Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನವರಾತ್ರಿಗೆ ಸ್ಪೆಷೆಲ್ ಬಾದಾಮಿ ಪಾಯಸ
ನವರಾತ್ರಿಗೆ ಹೆಚ್ಚಿನ ಮನೆಗಳಲ್ಲಿ ವಿಶೇಷ ಅಡುಗೆಯಾಗಿ ಪಾಯಸ ಮಾಡಲಾಗುವುದು. ಶ್ಯಾವಿಗೆ ಪಾಯಸ, ಅಕ್ಕಿ ಪಾಯಸ, ಬೇಳೆ ಪಾಯಸ, ಹೆಸರು ಬೇಳೆಯ ಪಾಯಸ ಈ ರೀತಿಯ ಪಾಯಸ ಹೆಚ್ಚಾಗಿ ಮಾಡಲಾಗುವುದು.
ಈ ಬಾರಿಯ ನವರಾತ್ರಿಗೆ ವಿಶೇಷ ಪಾಯಸ ಮಾಡಬಯಸುವವರು ಬಾದಾಮಿ ಪಾಯಸ ಟ್ರೈ ಮಾಡಬಹುದು. ಮಾಡಲು ಸುಲಭವಾದ, ತಿನ್ನಲು ರುಚಿಕರವಾದ ಬಾದಾಮಿ ಪಾಯಸದ ರೆಸಿಪಿ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* 2 ಕಪ್ ಬಾದಾಮಿ (ಸಿಪ್ಪೆ ಸುಲಿದ ಬಾದಾಮಿ)
* 1/4 ಕಪ್ ಸಕ್ಕರೆ(ಸಿಹಿಗೆ ತಕ್ಕಷ್ಟು)
* ಹಾಲು 2 ಕಪ್
* 1/4 ಕಪ್ ತುಪ್ಪ
* 1 ಚಮಚ ಏಲಕ್ಕಿ
* ಸ್ವಲ್ಪ ಕೇಸರಿ
* ಸ್ವಲ್ಪ ಪುಡಿ ಮಾಡಿದ ಬಾದಾಮಿ
ತಯಾರಿಸುವ ವಿಧಾನ:
1. ಹಾಲನ್ನು ಕುದಿಸಿ ಇಡಬೇಕು.
2. ಸಿಪ್ಪೆ ಸುಲಿದ ಬಾದಾಮಿಗೆ ಸ್ವಲ್ಪ ಹಾಲು ಹಾಕಿ ನುಣ್ಣನೆ ರುಬ್ಬಬೇಕು.
3. ಈಗ ಬಾಣಲೆಗೆ ತುಪ್ಪ ಹಾಕಿ ಅದರಲ್ಲಿ ಬಾದಾಮಿ ಪೇಸ್ಟ್ ಹಾಕಿ ಆ ಪೇಸ್ಟ್ ಗಟ್ಟಿಯಾಗುವವರೆಗೆ ಸೌಟ್ ನಿಂದ ತಿರುಗಿಸುತ್ತಾ ಬೇಯಿಸಬೇಕು.
4. ನಂತರ ಉಳಿದ ಹಾಲನ್ನು ಈ ಮಿಶ್ರಣಕ್ಕೆ ನಿಧಾನವಾಗಿ ಸುರಿಯಬೇಕು. ಈಗ ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಹಾಕಿ ಚೆನ್ನಾಗಿ ಕುದಿಸಬೇಕು.
5. ನಂತರ ಉರಿಯಿಂದ ತೆಗೆದು ಪುಡಿ ಮಾಡಿದ ಬಾದಾಮಿ ಹಾಗೂ ಕೇಸರಿಯಿಂದ ಅಲಂಕರಿಸಿದರೆ ಬಾದಾಮಿ ಪಾಯಸ ರೆಡಿ.
ನವರಾತ್ರಿಗೆ ಒಂಬತ್ತು ಬಗೆಯ ರೆಸಿಪಿ ತಿಳಿಯಲು ಮುಂದೆ ನೋಡಿ.



Click it and Unblock the Notifications
