Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ರವೆ ಪಾಯಸ ರೆಸಿಪಿ
ರವೆ, ಹಾಲು, ಸಕ್ಕರೆ ತುಪ್ಪಗಳ ಸಂಯೋಗದಲ್ಲಿ ತಯಾರಿಸುವ ಈ ಸಿಹಿ ತಿಂಡಿಯನ್ನು ಹಬ್ಬಗಳ ಸಂದರ್ಭದಲ್ಲಿ ಅಥವಾ ಹೆಚ್ಚು ಸಮಯವಿಲ್ಲದ ವೇಳೆಯಲ್ಲಿ ಸುಲಭವಾಗಿ ತಯಾರಿಸಬಹುದು. ಗಂಜಿಯಂತೆ ಹೋಲುವ ಈ ಸಿಹಿ ಖಾದ್ಯ ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುವುದು. ಅಲ್ಲದೆ ಸುಲಭವಾಗಿ ಜೀರ್ಣವಾಗುವುದು. ಇದನ್ನು ಕೆಲವು ಸ್ಥಳಗಳಿಗೆ ತಕ್ಕಂತೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ರವೆ ಪಾಯಸ, ಸೂಜಿ ರವೆ ಪಾಯಸ, ಗೋಧಿರವೆ ಪಾಯಸ ಹೀಗೆ ವಿವಿಧ ಬಗೆಯಲ್ಲಿ ಹೆಸರಿಸುತ್ತಾರೆ.
ಬಹಳ ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದಾದ ಈ ಪಾಯಸವನ್ನು ನೀವು ಹಬ್ಬದ ಸಂದರ್ಭದಲ್ಲಿ ತಯಾರಿಸಬೇಕು ಎನ್ನುವ ಹವಣಿಕೆಯಲ್ಲಿದ್ದರೆ ಈ ಮುಂದೆ ನೀಡಿರುವ ವಿಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯಲ್ಲಿ ವಿವರಿಸಲಾಗಿದೆ.

Recipe By: ಮೀನಾ ಭಂಡಾರಿ
Recipe Type: ಸಿಹಿ ತಿಂಡಿ
Serves: 2
-
ತುಪ್ಪ -1 ಟೇಬಲ್ ಚಮಚ
ಇಡಿಯಾದ ಗೋಡಂಬಿ-4
ಒಣದ್ರಾಕ್ಷಿ- 7-8
ಸೂಜಿ ರವೆ -3 ಟೇಬಲ್ ಚಮಚ
ಹಾಲು -1,1/2 ಕಪ್
ನೀರು 1/2 ಕಪ್
ಸಕ್ಕರೆ 2 ಟೇಬಲ್ ಚಮಚ
-
1. ಒಂದು ಪಾತ್ರೆಯಲ್ಲಿ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ.
2. ಇಡಿಯಾಗಿರುವ ಗೋಡಂಬಿಯನ್ನು ಸೇರಿಸಿ, ಹೊಂಬಣ್ಣಕ್ಕೆ ಬರುವ ವರೆಗೆ ಹುರಿಯಿರಿ.
3. ನಂತರ ಒಂದು ಕಪ್ಗೆ ವರ್ಗಾಯಿಸಿ.
4. ಒಣ ದ್ರಾಕ್ಷಿಯನ್ನು ಸೇರಿಸಿ, ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಒಂದು ಕಪ್ಗೆ ವರ್ಗಾಯಿಸಿ.
5. ಅದೇ ಪಾತ್ರೆಯಲ್ಲಿ ರವೆಯನ್ನು ಸೇರಿಸಿ, ಹುರಿಯಿರಿ.
6. ರವೆ ಉತ್ತಮ ಪರಿಮಳದೊಂದಿಗೆ ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
7. ನಂತರ ಒಂದೆಡೆ ಆರಲು ಇಡಿ.
8. ಇನ್ನೊಂದು ಪಾತ್ರೆಯಲ್ಲಿ ಅರ್ಧ ಕಪ್ ಹಾಲು ಮತ್ತು ನೀರನ್ನು ಸೇರಿಸಿ ಕುದಿಯಲು ಬಿಡಿ.
9. ಒಮ್ಮೆ ಕುದಿಯಲು ಪ್ರಾರಂಭಿಸಿದ ನಂತರ ಹುರಿದ ರವೆಯನ್ನು ಸೇರಿಸಿ.
10. ಒಮ್ಮೆ ಚೆನ್ನಾಗಿ ತಿರುವಿ, ಬಳಿಕ ಒಂದು ಕಪ್ ಹಾಲನ್ನು ಸೇರಿಸಿ.
11. ಮಿಶ್ರಣ ಗಂಟಾಗದಂತೆ ನಿರಂತರವಾಗಿ ತಿರುವುತ್ತಲೇ ಇರಿ.
12. ಸಕ್ಕರೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
13. ಉರಿಯನ್ನು ಆರಿಸಿ, ಹುರಿದುಕೊಂಡ ಒಣ ಹಣ್ಣುಗಳನ್ನು ಸೇರಿಸಿ.
14. ಬಿಸಿ ಇರುವಾಗಲೇ ಸವಿಯಲು ನೀಡಿ.
- 1. ರವೆಯನ್ನು ಸೇರಿಸಿದ ನಂತರ ಹಾಲನ್ನು ನಿರಂತರವಾಗಿ ಕೈಯಾಡಿಸುತ್ತಲೇ ಇರಬೇಕು. ಇಲ್ಲವಾದರೆ ಗಂಟಾಗುವುದು.
- 2. ನೀವು ಪಾಯಸವನ್ನು ಇನ್ನಷ್ಟು ಶ್ರೀಮಂತಗೊಳಿಸಲು ನೀರನ್ನು ಸೇರಿಸದೆ ಕೇವಲ ಹಾಲಿನಲ್ಲಿಯೇ ತಯಾರಿಸಬಹುದು.
- 3. ವಿಶೇಷ ಪರಿಮಳದಿಂದ ಕೂಡಿರಲು ಕೇಸರಿ ಎಳೆಯನ್ನು ಸೇರಿಸಬಹುದು.
- ಬಡಿಸುವ ಪ್ರಮಾಣ - 1 ಕಪ್
- ಕ್ಯಾಲೋರಿ - 208 ಕ್ಯಾಲ್
- ಕೊಬ್ಬು - 7 ಗ್ರಾಂ.
- ಪ್ರೋಟೀನ್ - 8 ಗ್ರಾಂ.
- ಕಾರ್ಬೋಹೈಡ್ರೇಟ್ - 58 ಗ್ರಾಂ.
- ಸಕ್ಕರೆ - 25 ಗ್ರಾಂ
- ಫೈಬರ್ - 1 ಗ್ರಾಂ.
ತಯಾರಿಸುವ ವಿಧಾನ:
1. ಒಂದು ಪಾತ್ರೆಯಲ್ಲಿ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ.

2. ಇಡಿಯಾಗಿರುವ ಗೋಡಂಬಿಯನ್ನು ಸೇರಿಸಿ, ಹೊಂಬಣ್ಣಕ್ಕೆ ಬರುವ ವರೆಗೆ ಹುರಿಯಿರಿ.

3. ನಂತರ ಒಂದು ಕಪ್ಗೆ ವರ್ಗಾಯಿಸಿ.

4. ಒಣ ದ್ರಾಕ್ಷಿಯನ್ನು ಸೇರಿಸಿ, ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಒಂದು ಕಪ್ಗೆ ವರ್ಗಾಯಿಸಿ.

5. ಅದೇ ಪಾತ್ರೆಯಲ್ಲಿ ರವೆಯನ್ನು ಸೇರಿಸಿ, ಹುರಿಯಿರಿ.

6. ರವೆ ಉತ್ತಮ ಪರಿಮಳದೊಂದಿಗೆ ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.

7. ನಂತರ ಒಂದೆಡೆ ಆರಲು ಇಡಿ.

8. ಇನ್ನೊಂದು ಪಾತ್ರೆಯಲ್ಲಿ ಅರ್ಧ ಕಪ್ ಹಾಲು ಮತ್ತು ನೀರನ್ನು ಸೇರಿಸಿ ಕುದಿಯಲು ಬಿಡಿ.

9. ಒಮ್ಮೆ ಕುದಿಯಲು ಪ್ರಾರಂಭಿಸಿದ ನಂತರ ಹುರಿದ ರವೆಯನ್ನು ಸೇರಿಸಿ.

10. ಒಮ್ಮೆ ಚೆನ್ನಾಗಿ ತಿರುವಿ, ಬಳಿಕ ಒಂದು ಕಪ್ ಹಾಲನ್ನು ಸೇರಿಸಿ.

11. ಮಿಶ್ರಣ ಗಂಟಾಗದಂತೆ ನಿರಂತರವಾಗಿ ತಿರುವುತ್ತಲೇ ಇರಿ.

12. ಸಕ್ಕರೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

13. ಉರಿಯನ್ನು ಆರಿಸಿ, ಹುರಿದುಕೊಂಡ ಒಣ ಹಣ್ಣುಗಳನ್ನು ಸೇರಿಸಿ.

14. ಬಿಸಿ ಇರುವಾಗಲೇ ಸವಿಯಲು ನೀಡಿ.

Click it and Unblock the Notifications