Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ರಂಜಾನ್ ವಿಶೇಷ ಖಾದ್ಯ ಶಿರ್ಮಲ್ ಸಿಹಿ ಬ್ರೆಡ್ ತಿನಿಸು
ರಂಜಾನ್ ಖಾದ್ಯದಲ್ಲಿ ಮಾಂಸಾಹಾರ ಪ್ರಮುಖವಾಗಿರುತ್ತದೆ. ಸಿಹಿ ತಿನ್ನುವವರು ಕೂಡ ಈ ಸಮಯದಲ್ಲಿ ಸಿಹಿ ತಿಂಡಿಯನ್ನು ಸೇವಿಸುತ್ತಾರೆ. ಆದರೆ ನಾವಿಲ್ಲಿ ಸಿಹಿತಿಂಡಿಯ ಖಾದ್ಯ ತಯಾರಿ ವಿಧಾನವನ್ನು ನೀಡುತ್ತಿಲ್ಲ. ನೀವು ಶಿರ್ಮಲ್ ಬಗ್ಗೆ ಕೇಳಿದ್ದೀರಾ? ಭಾರತೀಯ ಮುಸ್ಲಿಂ ಮನೆಗಳಲ್ಲಿ ಬಹು ಪ್ರಸಿದ್ಧವಾಗಿರುವ ಈ ತಿಂಡಿ ಮಾಡಲು ತುಂಬಾ ಸರಳವಾಗಿದೆ.
ಶಿರ್ಮಾಲ್ ಎನ್ನುವಂಥದ್ದು ಸಿಹಿ ಬ್ರೆಡ್ ಆಗಿದ್ದು ಇದನ್ನು ದಾಲ್ ಅಥವಾ ಕರಿಯೊಂದಿಗೆ ಸೇವಿಸಲಾಗುತ್ತದೆ. ನೀವು ಸ್ವಲ್ಪ ಪ್ರಯತ್ನಿಸಿದರೆ ಸಾಕು ಈ ರುಚಿಯಾದ ಖಾದ್ಯವನ್ನು ತಯಾರಿಸಬಹುದಾಗಿದೆ. ಇದು ಕೇವಲ ರಂಜಾನ್ ರೆಸಿಪಿಯಾಗಿದ್ದರೂ ಎಲ್ಲಾ ಸಮಯದಲ್ಲೂ ತಯಾರಿಸಬಹುದಾಗಿದೆ. ನಿಮ್ಮ ಇಫ್ತಾರ್ ಕೂಟದ ಸವಿಯನ್ನು ಹೆಚ್ಚಿಸಲು ಈ ಖಾದ್ಯ ಹೇಳಿಮಾಡಿಸಿದ್ದು.

ಬನ್ನಿ ನಾವಿಲ್ಲಿ ನೀಡಿರುವ ಶಿರ್ಮಾಲ್ ಪಾಕ ವಿಧಾನವನ್ನು ತಿಳಿದುಕೊಂಡು ಅದನ್ನು ತಯಾರಿಸಿ ಮತ್ತು ನಿಮ್ಮ ಮನೆಮಂದಿಯಿಂದ ಶಹಬ್ಬಾಷ್ ಹೇಳಿಸಿಕೊಳ್ಳಿ. ಮಕ್ಕಳಿಗಂತೂ ತುಂಬಾ ಪ್ರಿಯವಾಗಿರುವ ಈ ಖಾದ್ಯ ಬಾಯಲ್ಲಿ ನೀರೂರುವಂತೆ ಮಾಡುವುದು ಖಂಡಿತ.
ರಂಜಾನ್ ಹಬ್ಬಕ್ಕಾಗಿ ರುಚಿಕರವಾದ ಬಾದಾಮ್ ಫಿರ್ನಿ ಖಾದ್ಯ
ಪ್ರಮಾಣ: 4
ಸಿದ್ಧತಾ ಸಮಯ: 1 ಗಂಟೆ
ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು
ಸಾಮಾಗ್ರಿಗಳು
1. ಗೋಧಿ - 2 1/2 ಕಪ್
2. ಕ್ಯಾಸ್ಟರ್ ಸಕ್ಕರೆ - 1 ಚಮಚ
3. ದಪ್ಪ ಹಾಲು - 1/2 ಕಪ್
4. ಇನ್‌ಸ್ಟಂಟ್ ಯೀಸ್ಟ್ - 2 1/2 ಚಮಚ
5. ಕೇವ್ರಾ ವಾಟರ್ - 1 ಚಮಚ
6. ಕರಗಿಸಿದ ಬೆಣ್ಣೆ - 3 ಚಮಚ
7. ಕ್ರೀಮ್ - 3 ಚಮಚ
8. ಮೊಟ್ಟೆ - 1 (ಬೀಟ್)
9. ಹಾಲಿನ ಪುಡಿ - 4 ಚಮಚ
10.ಲ್ಯೂಕ್ ವಾರ್ಮ್ ವಾಟರ್ - 2 ಕಪ್
ಮಾಡುವ ವಿಧಾನ
*ಗೋಧಿ, ಉಪ್ಪು, ಸಕ್ಕರೆ, ಗಟ್ಟಿ ಹಾಲು, ಇನ್‌ಸ್ಟಂಟ್ ಯೀಸ್ಟ್, ಕೇವ್ರಾ ವಾಟರ್, ಕರಗಿಸಿದ ಬೆಣ್ಣೆ ಅನ್ನು ತೆಗೆದುಕೊಳ್ಳಿ, ಇದಕ್ಕೆ ಕ್ರೀಮ್, ಸಕ್ಕರೆ, ಮೊಟ್ಟೆ ಮತ್ತು ಹಾಲಿನ ಪುಡಿ ಅನ್ನು ಪಾತ್ರೆಯಲ್ಲಿ ಮಿಶ್ರ ಮಾಡಿ.
* ಇನ್ನು ಈ ಮಿಶ್ರಣಕ್ಕೆ ಲ್ಯೂಕ್‌ವಾರ್ಮ್ ನೀರನ್ನು ಸೇರಿಸಿ ಮತ್ತು ಮಿಶ್ರ ಮಾಡಿ. ಒದ್ದೆ ಬಟ್ಟೆಯಿಂದ ಹಿಟ್ಟನ್ನು ಮುಚ್ಚಿ ಮತ್ತು 1 ಗಂಟೆಗಳ ಕಾಲ ಈ ಮಿಶ್ರಣವನ್ನು ಹಾಗೆಯೆ ಇಡಿ.
*ಈಗ ಹಿಟ್ಟಿನಿಂದ ಉಂಡೆಗಳನ್ನು ಮಾಡಿಕೊಂಡು ಲಟ್ಟಿಸಿಕೊಳ್ಳಿ
*ಬೆಣ್ಣೆಯೊಂದಿಗೆ ಖಾದ್ಯವನ್ನು ಸವರಿ. ಬೇಯಿಸಿದ ಖಾದ್ಯ ಮೇಲೆ ಶಿರ್ಮಲ್ ಅನ್ನು ಇರಿಸಿ. ಮತ್ತು ಪ್ಲಾಸ್ಟಿಕ್ ಕವರ್‌ನಿಂದ ಇದನ್ನು ಮುಚ್ಚಿ.
*ಓವನ್‌ನಲ್ಲಿ ಈ ಶಿರ್ಮಾಲ್ ಅನ್ನು ಬೇಯಿಸಿಕೊಳ್ಳಿ
*ಹಾಲನ್ನು ಶಿರ್ಮಾಲ್ ಮೇಲೆ ಸಿಂಪಡಿಸಿ ಮತ್ತು ಪರಿಮಳಕ್ಕಾಗಿ ಎಳ್ಳನ್ನು ಉದುರಿಸಿ.
ಇದು ಸಿಹಿಯಾದ ರುಚಿಯನ್ನು ನಿಮಗೆ ನೀಡಬಹುದು, ಅಲ್ಲದೆ ಈ ಶಿರ್ಮಾಲ್ ಅನ್ನು ಯಾವುದೇ ಮಾಂಸದ ಪದಾರ್ಥದೊಂದಿಗೆ ನಿಮಗೆ ಸೇವಿಸಬಹುದು.



Click it and Unblock the Notifications
