Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದೀಪಾವಳಿಗೆ ಸವಿಸವಿ ಶ್ಯಾವಿಗೆ ಪಾಯಸ

ಶ್ಯಾವಿಗೆ ಪಾಯಸವೆಂದಕೂಡಲೆ ನೆನಪಾಗುವುದು ಬೆಳಗಾವಿಯಲ್ಲಿ ತಯಾರಿಸಿ ಮಾರುತ್ತಿದ್ದ ಸಜ್ಜಿಪಿಟ್ಟೆ ಅಥವಾ ಸಜ್ಜಿಗೆಪಿಟ್ಟೆ ಮತ್ತು ಹುಬ್ಬಳ್ಳಿಯ ನಮ್ಮ ಮಾಮಿ, ಅಂದರೆ ನನ್ನ ಸೋದರ ಮಾವನ ಹೆಂಡತಿ. ಇಂದಿಗೂ ಕೂಡ ಮನೆಯಲಿ ತಯಾರಿಸುವ ಶ್ಯಾವಿಗೆಗೆ ಸಜ್ಜಿಗೆಪಿಟ್ಟೆ ಬೆಳಗಾವಿಯಿಂದಲೇ ಬರುತ್ತದೆ. ಮಾಮಿ ಮಾಡಿದ ಶ್ಯಾವಿಗೆ ಆಲ್ ಇಂಡಿಯಾ ವರ್ಲ್ಡ್ ಫೇಮಸ್ ಅಂದರೂ ಅಡ್ಡಿಯಿಲ್ಲ. ಅವರು ತಯಾರಿಸುವ ಅಡುಗೆ ಅಷ್ಟಕ್ಕಷ್ಟೇ ಆದರೂ ಶ್ಯಾವಿಗೆಗೆ ಮಾತ್ರ ಹೆಸರಿಡುವ ಹಾಗಿಲ್ಲ. ಅಷ್ಟು ನೀಳವಾಗಿ ಮತ್ತು ಸದೃಢವಾಗಿರುತ್ತದೆ. ಅವರ ಶ್ಯಾವಿಗೆ ಅಮೆರಿಕ ಕೂಡ ತಲುಪಿದೆಯೆಂದರೆ ನೀವು ಅಚ್ಚರಿಪಡಬಾರದು.
ಅವರು ಬೆಂಗಳೂರಿಗೆ ಬಂದಾಗಲೆಲ್ಲ, ಶ್ಯಾವಿಗೆ ಮಾಡಲಿಕ್ಕಾದರೂ ತಾವೇ ಸ್ವತಃ ನಮ್ಮ ಮನೆಗೆ ಬರುತ್ತಿದ್ದರು. ಒಮ್ಮೆ ಅದೇನಾಯಿತೋ ಶ್ಯಾವಿಗೆ ಕಲಿಸಿದ್ದು ಸರಿಯಾಗಿರಲಿಲ್ಲವೆಂದು ಕಾಣುತ್ತದೆ. ಉದ್ದ ಕೋಲಿಗೆ ಇಳಿಬಿಟ್ಟ ಶ್ಯಾವಿಗೆ ಬುದುಬುದು ಅಂತ ನೆಲಕ್ಕೆ ಬೀಳಲು ಪ್ರಾರಂಭಿಸಿತು. ನಾವೆಲ್ಲ, ಲಂಡನ್ ಬ್ರಿಜ್ ಈಸ್ ಫಾಲಿಂಗ್ ಡೌನ್ ಹಾಡನ್ನೇ, ಮಾಮಿ ಶ್ಯಾವಿಗೆ ಫಾಲಿಂಗ್ ಡೌನ್ ಅಂತೆಲ್ಲ ಹಾಡಿ ಅವರನ್ನು ಕಾಡಿ ಇಟ್ಟಿದ್ದವು. ಒಂದು ಹರಳು ಉಪ್ಪು ಹೆಚ್ಚು ಕಡಿಮೆಯಾದರೂ ಶ್ಯಾವಿಗೆ ಫಾಲಿಂಗ್ ಡೌನ್ ಖಚಿತ.
ಮತ್ತೊಂದೇನಪ್ಪಾ ಅಂದ್ರೆ, ಉತ್ತರ ಕರ್ನಾಟಕದಲ್ಲಿ ಹಬ್ಬಹರಿದಿನಗಳಲ್ಲಿ ಕೂಡ ಸ್ಪರ್ಧೆಗೆ ನಿಂತರೆ ಲೀಟರುಗಟ್ಟಲೆ ಖೀರನ್ನು ಕುಡಿಯುವವರಿದ್ದಾರೆ. ಈಗ ಶ್ಯಾವಿಗೆ ತಯಾರಿಸುವುದು ಹೇಗೆಂದು ತಿಳಿಯುವ ಬದಲು ನೇರವಾಗಿ ಶ್ಯಾವಿಗೆ ಪಾಯಸ ಅಥವಾ ಖೀರು ತಯಾರಿಸುವುದು ಹೇಗೆಂದು ತಿಳಿಯೋಣ. ಶ್ಯಾವಿಗೆ ತಯಾರಿಸುವುದು ಹೇಗೆಂದು ನನ್ನ ಮಾಮಿಯನ್ನು ಕೇಳಿ ಮತ್ತೊಮ್ಮೆ ಬರುಯುತ್ತೇನೆ.
ಪದಾರ್ಥಗಳನ್ನು ಪಟ್ಟಿಮಾಡಿಕೊಳ್ಳಿ
* ಮಾಮಿ ಅಂಥವರು ತಯಾರಿಸಿದ ಶ್ಯಾವಿಗೆ ಆಗಬಹುದು ಅಥವಾ ಅಂಗಡಿಯಲ್ಲಿನ ಪ್ಯಾಕೆಟ್ ಶ್ಯಾವಿಗೆಯೂ ಆಗಬಹುದು. 1 ಕಪ್.
* ಹಾಲು 3 ಕಪ್. ಗಟ್ಟಿ ಬೇಕಿದ್ದರೆ ಹಾಲು 2 ಕಪ್ ಆದರೂ ಆದೀತು.
* ಸಕ್ಕರೆ 1 ಕಪ್.
* ಒಣ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ ಎಟ್ಸಿಟ್ರಾ.
* ತುಪ್ಪ 1 ಸ್ಪೂನ್
ತಯಾರಿಸುವ ವಿಧಾನ
* ಮೊದಲಿಗೆ ಮುರಿದಿಟ್ಟುಕೊಂಡ ಶ್ಯಾವಿಗೆಯನ್ನು ತವಾದಲ್ಲಿ ತುಪ್ಪ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿದಿಟ್ಟುಕೊಳ್ಳಬೇಕು.
* ಹಾಲನ್ನು ಕುದಿಯಲಿಟ್ಟು ಅದು ಕುದಿಯಲು ಪ್ರಾರಂಭಿಸುತ್ತಿದ್ದಂತೆ ಶ್ಯಾವಿಗೆ ಸುರಿಯಬೇಕು.
* ಕೆಲ ಕಾಲದ ನಂತರ ಅದನ್ನು ಕೆಳಗಿಳಿಸಿಟ್ಟು ತುಸು ಬೆಚ್ಚಗಾದ ನಂತರ ಅದಕ್ಕೆ ಸಕ್ಕರೆ ಹಾಕಿ ಕದಡಬೇಕು. ಕುದಿಯುವಾಗ ಸಕ್ಕರೆ ಹಾಕಬಾರದು.
* ನಂತರ ತುಪ್ಪದಲ್ಲಿ ಹುರಿದಿಟ್ಟುಕೊಂಡ ಒಣ ದ್ರಾಕ್ಷಿ ಮತ್ತು ಗೋಡಂಬಿ ಮತ್ತು ಏಲಕ್ಕಿ ಪುಡಿಯನ್ನು ಹಾಕಬೇಕು.
ಬಿಸಿಬಿಸಿಯಾಗಿದ್ದ ಪಾಯಸವನ್ನು ಹಾಗೆಯೇ ಸವಿಯಬಹುದು ಅಥವಾ ಪೂರಿಯೊಂದಿಗೂ ಮೆಲ್ಲಬಹುದು.



Click it and Unblock the Notifications
