ.

Vangi bhaat recipe
Vangi bhaat recipe

17. ನುಣ್ಣನೆಯ ಪುಡಿಯಂತೆ ರುಬ್ಬಿಕೊಳ್ಳಿ.

Vangi bhaat recipe

18. ಒಂದು ಪಾತ್ರೆಯನ್ನು ತೆಗೆದುಕೊಳ್ಳಿ.

Vangi bhaat recipe
Vangi bhaat recipe
Vangi bhaat recipe
Vangi bhaat recipe
Vangi bhaat recipe
Vangi bhaat recipe
Vangi bhaat recipe
Vangi bhaat recipe

19. ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡ್ಲೇ ಬೇಳೆ, ಕರಿಬೇವಿನ ಎಲೆ, ಅರಿಶಿನ, ಬದನೆಕಾಯಿ ಎಲ್ಲವನ್ನೂ ಸೇರಿಸಿ ಒಂದು ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ.

Vangi bhaat recipe
Vangi bhaat recipe
Vangi bhaat recipe

20. ಹುಣಸೆ ರಸ ಮತ್ತು ಬೆಲ್ಲವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

Vangi bhaat recipe

21. ಉಪ್ಪನ್ನು ಸೇರಿಸಿ.

Vangi bhaat recipe
Vangi bhaat recipe

22. ಎಲ್ಲವೂ ಚೆನ್ನಾಗಿ ಬೆರೆವಂತೆ ತಿರುವಿ, 2-3 ನಿಮಿಷಗಳಕಾಲ ಬೇಯಲು ಬಿಡಿ.

Vangi bhaat recipe
Vangi bhaat recipe

23. ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ.

Vangi bhaat recipe
Vangi bhaat recipe

24. ಮುಚ್ಚಳವನ್ನು ಮುಚ್ಚಿ, ಎಲ್ಲವೂ ಚೆನ್ನಾಗಿ ಹೀರಿಕೊಳ್ಳುವಂತೆ 2-3 ನಿಮಿಷಗಳ ಕಾಲ ಬೇಯಿಸಿ.

Vangi bhaat recipe
Vangi bhaat recipe

25. ಮುಚ್ಚಳವನ್ನು ತೆರೆದು ಬದನೆಕಾಯಿಯನ್ನು ತಿರುವಿ.

Vangi bhaat recipe
Vangi bhaat recipe

26. ಅನ್ನವನ್ನು ಸೇರಿಸಿ ಚೆನ್ನಾಗಿ ತಿರುವಿ.

Vangi bhaat recipe
Vangi bhaat recipe

27. ಒಂದು ಬೌಲ್‍ಗೆ ವರ್ಗಾಯಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

Vangi bhaat recipe

28. ಉಪ್ಪಿನಕಾಯಿ ಅಥವಾ ಮೊಸರಿನೊಂದಿಗೆ ಸವಿಯಲು ನೀಡಿ.

Vangi bhaat recipe
Vangi bhaat recipe
Vangi bhaat recipe
[ 4 of 5 - 53 Users]
Story first published: Thursday, March 8, 2018, 11:35 [IST]