For Quick Alerts
ALLOW NOTIFICATIONS  
For Daily Alerts

ಕ್ರಿಸ್ಪಿ ಆಹಾರಕ್ಕಾಗಿ ಇಲ್ಲಿದೆ ಬೆಸ್ಟ್‌ ಕುಕ್ಕಿಂಗ್‌ ಟಿಪ್ಸ್

Posted By:
|

ಪ್ರತಿಯೊಂದು ಅಡುಗೆ ಮಾಡುವಾಗ ಒಂದು ಟ್ರಿಕ್ಸ್ ಇರುತ್ತದೆ, ಅದರ ಬಗ್ಗೆ ತಿಳಿದುಕೊಂಡರೆ ಅಡುಗೆ ತುಂಬಾನೇ ಸುಲಭವಾಗುವುದು.

crispy foods tips

ನೀವು ಎಣ್ಣೆಯಲ್ಲಿ ತಿಂಡಿಯನ್ನು ಕರೆಯುವಾಗ ಕೆಲವೊಮ್ಮೆ ನಾವು ಬಯಸಿದಂತೆ ಕ್ರಿಸ್ಪಿಯಾಗಿ ಬರುವುದಿಲ್ಲ. ಎಣ್ಣೆಯಲ್ಲಿ ಕರಿದ ತಿಂಡಿಗಳು ಕ್ರಿಸ್ಪಿಯಾಗಿ ಬಂದರೆ ಮಾತ್ರ ಟೇಸ್ಟಿಯಾಗಿ ಬರುವುದು.

ನಾವಿಲ್ಲಿ ನೀವು ಕ್ರಿಸ್ಪಿ ತಿಂಡಿ ಮಾಡುವಾಗ ಯಾವೆಲ್ಲಾ ಟ್ರಿಕ್ಸ್ ಬಳಸಬೇಕು ಎಂಬುವುದರ ಬಗ್ಗೆ ಹೇಳಿದ್ದೇವೆ, ಈ ಟ್ರಿಕ್ಸ್ ಬಳಸಿದರೆ ನೀವು ಬಯಸಿದಂತೆ ಕ್ರಿಸ್ಪಿಯಾದ ಸ್ನಾಕ್ಸ್ ಬಳಸಬಹುದು:

1. ಎಣ್ಣೆ ಸರಿಯಾಗಿ ಕಾಯಬೇಕು

1. ಎಣ್ಣೆ ಸರಿಯಾಗಿ ಕಾಯಬೇಕು

ನೀವು ಡೀಪ್‌ ಫ್ರೈ ಮಾಡುವಾಗ ಎಣ್ಣೆ ಕಾಯಲು ಒಂದು ಹದವಿರುತ್ತದೆ ಅಷ್ಟು ಕಾದಾಗ ಹಾಕಬೇಕು, ಎಣ್ಣೆ ತುಂಬಾ ಕಾದಾಗ ನೀವು ತಿಂಡಿ, ಕಬಾಬ್‌ ಮುಂತಾದವುಗಳನ್ನು ಹಾಕಿದರೆ ಹೊರಗಡೆ ಕಪ್ಪು ಬಣ್ಣಕ್ಕೆ ತಿರುಗಿ ಒಳಗಡೆ ಬೇಯುವುದಿಲ್ಲ, ಇನ್ನು ಎಣ್ಣೆ ಸರಿಯಾಗಿ ಕಾಯದಿದ್ದರೆ ಕ್ರಿಸ್ಪಿಯಾಗಿರದೆ ಮೆತ್ತಗಾಗಿ ತಿನ್ನಲು ಅಷ್ಟು ಚೆನ್ನಾಗಿರಲ್ಲ.

 2. ಡಬಲ್‌ ಫ್ರೈ ಮಾಡಿ

2. ಡಬಲ್‌ ಫ್ರೈ ಮಾಡಿ

ಕೆಲವೊಂದು ತಿಂಡಿಗಳಿಗೆ, ಚಿಪ್ಸ್‌ಗಳಿಗೆ ಡಬಲ್‌ ಫ್ರೈ ಮಾಡಿದರೆ ಮಾತ್ರ ಕ್ರಿಸ್ಪಿಯಾಗಿ ಬರುವುದು. ನೀವು ಫಿಂಗರ್‌ ಚಿಪ್ಸ್ ಮತ್ತಿತರ ಸ್ನಾಕ್ಸ್ ಮಾಡುವಾಗ ಕ್ರಿಸ್ಪಿಯಾಗಿ ಬರಲು ಡಬಲ್‌ ಫ್ರೈ ಮಾಡಬೇಕು.

 3. ಕೋಟಿಂಗ್

3. ಕೋಟಿಂಗ್

ನೀವು ಕಬಾಬ್‌, ಕಟ್ಲೇಟ್‌ ಮತ್ತಿತರ ಆಹಾರ ಫ್ರೈ ಮಾಡುವಾಗ ಕೋಟಿಂಗ್ ಮಾಡಿದರೆ ತುಂಬಾನೇ ಕ್ರಿಸ್ಪಿಯಾಗಿ ಬರುತ್ತದೆ. ನೀವು ಜೋಳದ ಹಿಟ್ಟು ಅಥವಾ ಬ್ರೆಡ್‌ ಚೂರುಗಳನ್ನು ಬಳಸಿದರೆ ಕ್ರಿಸ್ಪಿಯಾಗಿ ಬರುತ್ತದೆ.

4. ಮೀನು ಫ್ರೈ ಮಾಡುವಾಗ ತುಂಬಾ ಎಣ್ಣೆ ಹಾಕಬೇಡಿ

4. ಮೀನು ಫ್ರೈ ಮಾಡುವಾಗ ತುಂಬಾ ಎಣ್ಣೆ ಹಾಕಬೇಡಿ

ಮೀನು ಫ್ರೈ ಗರಿ-ಗರಿಯಾಗಿ ಬಂದರೆ ತಿನ್ನಲು ಮತ್ತಷ್ಟು ರುಚಿಯಾಗಿರುತ್ತೆ, ಆದರೆ ಎಣ್ಣೆ ತುಂಬಾ ಹಾಕಿದರೆ ಫ್ರೈ ಚೆನ್ನಾಗಿ ಆಗಲ್ಲ, ಮೀನು ಕ್ರಿಸ್ಪಿಯಾಗುವುದಿಲ್ಲ, ಆದ್ದರಿಂದ ಫ್ರೈ ಮಾಡುವಾಗ ತುಂಬಾ ಎಣ್ಣೆ ಹಾಕಬೇಡಿ.

 5. ಕೂಲಿಂಗ್‌ ರ‍್ಯಾಕ್ ಬಳಸಿ

5. ಕೂಲಿಂಗ್‌ ರ‍್ಯಾಕ್ ಬಳಸಿ

ನೀವು ಮನೆಯಲ್ಲಿ ತುಂಬಾ ಸ್ನ್ಯಾಕ್ಸ್‌ ಮಾಡುತ್ತಿದ್ದರೆ ಒಂದು ಕೂಲಿಂಗ್‌ ರ‍್ಯಾಕ್ ಖರೀದಿಸುವುದು ಒಳ್ಳೆಯದು. ನೀವು ಟಿಶ್ಯೂ ಅಥವಾ ಪೇಪರ್‌ ಮೇಲೆ ಕರಿದ ತಿಂಡಿ ಹಾಕಿದರೆ ಎಣ್ಣೆ ಹೀರಿಕೊಳ್ಳುವುದು, ಆದರೆ ಸ್ನ್ಯಾಕ್ಸ್‌ ಕೂಲಿಂಗ್‌ ರ‍್ಯಾಕ್ ಬಳಸಿದರೆ ಸಿಗುವಷ್ಟು ಪರ್ಫೆಕ್ಟ್ ಆಗಿರಲ್ಲ, ಆದ್ದರಿಂದ ಕ್ರಿಸ್ಪಿ ಸ್ನ್ಯಾಕ್ಸ್‌ಗಾಗಿ ಕೂಲಿಂಗ್ ರ‍್ಯಾಕ್ ಬಳಸಿ.

[ of 5 - Users]
Story first published: Friday, July 8, 2022, 19:54 [IST]
X
Desktop Bottom Promotion