Just In
Don't Miss
- Automobiles
ಅತ್ಯುತ್ತಮ ಫೀಚರ್ಸ್ ಹೊಂದಿರುವ ಬಜೆಟ್ ಹೆಲ್ಮೆಟ್ ಬಿಡುಗಡೆ ಮಾಡಿದ ಸ್ಟಡ್ಸ್
- Sports
ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ಸೆಹ್ವಾಗ್ ಸ್ಫೋಟಕ ಅರ್ಧ ಶತಕ
- Movies
ಪ್ರಭಾಸ್ ಹೆಸರು ಬಳಸಿ ಭಾರಿ ಮೋಸ: ವ್ಯಕ್ತಿ ಬಂಧನ
- News
ಸಂಸತ್ ಮೇಲೆ ಮತ್ತೆ ದಾಳಿ ನಡೆಯಬಹುದು, 7 ಸುತ್ತಿನ ಕೋಟೆಯಾಯ್ತು ‘ಕ್ಯಾಪಿಟಲ್ ಹಿಲ್’
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Education
CSG Recruitment 2021: 85 ಸಾಫ್ಟ್ವೇರ್ ಇಂಜಿನಿಯರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಕ್ರಾಂತಿ ಸ್ಪೆಷಲ್: ಎಳ್ಳು ಚಿಕ್ಕಿ ರೆಸಿಪಿ
ಸಂಕ್ರಾಂತಿ ಹಬ್ಬವೆಂದ ಮೇಲೆ ಎಳ್ಳು-ಬೆಲ್ಲ ಇರಲೇಬೇಕು, ಈ ದಿನ ಎಳ್ಳು- ಬೆಲ್ಲ ಹಂಚಿ ಬಾಯಿ ಸಿಹಿ ಮಾಡಿ, ಒಳ್ಳೆಯ ಮಾತುಗಳನ್ನಾಡಬೇಕು ಎಂಬ ಮಾತಿದೆ.
ಈ ದಿನ ಎಳ್ಳು ದಾನ ಮಾಡಿದರೆ ಪುಣ್ಯ ಸಿಗುತ್ತದೆ ಎಂದು ಹೇಳಲಾಗುವುದು, ಅಲ್ಲದೆ ವೈಜ್ಞಾನಿಕ ದೃಷ್ಟಿಯಿಂದಲೂ ಸಂಕ್ರಾಂತಿಗೆ ಎಳ್ಳು ಸವಿಯುವುದಕ್ಕೆ ಒಂದು ಕಾರಣವಿದೆ. ಚಳಿಯಲ್ಲಿ ಎಳ್ಳು ಮೈಯನ್ನು ಬೆಚ್ಚಗೆ ಇಡುತ್ತದೆ ಎಂದು ಹೇಳಲಾಗುವುದು.
ನಾವಿಲ್ಲಿ ಸಂಕ್ರಾಂತಿ ಸ್ಪೆಷಲ್ ಆಗಿ ಎಳ್ಳು ಚಿಕ್ಕಿ ರೆಸಿಪಿ ನೀಡಿದ್ದೇವೆ. ನೀವು ಈ ಸಂಕ್ರಾಂತಿಗೆ ಎಳ್ಳು-ಬೆಲ್ಲದ ಜೊತೆ ಈ ಚಿಕ್ಕಿಯನ್ನೂ ಮಾಡಿ ಸವಿಯಿರಿ. ಇದನ್ನು ಮಾಡಿ ತಿಂಗಳವರೆಗೆ ಇಡಬಹುದು, ಆದ್ದರಿಂದ ಒಂದೊಂದು ಚಿಕ್ಕಿ ಪ್ರತಿದಿನ ತಿನ್ನಿ ಆರೋಗ್ಯಕ್ಕೂ ಒಳ್ಳೆಯದು.
Recipe By: Reena TK
Recipe Type: sweet
Serves: depends
-
ಬೇಕಾಗುವ ಸಾಮಗ್ರಿ
1 ಕಪ್ ಎಳ್ಳು
1 ಚಮಚ ತುಪ್ಪ
1 ಕಪ್ ಬೆಲ್ಲ / ಸಕ್ಕರೆ
-
ಮಾಡುವ ವಿಧಾನ
* ಮೊದಲಿಗೆ ಪ್ಯಾನ್ ಬಿಸಿ ಮಾಡಿ ಅದರಲ್ಲಿ 1 ಕಪ್ ಎಳ್ಳು ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ. (ಎಳ್ಳು ತುಂಬಾ ಹುರಿ ಬೇಡಿ, ಕಹಿ ಟೇಸ್ಟ್ ಬರುತ್ತದೆ)
* ಈಗ ಮತ್ತೊಂದು ಪಾತ್ರೆಗೆ 1 ಚಮಚ ತುಪ್ಪ ಹಾಕಿ ನಂತರ 1 ಕಪ್ ಬೆಲ್ಲ ಹಾಕಿ.
* ಬೆಲ್ಲ ಚೆನ್ನಾಗಿ ಕರಗುವಷ್ಟು ಹೊತ್ತು ತಿರುಗಿಸುತ್ತಾ ಬಿಸಿ ಮಾಡಿ. ಬೆಲ್ಲ ಅಥವಾ ಸಕ್ಕರೆ ನಿಮ್ಮ ಆಯ್ಕೆಗೆ ಬಿಟ್ಟದ್ದು.
* ಬೆಲ್ಲದ ಪಾಕವನ್ನು ಕಡಿಮೆ ಉರಿಯಲ್ಲಿ ಕುದಿಸಿ, ನಂತರ ಹುರಿದ ಎಳ್ಳು ಹಾಕಿ ಮಿಶ್ರ ಮಾಡಿ. ತಕ್ಷಣವೇ ತುಪ್ಪ ಸವರಿದ ಸ್ಟೀಲ್ ಪ್ಲೇಟ್‌ಗೆ ಹಾಕಿ, ಸಮವಾಗಿ ಸ್ಪೂನ್ ಅಥವಾ ದೋಸೆ ತೆಗೆಯುವ ಸೌಟ್‌ನಿಂದ ತಟ್ಟಿ.
* ಸ್ವಲ್ಪ ಹೊತ್ತು ಹೊತ್ತು ಬಿಟ್ಟು ಬಿಸಿ-ಬಿಸಿ ಇರುವಾಗಲೇ ನಿಮಗೆ ಬೇಕಾದ ಶೇಪ್‌ಗೆ ಕತ್ತರಿಸಿ.
* ರೆಡಿಯಾದ ಎಳ್ಳು ಚಿಕ್ಕಿಯನ್ನು ನೀವು ತಿಂಗಳುಗಟ್ಟಲೆ ಇಡಬಹುದು.
- *ನೀವು ಇದಕ್ಕೆ ಬೇಕಿದ್ದರೆ ಗೋಡಂಬಿ, ಪಿಸ್ತಾ, ಒಣ ದ್ರಾಕ್ಷಿ ಸೇರಿಸಬಹುದು. * ಸಂಕ್ರಾಂತಿ ರೆಸಿಪಿಯಾಗಿ ಮಾಡುವಾಗ ಎಳ್ಳು-ಬೆಲ್ಲ ತಯಾರಿಸಿ ಮಾಡಿ.
- ಸರ್ವ್ - 1 ಚಿಕ್ಕಿ
- ಕೊಬ್ಬು - 3ಗ್ರಾಂ
- ಪ್ರೊಟೀನ್ - 1 ಗ್ರಾಂ
- ಕಾರ್ಬ್ಸ್ - 6ಗ್ರಾಂ
- ನಾರಿನಂಶ - 0.9ಗ್ರಾಂ