ತವಾ ಪನ್ನೀರ್ ಮಸಾಲ ರೆಸಿಪಿ

By: Divya pandith
Subscribe to Boldsky

ಪನ್ನೀರ್ ಎಂದರೆ ಸಾಕು ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಪನ್ನೀರ್ ಬಳಸಿ ತಯಾರಿಸುವ ಆಹಾರ ಪದಾರ್ಥಗಳ ಶ್ರೀಮಂತಿಕೆ ಸ್ವಲ್ಪ ಹೆಚ್ಚೆಂದೇ ಹೇಳಬಹುದು. ಕೆಲವು ಆರೋಗ್ಯ ಗುಣಗಳನ್ನು ಒಳಗೊಂಡಿರುವ ಪನ್ನೀರ್ ಆಹಾರ ಪದಾರ್ಥಗಳ ರುಚಿಯನ್ನು ದ್ವಿಗುಣ ಗೊಳಿಸುತ್ತದೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಸಲ್ಪಡುವ ಪನ್ನೀರ್ ತನ್ನದೇ ಆದ ವಿಶೇಷ ಗುಣಲಕ್ಷಣಗಳನ್ನು ಒಳಗೊಂಡಿದೆ. ಪನ್ನೀರ್‌ನಿಂದ ಸಿಹಿ ತಿಂಡಿ, ಗ್ರೇವಿ, ಮಂಚೂರಿ, ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಬಹುದು.

ಪನ್ನೀರಿನಿಂದ ತಯಾರಿಸಲಾಗುವ ವಿಶೇಷ ತಿನಿಸುಗಳು ಹಲವಾರಿವೆ. ಅವುಗಳಲ್ಲಿ ತವಾ ಪನ್ನೀರ್ ಮಸಾಲವೂ ಒಂದು. ಇದನ್ನು ತವಾ ಪನ್ನೀರ್ ಖಟ್ಟಾ ಪ್ಯಾಯಾಜ್ ಎಂದು ಸಹ ಕರೆಯಲಾಗುತ್ತದೆ. ಇದರಲ್ಲಿ ವಿನೆಗರ್‌ನಲ್ಲಿ ನೆನೆಸಿದ ಬೀಟ್ರೂಟ್, ಟೊಮೆಟೊ, ಕ್ರೀಮ್ ಸೇರಿದಂತೆ ವಿವಿಧ ಬಗೆಯ ಮಸಾಲಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದು ಸೊಗಸಾದ ಪರಿಮಳ ಹಾಗೂ ಅದ್ಭುತ ರುಚಿಯಿಂದ ಕೂಡಿರುತ್ತದೆ. ಒಮ್ಮೆ ಈ ಪಾಕವನ್ನು ಸವಿದರೆ ನಿಮ್ಮ ನಾಲಿಗೆ ಮತ್ತೆ ಮತ್ತೆ ಚಪ್ಪರಿಸುವಂತೆ ಮಾಡುತ್ತದೆ. ಬಹಳ ಸರಳ ಹಾಗೂ ಸುಲಭವಾಗಿ ತಯಾರಿಸಬಹುದಾದ ಈ ಪಾಕವಿಧಾನವನ್ನು ನೀವೂ ಸಹ ನಿಮ್ಮ ಮನೆಯಲ್ಲಿ ಮಾಡಬಹುದು. ಹೆಚ್ಚಿನ ವಿವರಗಳಿಗಾಗಿ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

khatta pyaaz
ತವಾ ಪನ್ನೀರ್ ಮಸಾಲ ಕಟ್ಟಾ ಪ್ಯಾಯಾಜ್ ರೆಸಿಪಿ| ತವಾ ಪನ್ನೀರ್ ಮಸಾಲ ತಯಾರಿಸುವುದು ಹೇಗೆ| ತವಾ ಪನ್ನೀರ್ ಮಸಾಲ ರೆಸಿಪಿ| ಪನ್ನೀರ್ ಮಸಾಲ ಕಟ್ಟಾ ಪ್ಯಾಯಾಜ್ ರೆಸಿಪಿ|
ತವಾ ಪನ್ನೀರ್ ಮಸಾಲ ಕಟ್ಟಾ ಪ್ಯಾಯಾಜ್ ರೆಸಿಪಿ| ತವಾ ಪನ್ನೀರ್ ಮಸಾಲ ತಯಾರಿಸುವುದು ಹೇಗೆ| ತವಾ ಪನ್ನೀರ್ ಮಸಾಲ ರೆಸಿಪಿ| ಪನ್ನೀರ್ ಮಸಾಲ ಕಟ್ಟಾ ಪ್ಯಾಯಾಜ್ ರೆಸಿಪಿ|
Prep Time
15 Mins
Cook Time
30M
Total Time
45 Mins

Recipe By: ಪೂಜಾ ಗುಪ್ತಾ

Recipe Type: ಪ್ರಧಾನ ತಿನಿಸು

Serves: 2-3 ಮಂದಿಗೆ

Ingredients
 • ಚಿಕ್ಕ ಚಿಕ್ಕ ಚೌಕಾಕಾರದಲ್ಲಿ ಕತ್ತರಿಸಿಕೊಂಡ ಪನ್ನೀರ್ -2 ಕಪ್

  ಟೊಮೆಟೊ - 4-5

  ಶುಂಠ ಮತ್ತು ಬೆಳ್ಳುಳ್ಳಿಯ ಪೇಸ್ಟ್ -1 ಟೇಬಲ್ ಚಮಚ

  ಕೆಂಪು ಮೆಣಸು(ದೇಗಿ ಮೆಣಸು) - 1 ಟೇಬಲ್ ಚಮಚ

  ಉಪ್ಪು ಸಹಿತ ಬೆಣ್ಣೆ - 1 ಟೀ ಚಮಚ

  ಮೆಂತೆ ಪುಡಿ- ಒಂದು ಚಿಟಕಿ

  ಕ್ರೀಮ್ -1 ಟೇಬಲ್ ಚಮಚ

  ವಿನೆಗರ್‌ನಲ್ಲಿ ನೆನೆಸಿದ ಬೀಟ್ರೂಟ್ ಹೋಳುಗಳು- 1/2 ಕಪ್

  ರುಚಿಗೆ ತಕ್ಕಷ್ಟು ಉಪ್ಪು

  ಅಗತ್ಯಕ್ಕೆ ತಕ್ಕಷ್ಟು ಜೇನುತುಪ್ಪ.

Red Rice Kanda Poha
How to Prepare
 • 1. ಟೊಮೆಟೊವನ್ನು 10-12 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

  2. ಅಕ್ಕಿ ಮತ್ತು ನೀರನ್ನು ಸೇರಿಸಿ ಕುಕ್ಕರ್‍ನಲ್ಲಿ ಇರಿಸಿ, ಬೇಯಿಸಿ.

  3. ಸ್ವಲ್ಪ ಚಪಾತಿಯನ್ನು ಮಾಡಿಕೊಳ್ಳಿ.

  4. ಬೆಂದ ಟೊಮೆಟೊ ತಣ್ಣಗಾದ ಮೇಲೆ ಅದನ್ನು ನುಣ್ಣಗೆ ರುಬ್ಬಿ, ಪಕ್ಕಕ್ಕೆ ಇಡಿ.

  5. ಒಂದು ಪಾತ್ರೆಯಲ್ಲಿ ಬೆಣ್ಣೆಯನ್ನು ಹಾಕಿ.

  6. ಬೆಣ್ಣೆ ಕರಗಳು ಸಣ್ಣ ಉರಿಯಲ್ಲಿ ಇಡಿ.

  7. ಅದಕ್ಕೆ ಕೆಂಪು ಮೆಣಸನ್ನು ಸೇರಿಸಿ. ಬೆಣ್ಣೆ ಮತ್ತು ಮೆಣಸನ್ನು ಟೊಮ್ಯಾಟೋ ಪೇಸ್ಟ್‍ಗೆ ಸೇರಿಸಿ, ಕುದಿಯಲು ಇಡಿ.

  8. ಈಗ ರುಚಿಗೆ ತಕ್ಕಷ್ಟು ಉಪ್ಪು, ಜೇನುತುಪ್ಪ ಮತ್ತು ವಿನೆಗರ್‌ನಲ್ಲಿ ನೆನೆಸಿಕೊಂಡ ಬೀಟ್ರೂಟ್ ಅನ್ನು ಸೇರಿಸಿ.

  9. ಕತ್ತರಿಸಿಕೊಂಡ ಪನ್ನೀರ್‍ಅನ್ನು ಸ್ವಲ್ಪ ಹುರಿದು ಗ್ರೇವಿಗೆ ಸೇರಿಸಿ.

  10. ಸ್ವಲ್ಪ ಸಮಯ ಕುದಿಯಲು ಬಿಡಿ.

  11. ನಂತರ ಮೆಂತೆ ಪುಡಿ, ಕೆನೆ ಮತ್ತು ಹಸುವಿನ ತುಪ್ಪ ಸೇರಿಸಿ.

  12. ಬಿಸಿ ಇರುವಾಗಲೇ ಅನ್ನ ಅಥವಾ ಚಪಾತಿಯೊಂದಿಗೆ ಸವಿಯಲು ನೀಡಿ.

Instructions
 • 1. ನಿಮ್ಮ ಅಗತ್ಯಕ್ಕೆ ತಕ್ಕಂತೆ ಕ್ಯಾಪ್ಸಿಕಮ್ ಸಹ ಸೇರಿಸಿಕೊಳ್ಳಬಹುದು. ಅಲ್ಲದೆ ಖಾದ್ಯವನ್ನು ಅರೆ ಗ್ರೇವಿಯನ್ನಾಗಿಯೂ ಮಾಡಿಕೊಳ್ಳಬಹುದು.
Nutritional Information
 • ಬಡಿಸುವ ಪ್ರಮಾಣ - 1 ಬೌಲ್
 • ಕ್ಯಾಲೋರಿ - 320 ಕ್ಯಾಲ್
 • ಕೊಬ್ಬು - 23 ಗ್ರಾಂ.
 • ಪ್ರೋಟೀನ್ - 28 ಗ್ರಾಂ.
 • ಕಾರ್ಬೋಹೈಡ್ರೇಟ್ - 2 ಗ್ರಾಂ.
[ 3.5 of 5 - 81 Users]
Story first published: Thursday, January 4, 2018, 13:33 [IST]
Subscribe Newsletter