Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತುಂಬಾ ರುಚಿಯಾಗಿರುತ್ತೆ ಕೋಕನೆಟ್ ರೋಲ್
ಪತಿಶಪ್ತ ಪ್ರಸಿದ್ಧವಾದ ಬೆಂಗಾಲಿ ಅಡುಗೆಯಾಗಿದೆ. ಇದನ್ನು ಕೋಕನೆಟ್ ರೋಲ್ ಎಂದು ಕೂಡ ಕರೆಯುತ್ತಾರೆ. ಅಕ್ಕಿ ಹಿಟ್ಟಿಗೆ ಬೆಲ್ಲದ ತುರಿ ಹಾಗೂ ತೆಂಗಿನ ಕಾಯಿ ಹಾಕಿ ತಯಾರಿಸುವ ಈ ಅಡುಗೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ಈ ಪತಿಶಪ್ತ ಮಾಡಿದರೆ ಅದಕ್ಕೆ ಚಟ್ನಿ ಅಥವಾ ಸಾರು ಮಾಡಬೇಕಾಗಿಲ್ಲ, ಸಿಹಿಯಾದ ಈ ಪತಿಶಪ್ತವನ್ನು ಟೀ ಅಥವಾ ಹಾಲು ಜೊತೆ ಹಾಗೇ ಸವೆಯಬಹುದಾಗಿದ್ದು ಇದನ್ನು ಮಾಡುವ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಅಕ್ಕಿ 3 ಕಪ್
* ತುರಿದ ಬೆಲ್ಲ 3/4 ಕಪ್
* ತೆಂಗಿನ ತುರಿ ಒಂದೂವರೆ ಕಪ್
* ಏಲಕ್ಕಿ ಪುಡಿ ಒಂದೂವರೆ ಚಮಚ
* ತುಪ್ಪ ಅರ್ಧ ಕಪ್
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
* ಅಕ್ಕಿಯನ್ನು ಒಂದು ರಾತ್ರಿ ನೀರಿನಲ್ಲಿ ನೆನೆ ಹಾಕಬೇಕು. ನಂತರ ಅದನ್ನು ರುಚಿಗೆ ತಕ್ಕ ಉಪ್ಪು ಹಾಕಿ ನುಣ್ಣನೆ ಮಿಕ್ಸಿಯಲ್ಲಿ ಅರೆಯಬೇಕು (ಹಿಟ್ಟು ಗಟ್ಟಿಯಾಗಿರಬೇಕು).
* ಈಗ ಬೆಲ್ಲದ ಪಾನಕ ತಯಾರಿಸಿ ಅದರಲ್ಲಿ ತೆಂಗಿನ ತುರಿ ಹಾಗೂ ತೆಂಗಿನ ತುರಿ ಸೇರಿಸಬೇಕು. ನಂತರ ಚೆನ್ನಾಗಿ ತಿರುಗಿಸಬೇಕು. ಈಗ ಉರಿಯಿಂದ ತೆಗೆದ ತಣ್ಣಗಾಗಲು ಇಡಬೇಕು.
* ಈಗ ತವಾವನ್ನು ಬಿಸಿ ಮಾಡಿ ಗ್ಯಾಸ್ ಉರಿಯನ್ನು ಕಡಿಮೆ ಉರಿಯಲ್ಲಿಟ್ಟು ತವಾಕ್ಕೆ ತುಪ್ಪವನ್ನು ಹಾಕಿ ಅದಕ್ಕೆ ಹಿಟ್ಟನ್ನು ಹಾಕಬೇಕು. ದೋಸೆಯ ಮೇಲೆ ಬೆಲ್ಲ ಮತ್ತು ತೆಂಗಿನ ತುರಿ ಹಾಕಿ ನಂತರ ದೋಸೆಯನ್ನು ಮಡಚಿದರೆ ಸವೆಯಲು ರುಚಿಕರವಾದ ಪತಿಶಪ್ತ ರೆಡಿ.



Click it and Unblock the Notifications
