Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸ್ಪೆಶಲ್ ಡಿಶ್ ಕಂಡೆನ್ಸ್‌ಡ್ ಮಿಲ್ಕ್ ಕಸ್ಟರ್ಡ್
ನಮ್ಮ ತಾಯಂದಿರಿಗಾಗಿ ನಮ್ಮ ಮನದಲ್ಲಿನ ಪ್ರೀತಿ ಯಾವಾಗಲೂ ಹಸಿರಾಗಿರುತ್ತದೆ. ಆಕೆ ಮಾಡುವ ಪ್ರತಿಯೊಂದು ಅಡುಗೆಯೂ ರುಚಿ ಮತ್ತು ಆರೋಗ್ಯಪೂರ್ಣವಾಗಿರುತ್ತದೆ. ಆದ್ದರಿಂದಲೇ ಆಕೆ ಕಣ್ಣಿಗೆ ಕಾಣುವ ದೇವರಾಗಿದ್ದಾಳೆ.
ನಮ್ಮ ಒಳಿತನ್ನು ಕೆಡುಕನ್ನು ಬಯಸುವ ಮಾತೃ ಹೃದಯದ ಮೌಲ್ಯವನ್ನು ನಮಗೆ ಏಳೇಳು ಜನ್ಮದಲ್ಲೂ ತೀರಿಸಲಾಗುವುದಿಲ್ಲ ಎಂದೆನ್ನುತ್ತಾರೆ. ಹಾಗಿದ್ದರೆ ಆ ಹೃದಯವನ್ನು ತುಸುವಾದರೂ ಸಂತಸಗೊಳಿಸುವ ಕಾರ್ಯವನ್ನು ನಾವು ಮಾಡಿದರೆ ಅದು ಆಕೆಯ ಪಾಲಿಗೆ ಅತ್ಯಂತ ಸಂತಸಕರವಾಗಿರುತ್ತದೆ.
ಹಾಗಾಗಿ ಇಂದು ಅಮ್ಮನಿಗೆ ಸ್ವಲ್ಪ ರೆಸ್ಟ್ ನೀಡಿ, ಹಾಗೂ ಅವಳನ್ನು ಸಂತೋಷಗೊಳಿಸುವುದಕ್ಕಾಗಿ ಕೊಂಚ ಸ್ಪೆಶಲ್ ಅಡುಗೆ ಮಾಡಲು ಪ್ರಯತ್ನಿಸಿ! ಬನ್ನಿ ಬೋಲ್ಡ್ ಸ್ಕೈ ಇಂದು ನಿಮ್ಮೊಂದಿಗೆ ಕೈ ಜೋಡೊಸಲಿದೆ. ಕಂಡೆನ್ಸ್‌ಡ್ ಮಿಲ್ಕ್ ಕಸ್ಟರ್ಡ್ ಅನ್ನು ತಯಾರಿಸುವ ಕ್ರಮವನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಆರೋಗ್ಯಕರ ಮೊಳಕೆ ಕಾಳು ಪಲಾವ್ ರೆಸಿಪಿ
ಪ್ರಮಾಣ:4
ಸಿದ್ಧತಾ ಸಮಯ: 5 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು
ಸಾಮಾಗ್ರಿಗಳು:
* ಹಾಲು - 4 ಕಪ್‌ಗಳು
* ಕಂಡೆನ್ಸ್‌ಡ್ ಮಿಲ್ಕ್ - 1/2 ಕ್ಯಾನ್
*ವೆನಿಲ್ಲಾ ಎಸೆನ್ಸ್ - ಸ್ವಲ್ಪ ಹನಿಗಳು
* ಮೊಟ್ಟೆ -2
* ದಾಲ್ಚಿನಿ ಹುಡಿ - 1/2 ಸ್ಪೂನ್
* ಕಸ್ಟರ್ಡ್ ಪೌಡರ್ - 1 ಸ್ಪೂನ್
* ತುರಿದ ಚಾಕಲೇಟ್ - 1/2 ಕಪ್
ಮಾಡುವ ವಿಧಾನ:
* ಡೀಪ್ ಪ್ಯಾನ್‌ನಲ್ಲಿ ಹಾಲು ತೆಗೆದುಕೊಳ್ಳಿ ಮತ್ತು ಅದನ್ನು ಕುದಿಸಿ. ಹಾಲು ಕುದಿದು 10 ನಿಮಿಷಗಳಾದಾಗ ಅದಕ್ಕೆ ಕಂಡೆನ್ಸ್‌ಡ್ ಮಿಲ್ಕ್ ಹಾಕಿ.
* ಈ ವಿಧಾನ ಹಾಲನ್ನು ದಪ್ಪಗೊಳಿಸುತ್ತದೆ. ಹಾಲನ್ನು ಚೆನ್ನಾಗಿ ತಿರುಗಿಸಿ 2 ನಿಮಿಷಗಳ ಕಾಲ ದಪ್ಪಗಾಗಲು ಬಿಡಿ.
* ಈ ಸಮಯದಲ್ಲಿ, ಕಸ್ಟರ್ಡ್ ಪೌಡರ್ ವೆನಿಲ್ಲಾ ಎಸೆನ್ಸ್ ಮತ್ತು ಮೊಟ್ಟೆಯನ್ನು ಹಾಕಿ
* ಕುದಿಯುತ್ತಿರುವ ಹಾಲಿಗೆ ಒಡೆದ ಮೊಟ್ಟೆಯನ್ನು ಹಾಕಿ. ಈ ಮಿಶ್ರಣವನ್ನು 2-3 ನಿಮಿಷಗಳ ಕಾಲ ತಿರುಗಿಸಿ ಹಾಗೂ ಸಣ್ಣ ಉರಿಯಲ್ಲಿ 2-3 ನಿಮಿಷಗಳ ಕಾಲ ಬೇಯಿಸಿ.
* ಕೊನೆಗೆ ದಾಲ್ಚಿನಿ ಹುಡಿಯಿಂದ ಅದನ್ನು ಒಗ್ಗರಿಸಿ.
ನಿಮಗೆ ಬೇಕಿದ್ದಲ್ಲಿ ತುರಿದ ಚಾಕಲೇಟ್‌ನಿಂದ ಇದನ್ನು ಅಲಂಕರಿಸಿ ಖಂಡಿತ ಇದು ನಿಮ್ಮ ಅಮ್ಮನಿಗೆ ಇಷ್ಟವಾಗುತ್ತದೆ!



Click it and Unblock the Notifications
