For Quick Alerts
ALLOW NOTIFICATIONS  
For Daily Alerts

Kayi Holige recipe: ಯುಗಾದಿ ಸ್ಪೆಷಲ್‌: ಕಾಯಿ ಹೋಳಿಗೆ ರೆಸಿಪಿ

Posted By:
|

ಹೊಸ ಸಂತ್ಸರದ ನಾಂದಿಯಾಗಿ ಯುಗಾದಿ ಬರುತ್ತಿದೆ. ಏಪ್ರಿಲ್‌ 2ರಂದು ಯುಗಾದಿ ಹಬ್ಬವನ್ನು ಆಚರಿಸಲಾಗುವುದು. ಯುಗಾದಿಗೆ ಬೇವು-ಬೆಲ್ಲ,ಯುಗಾದಿ ಪಚಡಿ ಜೊತೆಗೆ ಹೋಳಿಗೆ ಕೂಡ ಮಾಡಲಾಗುವುದು. ಅನೇಕ ಬಗೆಯ ಹೋಳಿಗೆ ಮಾಡಬಹುದು. ನಾವಿಲ್ಲ ಯುಗಾದಿ ಸ್ಪೆಷಲ್ ಆಗಿ ಕಾಯಿ ಹೋಳಿಗೆ ರೆಸಿಪಿಯನ್ನು ನೀಡಿದ್ದೇವೆ ನೋಡಿ:

Kai Holige Recipe
Kai Holige, ಕಾಯಿ ಹೋಳಿಗೆ ರೆಸಿಪಿ
Kai Holige, ಕಾಯಿ ಹೋಳಿಗೆ ರೆಸಿಪಿ
Prep Time
1 Hours0 Mins
Cook Time
3M
Total Time
1 Hours3 Mins

Recipe By: Reena TK

Recipe Type: sweet

Serves: 5

Ingredients
  • ಬೇಕಾಗುವ ಸಾಮಗ್ರಿ

    ಚಿರೋಟಿ ಅಥವಾ ಸೂಜಿ ರವೆ 1 ಕಪ್

    ಮೈದಾ 1/2 ಕಪ್‌

    ಅರಿಶಿಣ ಪುಡಿ 1/4 ಚಮಚ

    ನೀರು 1 1/4 ಕಪ್‌

    ತುರಿದ ತೆಂಗಿನಕಾಯಿ 1 ಬೌಲ್‌

    ಬೆಲ್ಲ 1 ಕಪ್‌

    ಏಲಕ್ಕಿ ಪುಡಿ 1/2 ಚಮಚ

    ಎಣ್ಣೆ 1 ಕಪ್‌

    ಪ್ಲಾಸ್ಟಿಕ್‌ ಶೀಟ್‌

Red Rice Kanda Poha
How to Prepare
  • ಮಾಡುವುದು ಹೇಗೆ?

    * ಒಂದು ದೊಡ್ಡ ಬೌಲ್‌ಗೆ ಸೂಜಿ ರವೆ ಹಾಕಿ.

    * ನಂತರ ಮೈದಾ ಹಾಗೂ ಅರಿಶಿಣ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

    * 2 ಚಮಚ ಎಣ್ಣೆ ಹಾಕಿ

    * ನಂತರ ಮುಕ್ಕಾಲು ಕಪ್‌ ನೀರು ತೆಗೆದುಕೊಂಡು ಸ್ವಲ್ಪ-ಸ್ವಲ್ಪ ಸೇರಿಸುತ್ತಾ ಮಿಕ್ಸ್ ಮಾಡಿ.

    ಒಮ್ಮೆಲೇ ಹಾಕಿದರೆ ನೀರು ಅಧಿಕವಾಗುವ ಸಾಧ್ಯತೆ ಇದೆ. ಆದ್ದರಿಂದ ಸ್ವಲ್ಪ-ಸ್ವಲ್ಪವಾಗಿ ಸೇರಿಸಬೇಕು.

    * ನಂತರ 2 ಚಮಚ ಎಣ್ಣೆ ಹಾಕಿ ಮಿಕ್ಸ್ ಮಾಡಿ

    * ಮತ್ತೆ 4 ಚಮಚ ಎಣ್ಣೆ ಹಾಕಿ ಮಿಕ್ಸ್ ಮಾಡಿ.

    * ನಂತರ ಬೌಲ್‌ನ ಮುಚ್ಚಿ 5 ನಿಮಿಷ ಬಿಡಿ.

    * ಈಗ ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ರುಬ್ಬಿ ಇಡಿ. ನಿಮಗೆ ತೆಂಗಿನ ತುರಿ ಬಾಯಿಗೆ ಸಿಗಬಾರದು ಎಂದಾದರೆ ಸ್ವಲ್ಪ ನೀರು ಹಾಕಿ ನುಣ್ಣನೆ ರುಬ್ಬಿಕೊಳ್ಳಿ, ಆದರೆ ರುಬ್ಬಿದ ಮಿಶ್ರಣ ನೀರಾಗಿರಬಾರದು.

    * ಈಗ ಬೆಲ್ಲದ ಪಾಕ ತಯಾರಿಸಿ, ಬೆಲ್ಲದ ಪಾಕ ಗಟ್ಟಿಯಾಗುತ್ತಾ ಬರುವಾಗ ಅದಕ್ಕೆ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ.

    * ಈಗ ಮೈದಾ ರವೆ ಮಿಶ್ರಣದಿಂದ ಚಪಾತಿಗೆ ಉಂಡೆ ಕಟ್ಟಿದಂತೆ ಕಟ್ಟಿ.

    * ಒಂದು ಪ್ಲೇಟ್‌ ಅಥವಾ ಚಪಾತಿ ಮಣೆ ಮೇಲೆ ಪ್ಲಾಸ್ಟಿಕ್‌ ಹಾಕಿ ಎಣ್ಣೆ ಸವರಿ ಮೈದಾ ಮಿಶ್ರಣ ಲಟ್ಟಿಸಿ, ಮಧ್ಯದಲ್ಲಿ ಕೊಬ್ಬರಿ-ಬೆಲ್ಲ ಮಿಶ್ರಣ ಹಾಕಿ ಮತ್ತೆ ಉಂಡೆ ಕಟ್ಟಿ ಲಟ್ಟಿಸಿ.

    * ಈಗ ದೋಸೆ ತವಾ ಉರಿ ಮೇಲೆ ಇಡಿ, ಅದಕ್ಕೆ ಎಣ್ಣೆ ಅಥವಾ ತುಪ್ಪ ಸವರಿ ಎರಡು ಬದಿ ಬೇಯಿಸಿದರೆ ಕಾಯಿ ಹೋಳಿಗೆ ರೆಡಿ.

    ರೆಡಿಯಾದ ಕಾಯಿ ಹೋಳಿಗೆಯನ್ನು ಬಿಸಿ ತುಪ್ಪದ ಜೊತೆ ಸವಿಯಿರಿ.

Instructions
  • * ನೀವು ಎಷ್ಟು ಚೆನ್ನಾಗಿ ಕಲೆಸುತ್ತೀರಾ ಅಷ್ಟು ಮೃದುವಾಗಿರುತ್ತೆ, * ನೀವು ಬೆಲ್ಲ-ಕಾಯಿ ಮಿಶ್ರಣವನ್ನು ಮಧ್ಯದಲ್ಲಿ ಹಾಕಿ ತಟ್ಟಿ * ಹೋಳಿಗೆ ಸುತ್ತ ತೆಳುವಾಗಿರಲಿ, ಮಂದವಾಗಿದ್ದರೆ ಮಧ್ಯದಲ್ಲಿ ಸೀದು ಹೋಗುವುದು
Nutritional Information

ಮಾಡುವುದು ಹೇಗೆ?
* ಒಂದು ದೊಡ್ಡ ಬೌಲ್‌ಗೆ ಸೂಜಿ ರವೆ ಹಾಕಿ.
* ನಂತರ ಮೈದಾ ಹಾಗೂ ಅರಿಶಿಣ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

Kai Holige Recipe
* 2 ಚಮಚ ಎಣ್ಣೆ ಹಾಕಿ
* ನಂತರ ಮುಕ್ಕಾಲು ಕಪ್‌ ನೀರು ತೆಗೆದುಕೊಂಡು ಸ್ವಲ್ಪ-ಸ್ವಲ್ಪ ಸೇರಿಸುತ್ತಾ ಮಿಕ್ಸ್ ಮಾಡಿ.
Kai Holige Recipe
ಒಮ್ಮೆಲೇ ಹಾಕಿದರೆ ನೀರು ಅಧಿಕವಾಗುವ ಸಾಧ್ಯತೆ ಇದೆ. ಆದ್ದರಿಂದ ಸ್ವಲ್ಪ-ಸ್ವಲ್ಪವಾಗಿ ಸೇರಿಸಬೇಕು.
* ನಂತರ 2 ಚಮಚ ಎಣ್ಣೆ ಹಾಕಿ ಮಿಕ್ಸ್ ಮಾಡಿ
* ಮತ್ತೆ 4 ಚಮಚ ಎಣ್ಣೆ ಹಾಕಿ ಮಿಕ್ಸ್ ಮಾಡಿ.

* ನಂತರ ಬೌಲ್‌ನ ಮುಚ್ಚಿ 5 ನಿಮಿಷ ಬಿಡಿ.
* ಈಗ ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ರುಬ್ಬಿ ಇಡಿ. ನಿಮಗೆ ತೆಂಗಿನ ತುರಿ ಬಾಯಿಗೆ ಸಿಗಬಾರದು ಎಂದಾದರೆ ಸ್ವಲ್ಪ ನೀರು ಹಾಕಿ ನುಣ್ಣನೆ ರುಬ್ಬಿಕೊಳ್ಳಿ, ಆದರೆ ರುಬ್ಬಿದ ಮಿಶ್ರಣ ನೀರಾಗಿರಬಾರದು.
* ಈಗ ಬೆಲ್ಲದ ಪಾಕ ತಯಾರಿಸಿ, ಬೆಲ್ಲದ ಪಾಕ ಗಟ್ಟಿಯಾಗುತ್ತಾ ಬರುವಾಗ ಅದಕ್ಕೆ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ.

Kai Holige Recipe
Kai Holige Recipe

* ಈಗ ಮೈದಾ ರವೆ ಮಿಶ್ರಣದಿಂದ ಚಪಾತಿಗೆ ಉಂಡೆ ಕಟ್ಟಿದಂತೆ ಕಟ್ಟಿ.
* ಒಂದು ಪ್ಲೇಟ್‌ ಅಥವಾ ಚಪಾತಿ ಮಣೆ ಮೇಲೆ ಪ್ಲಾಸ್ಟಿಕ್‌ ಹಾಕಿ ಎಣ್ಣೆ ಸವರಿ ಮೈದಾ ಮಿಶ್ರಣ ಲಟ್ಟಿಸಿ, ಮಧ್ಯದಲ್ಲಿ ಕೊಬ್ಬರಿ-ಬೆಲ್ಲ ಮಿಶ್ರಣ ಹಾಕಿ ಮತ್ತೆ ಉಂಡೆ ಕಟ್ಟಿ ಲಟ್ಟಿಸಿ.

Kai Holige Recipe
Kai Holige Recipe

* ಈಗ ದೋಸೆ ತವಾ ಉರಿ ಮೇಲೆ ಇಡಿ, ಅದಕ್ಕೆ ಎಣ್ಣೆ ಅಥವಾ ತುಪ್ಪ ಸವರಿ ಎರಡು ಬದಿ ಬೇಯಿಸಿದರೆ ಕಾಯಿ ಹೋಳಿಗೆ ರೆಡಿ.

Kai Holige Recipe

ರೆಡಿಯಾದ ಕಾಯಿ ಹೋಳಿಗೆಯನ್ನು ಬಿಸಿ ತುಪ್ಪದ ಜೊತೆ ಸವಿಯಿರಿ.
[ 4 of 5 - 79 Users]
X
Desktop Bottom Promotion