ಟೊಮೆಟೊ ರಸಂ ರೆಸಿಪಿ

Posted By: Divya pandith
Subscribe to Boldsky

ಟೊಮೆಟೊ ರಸಂ ಭಾರತೀಯ ಸಾಂಪ್ರದಾಯಿಕ ಅಡುಗೆಯಲ್ಲಿ ಒಂದು. ಇದನ್ನು ಹೆಚ್ಚಾಗಿ ದಕ್ಷಿಣ ಭಾರತೀಯರು ತಯಾರಿಸುತ್ತಾರೆ. ನಿತ್ಯದ ಅಡುಗೆಯಾಗಿ ತಯಾರಿಸುವ ರಸಂ ಅನ್ನದ ಜೊತೆ ತಿನ್ನಲು ಒಳ್ಳೆಯ ಸಾಥ್ ನೀಡುತ್ತದೆ. ಟೊಮೆಟೊ ಹಾಗೂ ರುಚಿಕರವಾದ ಮಸಾಲೆ ಮಿಶ್ರಣದೊಂದಿಗೆ ತಯಾರಿಸುವ ಈ ಸೂಪ್ ಅನಾರೋಗ್ಯಕ್ಕೂ ಉತ್ತಮ ಔಷಧಿ ಎಂದು ಕರೆಯುತ್ತಾರೆ. ಮಕ್ಕಳು ಮತ್ತು ವಯಸ್ಕರು ಯಾರೇ ಇರಲಿ ಅನಾರೋಗ್ಯ ಉಂಟಾದಾಗ ಹೆಚ್ಚಿನದಾಗಿ ಈ ರಸಂಅನ್ನು ಅನ್ನದೊಂದಿಗೆ ಸವಿಯಲು ನೀಡುತ್ತಾರೆ.

ರಸಂ ಪಾಕವಿಧಾನದಲ್ಲಿ ಹಲವಾರು ಬಗೆಗಳಿರುವುದನ್ನು ಕಾಣಬಹುದು. ಬೇಯಿಸಿದ ತೊಗರಿ ಬೇಳೆಯೊಂದಿಗೆ ತಯಾರಿಸುವ ರಸಂ, ಕೇವಲ ಟೊಮೆಟೊ ರಸದ ರಸಂ, ನಿಂಬೆ ರಸಂ, ಮೆಣಸಿನ ಕಾಳಿನ ರಸಂ, ಹುರುಳಿಕಾಳಿನ ರಸಂ ಹೀಗೆ ವಿವಿಧ ವಿಧಗಳಿಗೆ. ಟೊಮೆಟೊ ರಸಂಅನ್ನು ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ನಿತ್ಯದ ಅಡುಗೆಯನ್ನಾಗಿ ತಯಾರಿಸುತ್ತಾರೆ.

ರಸಂ ಅತ್ಯಂತ ಸರಳ ಹಾಗೂ ಆರೋಗ್ಯಕರವಾದ ದಕ್ಷಿಣ ಭಾರತ ಶೈಲಿಯ ಪಾಕವಿಧಾನ. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಅಡುಗೆ ವಿಧಾನವನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಇಲ್ಲಿ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ಪರಿಶೀಲಿಸಿ.

rasam recipe
ರಸಂ ರೆಸಿಪಿ| ಟೊಮೆಟೊ ರಸಂ ಮಾಡುವುದು ಹೇಗೆ| ಲೆಂತಿಲ್ ಇಲ್ಲದೆ ರಸಂ ಮಾಡುವುದು ಹೇಗೆ| ಟೊಮೆಟೊ ರಸಂ ರೆಸಿಪಿ
ರಸಂ ರೆಸಿಪಿ| ಟೊಮೆಟೊ ರಸಂ ಮಾಡುವುದು ಹೇಗೆ| ಲೆಂತಿಲ್ ಇಲ್ಲದೆ ರಸಂ ಮಾಡುವುದು ಹೇಗೆ| ಟೊಮೆಟೊ ರಸಂ ರೆಸಿಪಿ
Prep Time
5 Mins
Cook Time
40M
Total Time
45 Mins

Recipe By: ಅರ್ಚನ ವಿ.

Recipe Type: ಸೈಡ್ ಡಿಶ್/ಹೆಚ್ಚುವರಿ ಭಕ್ಷ್ಯ

Serves: 2 ಮಂದಿಗೆ

Ingredients
 • ಟೊಮೆಟೊ - 3

  ನೀರು - 3 ಕಪ್

  ಸಿಪ್ಪೆ ಇರುವ ಬೆಳ್ಳುಳ್ಳಿ - 4 ಎಸಳು

  ಕಾಳು ಮೆಣಸು - 1 ಟೀ ಚಮಚ

  ಜೀರಿಗೆ - 2 ಟೀ ಚಮಚ

  ಉಪ್ಪು - ರುಚಿಗೆ ತಕ್ಕಷ್ಟು

  ಹುಣಸೆ ಹಣ್ಣು - 1/2 ನಿಂಬೆ ಗಾತ್ರದ್ದು

  ರಸಂ ಪುಡಿ - 2 ಟೇಬಲ್ ಚಮಚ

  ಎಣ್ಣೆ - 2 ಟೇಬಲ್ ಚಮಚ

  ಸಾಸಿವೆ ಕಾಳು - 1 ಟೀ ಚಮಚ

  ಕರಿಬೇವು/ ಒಗ್ಗರಣೆ ಸೊಪ್ಪಿನ ಎಲೆ - 8-10

  ಇಂಗು - ಒಂದು ಚಿಟಕಿ

  ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - 1/2 ಕಪ್

  ತುಪ್ಪ - 2 ಟೀ ಚಮಚ

Red Rice Kanda Poha
How to Prepare
 • 1. ಟೊಮೆಟೊ ತೆಗೆದುಕೊಂಡು ಅದರ ಚೊಟ್ಟಿನ ಭಾಗವನ್ನು ಸ್ವಲ್ಪ ಕತ್ತರಿಸಿ ತೆಗೆಯಿರಿ.

  2. ಟೊಮೆಟೊ ಮೇಲ್ಭಾಗದಿಂದ 2-3 ಲಂಭ/ಉದ್ದವಾಗಿ ಸೀಳಿದಂತೆ ಮಾಡಿ.

  3. ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಲು ಇಡಿ.

  4. ಅದಕ್ಕೆ ನೀರನ್ನು ಸೇರಿಸಿ, ಸಂಪೂರ್ಣವಾಗಿ ಬೆಂದು ಮೃದುವಾಗಲು 15 ನಿಮಿಷಗಳ ಕಾಲ ಬಿಡಿ.

  5. ಒಂದು ಬೌಲ್‍ಗೆ ಟೊಮೆಟೊವನ್ನು ವರ್ಗಾಯಿಸಿ ಹಾಗೂ ನಂತರದ ಬಳಕೆಗೆ ನೀರನ್ನು ಒಂದೆಡೆ ಇಡಿ.

  6. ಅವು ತಣ್ಣಗಾಗಲು 5 ನಿಮಿಷ ಬಿಡಿ.

  7. ಟೊಮೆಟೊ ಸಿಪ್ಪೆಯನ್ನು ತೆಗೆದು ಚೆನ್ನಾಗಿ ಕಿವುಚಿ ಒಂದೆಡೆ ಇಡಿ.

  8. ಜಜ್ಜುವ ಕಲ್ಲಿನ ಪಾತ್ರೆಗೆ ಬೆಳ್ಳುಳ್ಳಿಯನ್ನು ಸೇರಿಸಿ.

  9. ನಂತರ ಕಾಳು ಮೆಣಸು ಮತ್ತು ಜೀರಿಗೆಯನ್ನು ಸೇರಿಸಿ.

  10. ಇವೆಲ್ಲವನ್ನು ಒಟ್ಟಾಗಿ ಜಜ್ಜಿ ಒಂದು ನುಣ್ಣನೆಯ ಪೇಸ್ಟ್‍ನಂತೆ ಮಾಡಿಕೊಳ್ಳಿ.

  11. ಒಂದು ಪಾತ್ರೆಯಲ್ಲಿ ಬೇಯಿಸಿಕೊಂಡ ನೀರನ್ನು ಹಾಕಿ 2 ನಿಮಿಷ ಬಿಸಿ ಮಾಡಿ.

  12. ಜಜ್ಜಿ ಕೊಂಡ ಪೇಸ್ಟ್ ಮತ್ತು ಕಿವುಚಿಕೊಂಡ ಟೊಮೆಟೊ ಅನ್ನು ಸೇರಿಸಿ.

  13. ಉಪ್ಪು ಮತ್ತು ಹುಣಸೇ ರಸವನ್ನು ಸೇರಿಸಿ 8-10 ನಿಮಿಷಗಳ ಕಾಲ ಬೇಯಿಸಿ.

  14. ರಸಂ ಪೌಡರ್ ಸೇರಿಸಿ.

  15. ರಸಂಅನ್ನು ಕುದಿ ಬರುವಂತೆ ಮಾಡಿ.

  16. ಈ ಮಧ್ಯೆ, ಒಗ್ಗರಣೆ ಪಾತ್ರೆಗೆ ಎಣ್ಣೆಯನ್ನು ಸೇರಿಸಿ.

  17. ಸಾಸಿವೆ ಕಾಳು ಮತ್ತು ಜೀರಿಗೆಯನ್ನು ಸೇರಿಸಿ.

  18. ಇಂಗು ಮತ್ತು ಕರಿಬೇವನ್ನು ಸೇರಿಸಿ.

  19. ಇದು ಚೆನ್ನಾಗಿ ಸಿಡಿಯಲಿ.

  20. ಒಗ್ಗರಣೆಯನ್ನು ರಸಂಗೆ ಸುರಿಯಿರಿ.

  21. ಚಿಕ್ಕದಾಗಿ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ.

  22. ತುಪ್ಪವನ್ನು ಸೇರಿಸಿ.

  23. ಒಂದು ಬೌಲ್‍ಗೆ ವರ್ಗಾಯಿಸಿ. ಬಿಸಿ ಇರುವಾಗಲೇ ಅನ್ನದೊಂದಿಗೆ ಸವಿಯಲು ನೀಡಿ.

Instructions
 • 1. ರಸಂ ಪುಡಿಯ ಬದಲಿಗೆ ಸಾಂಬಾರ್ ಪುಡಿಯನ್ನು ಸಹ ಬಳಸಬಹುದು.
 • 2. ಬೇಕಿದ್ದರೆ ಬೇಯಿಸಿದ ತೊಗರಿಬೇಳೆಯನ್ನು ರಸಂಗೆ ಸೇರಿಸಬಹುದು. ಇದು ವಿಭಿನ್ನವಾದ ರುಚಿಯನ್ನು ನೀಡುತ್ತದೆ.
Nutritional Information
 • ಸರ್ವಿಂಗ್ ಸೈಜ್ - 1 ಕಪ್
 • ಕ್ಯಾಲೋರಿ - 100 ಕ್ಯಾಲ್
 • ಫ್ಯಾಟ್ - 4 ಗ್ರಾಂ.
 • ಪ್ರೋಟೀನ್ - 3 ಗ್ರಾಂ.
 • ಸಕ್ಕರೆ - 5 ಗ್ರಾಂ.
 • ಫೈಬರ್ - 3 ಗ್ರಾಂ.

ಟೊಮೆಟೊ ರಸಂ ಮಾಡುವುದು ಹೇಗೆ

1. ಟೊಮೆಟೊ ತೆಗೆದುಕೊಂಡು ಅದರ ಚೊಟ್ಟಿನ ಭಾಗವನ್ನು ಸ್ವಲ್ಪ ಕತ್ತರಿಸಿ ತೆಗೆಯಿರಿ.

rasam recipe

2. ಟೊಮೆಟೊ ಮೇಲ್ಭಾಗದಿಂದ 2-3 ಲಂಭ/ಉದ್ದವಾಗಿ ಸೀಳಿದಂತೆ ಮಾಡಿ.

rasam recipe

3. ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಲು ಇಡಿ.

rasam recipe

4. ಅದಕ್ಕೆ ನೀರನ್ನು ಸೇರಿಸಿ, ಸಂಪೂರ್ಣವಾಗಿ ಬೆಂದು ಮೃದುವಾಗಲು 15 ನಿಮಿಷಗಳ ಕಾಲ ಬಿಡಿ.

rasam recipe
rasam recipe

5. ಒಂದು ಬೌಲ್‍ಗೆ ಟೊಮೆಟೊವನ್ನು ವರ್ಗಾಯಿಸಿ ಹಾಗೂ ನಂತರದ ಬಳಕೆಗೆ ನೀರನ್ನು ಒಂದೆಡೆ ಇಡಿ.

rasam recipe

6. ಅವು ತಣ್ಣಗಾಗಲು 5 ನಿಮಿಷ ಬಿಡಿ.

rasam recipe

7. ಟೊಮೆಟೊ ಸಿಪ್ಪೆಯನ್ನು ತೆಗೆದು ಚೆನ್ನಾಗಿ ಕಿವುಚಿ ಒಂದೆಡೆ ಇಡಿ.

rasam recipe
rasam recipe

8. ಜಜ್ಜುವ ಕಲ್ಲಿನ ಪಾತ್ರೆಗೆ ಬೆಳ್ಳುಳ್ಳಿಯನ್ನು ಸೇರಿಸಿ.

rasam recipe

9. ನಂತರ ಕಾಳು ಮೆಣಸು ಮತ್ತು ಜೀರಿಗೆಯನ್ನು ಸೇರಿಸಿ.

rasam recipe
rasam recipe

10. ಇವೆಲ್ಲವನ್ನು ಒಟ್ಟಾಗಿ ಜಜ್ಜಿ ಒಂದು ನುಣ್ಣನೆಯ ಪೇಸ್ಟ್‍ನಂತೆ ಮಾಡಿಕೊಳ್ಳಿ.

rasam recipe

11. ಒಂದು ಪಾತ್ರೆಯಲ್ಲಿ ಬೇಯಿಸಿಕೊಂಡ ನೀರನ್ನು ಹಾಕಿ 2 ನಿಮಿಷ ಬಿಸಿ ಮಾಡಿ.

rasam recipe

12. ಜಜ್ಜಿ ಕೊಂಡ ಪೇಸ್ಟ್ ಮತ್ತು ಕಿವುಚಿಕೊಂಡ ಟೊಮ್ಯಾಟೋಅನ್ನು ಸೇರಿಸಿ.

rasam recipe
rasam recipe

13. ಉಪ್ಪು ಮತ್ತು ಹುಣಸೇ ರಸವನ್ನು ಸೇರಿಸಿ 8-10 ನಿಮಿಷಗಳ ಕಾಲ ಬೇಯಿಸಿ.

rasam recipe
rasam recipe
rasam recipe

14. ರಸಂ ಪೌಡರ್ ಸೇರಿಸಿ.

rasam recipe

15. ರಸಂಅನ್ನು ಕುದಿ ಬರುವಂತೆ ಮಾಡಿ.

rasam recipe

16. ಈ ಮಧ್ಯೆ, ಒಗ್ಗರಣೆ ಪಾತ್ರೆಗೆ ಎಣ್ಣೆಯನ್ನು ಸೇರಿಸಿ.

rasam recipe

17. ಸಾಸಿವೆ ಕಾಳು ಮತ್ತು ಜೀರಿಗೆಯನ್ನು ಸೇರಿಸಿ.

rasam recipe
rasam recipe

18. ಇಂಗು ಮತ್ತು ಕರಿಬೇವನ್ನು ಸೇರಿಸಿ.

rasam recipe
rasam recipe

19. ಇದು ಚೆನ್ನಾಗಿ ಸಿಡಿಯಲಿ.

rasam recipe

20. ಒಗ್ಗರಣೆಯನ್ನು ರಸಂಗೆ ಸುರಿಯಿರಿ.

rasam recipe

21. ಚಿಕ್ಕದಾಗಿ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ.

rasam recipe

22. ತುಪ್ಪವನ್ನು ಸೇರಿಸಿ.

rasam recipe

23. ಒಂದು ಬೌಲ್‍ಗೆ ವರ್ಗಾಯಿಸಿ. ಬಿಸಿ ಇರುವಾಗಲೇ ಅನ್ನದೊಂದಿಗೆ ಸವಿಯಲು ನೀಡಿ.

rasam recipe
[ 4.5 of 5 - 85 Users]
Read more about: rasam