Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಅಡುಗೆಮನೆಯೆಂಬ ಪ್ರಯೋಗಶಾಲೆಯಲಿ ಹುಟ್ಟಿಕೊಂಡ ಹೊಸರುಚಿ
ಹೊಸಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರಬೇಕು. ಹೊಸ ಇನ್ವೆನ್ಷನ್ ಕಂಡುಹಿಡಿಯುತ್ತಲೇ ಇರಬೇಕು. ಒಟ್ಟಿನಲ್ಲಿ ಅಡುಗೆ ಮಾಡಲು ಆಸಕ್ತಿಯಿರಬೇಕು. ಅದಕ್ಕಿಂತ ಹೆಚ್ಚಾಗಿ ಮಾಡಿದ್ದನ್ನು ಇತರರೊಂದಿಗೆ ಹಂಚಿಕೊಂಡು ತಿನ್ನುವ ಗುಣವಿರಬೇಕು. ಅಂಥದೇ ಪ್ರಯೋಗ ಮಾಡಲು ಹೋಗಿ ಹುಟ್ಟಿಕೊಂಡಿದ್ದೇ ಕಡಲೆಹಿಟ್ಟಿನ ಪಾಯಸ.
ಅಡುಗೆ ಕಲಿತವರಿಗೆ, ಕಲಿಯಬೇಕೆನ್ನುವವರಿಗೆ, ಮದುವೆಯ ಮೊದಲು ಟೀ ಕಾಫಿ ಕೂಡ ಮಾಡಲು ಬಾರದ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳಿಗೆ, ಒಬ್ಬಂಟಿ ಬ್ರಹ್ಮಚಾರಿಗಳಿಗೆ, ಹೆಂಡತಿಯನ್ನು ಪ್ರಾಣಕ್ಕಿಂತ ಪ್ರೀತಿಸುವ ಗಂಡಂದಿರಿಗೆ, ಪ್ರಾಣ ತಿನ್ನುವ ಹೆಂಡಂದಿರ ಗಂಡಂದಿರಿಗೆ, ಹೊಟೇಲು ಊಟ ಬೇಡವೇ ಬೇಡ ಎನ್ನುವ ಕಟ್ಟಾ ಸಂಪ್ರದಾಯವಾದಿಗಳಿಗೆ ಪಾಕಶಾಲೆಯೆಂಬ ಪಾಕಶಾಲೆ ಒಂದು ಪ್ರಯೋಗಶಾಲೆಯಿದ್ದಂತೆ.
ರಸ್ತೆಬದಿಯಲ್ಲಿ ಹಾಳುಮೂಳು ಸುಟ್ಟುಸುಡುಗಾಡು ತಿನ್ನುತ್ತಿದ್ದರೂ ಏನೋ ಒಂದು ಮನೆಯಲ್ಲಿಯೇ ಮಾಡಿ ತಿಂದರೆನೇ ಜಿಹ್ವಾಚಾಪಲ್ಯವನ್ನು ತಣಿಸಿದಂತಾಗುತ್ತದೆ. ಏನೂ ಮಾಡಲು ಬರದಿದ್ದರೂ ಅನ್ನ ಬೇಯಿಸಿ ಒಗ್ಗರಣೆ ಹಾಕಿ ಮಾಡಿದ ಚಿತ್ರಾನ್ನವೇ ನಮ್ಮ, ಅಟ್ಲೀಸ್ಟ್ ನನ್ನ ಪಾಲಿಗೆ ಅವತ್ತಿನ ಮೃಷ್ಟಾನ್ನ. ಯಾರೇ ಮಾಡಿದರೂ ನನಗಿಂತ ಚೆನ್ನಾಗಿ ಯಾರೂ ಮಾಡುವುದಿಲ್ಲ ಎಂಬ ಬಡಾಯಿ ಬೇರೆ.
ಅಮ್ಮನಿಂದ ಹೇಳಿಸಿಕೊಂಡು, ಪುಸ್ತಕಗಳನ್ನು ಓದಿ ತಮಗೆ ತೋಚಿದಂತೆ ಮಾಡುವವರು ಒಂದು ಬದಿಯಾದರೆ ; ಎಲ್ಲ ಗೊತ್ತಿದ್ದೂ ಇದ್ದ ಸಾಮಾನುಗಳಲ್ಲೇ ಪರ್ಮುಟೇಷನ್ ಕಾಂಬಿನೇಷನ್‌ಗಳನ್ನೆಲ್ಲ ಬದಲಾಯಿಸಿ ಹೊಚ್ಚಹೊಸ ಖಾದ್ಯ ತಯಾರು ಮಾಡುವವರದು ಇನ್ನೊಂದು ಬದಿ. ಕೆಲವೊಮ್ಮೆ ಡಿಫರೆಂಟಾಗಿ ಏನೋ ಮಾಡಲು ಹೋಗಿ ಇನ್ನೇನೋ ಆಗಿ ಅದಕ್ಕೊಂದು ಹೊಸ ಹೆಸರನ್ನೇ ಇಡುವಂಥ ಪ್ರಮೇಯವೂ ಬರಬಹುದು. ಒಟ್ಟಿನಲ್ಲಿ ಹೊಸಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರಬೇಕು. ಹೊಸ ಇನ್ವೆನ್ಷನ್ ಕಂಡುಹಿಡಿಯುತ್ತಲೇ ಇರಬೇಕು. ಒಟ್ಟಿನಲ್ಲಿ ಅಡುಗೆ ಮಾಡಲು ಆಸಕ್ತಿಯಿರಬೇಕು. ಅದಕ್ಕಿಂತ ಹೆಚ್ಚಾಗಿ ಮಾಡಿದ್ದನ್ನು ಇತರರೊಂದಿಗೆ ಹಂಚಿಕೊಂಡು ತಿನ್ನುವ ಗುಣವಿರಬೇಕು.
ಅಂಥದೇ ಪ್ರಯೋಗ ಮಾಡಲು ಹೋಗಿ ಹುಟ್ಟಿಕೊಂಡಿದ್ದೇ ಕಡಲೆಹಿಟ್ಟಿನ ಪಾಯಸ. ಅಳಿಯ ಅಲ್ಲ ಮಗಳ ಗಂಡ ಅನ್ನುವ ಹಾಗೆ ಕರ್ನಾಟಕದ ಒಂದೊಂದು ಭಾಗಗಳಲ್ಲೂ ಇನ್ನೊಂದು ಹೆಸರು ಹಿಡಿದು ಕರೆಯಬಹುದು. ಇದು ಹಳೆಯ ರುಚಿ ಎಂದು ಹೀಗಳೆಯಬೇಡಿ. ಏಕೆಂದರೆ ಇದು ನಮ್ಮಂಥವರಿಗೆ ಹೊಸ ರುಚಿಯೇ. ಈಗ ಮಾಡುವ ವಿಧಾನ ಹೇಳುತ್ತೇನೆ ಬನ್ನಿ.
ಬೇಕಾಗುವ ಪದಾರ್ಥಗಳು:
1) ಹಾಲು : ಒಂದು ಲೋಟ (ಹತ್ತು ಜನರಿದ್ದರೆ ಹತ್ತು ಲೋಟ)
2) ಕಡಲೆಹಿಟ್ಟು : ಅರ್ಧ ಬಟ್ಟಲು
3) ಕಲ್ಲುಸಕ್ಕರೆ (ಸಕ್ಕರೆಯ ಬದಲು, ಫಾರಚೇಂಜ್)
4) ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ
5) ಚಿಟಿಕೆ ಏಲಕ್ಕಿ ಪುಡಿ
6) ತುಪ್ಪ
ಮಾಡುವ ವಿಧಾನ :
ಮೊದಲು ಸ್ವಲ್ಪ ಪ್ರಮಾಣದಲ್ಲಿ ಹಾಲನ್ನು ಪಾತ್ರೆಯಲ್ಲಿ ಹಾಕಿಕೊಂಡು ಅದಕ್ಕೆ ಕಡಲೆಹಿಟ್ಟನ್ನು ಸ್ವಲ್ಪಸ್ವಲ್ಪವೇ ಹಾಕುತ್ತ ಕೈಯಾಡಿಸುತ್ತಿರಬೇಕು. ಉರಿ ಸಣ್ಣಗಿರಲಿ. ಕೈಯಾಡಿಸುತ್ತ ಪೇಸ್ಟ್ ಥರ ಮಾಡಿಕೊಳ್ಳಬೇಕು. ಕಡಲೆಹಿಟ್ಟು ಗಂಟಾಗದಂತೆ ಎಚ್ಚರವಹಿಸುವ ಎಕ್ಸ್‌ಪರ್ಟ್ ಕೈಗಳಿದ್ದರೆ ಉತ್ತಮ. ಪೇಸ್ಟ್ ತಯಾರಾದನಂತರ ಅದಕ್ಕೆ ಉಳಿದ ಹಾಲನ್ನು ಸುರಿಯಬೇಕು. ಈಗ ಸ್ಟೌನ ಉರಿಯನ್ನು ಜಾಸ್ತಿ ಮಾಡಬಹುದು. ನಂತರ ಅದಕ್ಕೆ ಕಲ್ಲುಸಕ್ಕರೆ, ಬಾದಾಮಿ, ಒಣ ದ್ರಾಕ್ಷಿ, ಪಿಸ್ತಾ, ಏಲಕ್ಕಿ ಪುಡಿ ಹಾಕಿ ಕುದಿಸಬೇಕು. ಅಷ್ಟೇ, ಕಡಲೆಹಿಟ್ಟಿನ ಪಾಯಸ ತಯಾರ್. ಬಿಸಿಬಿಸಿಯಾದ ಪಾಯಸದ ಮೇಲೆ ಒಂದು ಚಮಚ ತುಪ್ಪ ಹಾಕಿ ಹೊಟ್ಟೆಗಿಳಿಸಿದರೆ... ಆಹಾ!



Click it and Unblock the Notifications
