Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಸಿಹಿಪಾಕಶಾಲೆ: ರುಚಿಕರ ಹೆಸರುಬೇಳೆ ಹಲ್ವಾ
ದಿನನಿತ್ಯದ ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸುವ ಹೆಸರುಬೇಳೆಯನ್ನು ಸಿಹಿ ತಿಂಡಿ ತಯಾರಿಸಲು ಬಳಸುವುದು ಸ್ವಲ್ಪ ಕಮ್ಮಿ. ಸಾರು, ಸಾಂಬಾರಿಗೆ ಬಳಕೆಯಾದಂತೆ ಸಿಹಿ ಪದಾರ್ಥ ಮಾಡುವಾಗ ಹೆಸರುಬೇಳೆ ಅಷ್ಟಾಗಿ ಬಹುತೇಕ ಬಳಕೆಯಾಗುವುದಿಲ್ಲ. ಆದರೂ ವಿಶೇಷ ಸಂದರ್ಭಗಳಲ್ಲಿ ಹೆಸರುಬೇಳೆಯನ್ನು ಬಳಸಿ, ಹಲ್ವಾ, ಪಾಯಸ, ಒಬ್ಬಟ್ಟು ಮುಂತಾದ ಸಿಹಿ ತಿನಿಸು ಮಾಡಿ ಸವಿದಿರುವ ಸಾಧ್ಯತೆ ಇಲ್ಲದಿಲ್ಲ. ಸರಳ ವಿಧಾನದಲ್ಲಿ ಹೆಸರುಬೇಳೆ ಹಲ್ವಾ ಮಾಡುವ ರೀತಿಯನ್ನು ನೋಡೋಣ ಬನ್ನಿ
ಶ್ವೇತಶ್ರೀ ಭಟ್, ಹೇಮಗಿರಿ
ತಯಾರಿಸಲು ಬೇಕಾದ ಸಾಮಾಗ್ರಿ:
ಹೆಸರು ಬೇಳೆ : ಒಂದೂವರೆ ಕಪ್
ಹಾಲಿನ ಖೋವಾ :ಒಂದೂವರೆ ಕಪ್
ಹಾಲು :ಎರಡೂವರೆ ಕಪ್
ಸಕ್ಕರೆ: 1ಕಪ್
ತುಪ್ಪ: 1 ಕಪ್
ಗೋಧಿ ಹಿಟ್ಟು : 3 ಟೀ ಚಮಚ
ಒಣದ್ರಾಕ್ಷಿ, ಗೋಡಂಬಿ, ಬಾದಾಮಿ ರುಚಿಗೆ ತಕ್ಕಷ್ಟು
ಏಲಕ್ಕಿ ಪುಡಿ : 2 ಟೀ ಚಮಚ
ಮಾಡುವ ವಿಧಾನ:
ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು, ಶುದ್ಧವಾದ ನೀರಿನಲ್ಲಿ 2 ಗಂಟೆಗಳ ಕಾಲ ನೆನೆಸಿಡಿ. ನೆಂದ ಬೇಳೆಯನ್ನು ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ,(ರುಬ್ಬಲು ನೀರನ್ನು ಕಡಿಮೆ ಹಾಕಿ)ತೆಳ್ಳನೆಯ ಬಟ್ಟೆಯಲ್ಲಿ ರುಬ್ಬಿದ ಬೇಳೆಯನ್ನು ಹಾಕಿ ನೀರನ್ನು ಬಸಿಯಿರಿ. ದಪ್ಪ ತಳವಿರುವ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಸ್ವಲ್ಪ ಗೋಧಿ ಹಿಟ್ಟು ಹಾಕಿ ಎರಡು ಮೂರು ನಿಮಿಷ ಹುರಿಯಿರಿ. ಹೆಸರುಬೇಳೆ ಮಿಶ್ರಣವನ್ನು ,ಗೋಧಿ ಹಿಟ್ಟಿನೊಂದಿಗೆ ಬೆರಸಿ ಸುಮಾರು 20 ನಿಮಿಷಗಳ ಕಾಲ ಕೈಯಾಡಿಸುತ್ತಿರಿ.
ಬಾಣಲೆಯಲ್ಲಿ ಮಿಶ್ರಣವು ಗಾಢವಾದ ಬಣ್ಣಕ್ಕೆ ತಿರುಗಿದ ನಂತರ, ಖೋವಾವನ್ನು ಪುಡಿ ಮಾಡಿ ಹಾಕಿ ನಸುಗೆಂಪು ಬಣ್ಣ ಬರುವ ತನಕ ಹುರಿಯಿರಿ. ಈ ಮಿಶ್ರಣಕ್ಕೆ ಹಾಲು, ಸಕ್ಕರೆ ಸೇರಿಸಿ ಕೈಯಾಡಿಸುತ್ತಾ ಇರಿ. ಪಾತ್ರೆ ತಳ ಹತ್ತದಂತೆ ಜಾಗ್ರತೆ ವಹಿಸಿ. ಮಿಶ್ರಣವು ಸಮನಾಗಿ ಬೆರತ ಮೇಲೆ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿರಿ. ಏಲಕ್ಕಿ ಪುಡಿ, ಒಣದ್ರಾಕ್ಷಿ, ಗೋಡಂಬಿ ಸೇರಿಸಿ ಬಿಸಿಬಿಸಿಯಾಗಿ ರುಚಿಕರವಾದ ಹಲ್ವಾವನ್ನು ಸೇವಿಸಬಹುದು.
(ದಟ್ಸ್ ಕನ್ನಡ ಪಾಕಶಾಲೆ)



Click it and Unblock the Notifications
