Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನವರಾತ್ರಿಗೆ ಹಲಸಿನ ಹಣ್ಣಿನ ಪಾಯಸ

ಈ ನವರಾತ್ರಿಗೆ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹೆಚ್ಚಾಗಿ ಸಿಗುವ ಹಲಸಿನ ಹಣ್ಣಿನಿಂದ ಪಾಯಸ ಮಾಡಿ ಅದರ ರುಚಿಯನ್ನು ಸವಿಯಿರಿ.
ಬೇಕಾಗುವ ಸಾಮಾಗ್ರಿಗಳು
1.ಹಲಸಿನ ಹಣ್ಣಿನ ರಸ 1 ಕಪ್
2. ಬೆಲ್ಲ 1 ಕಪ್ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು
3. ತೆಂಗಿನ ಕಾಯಿ ಹಾಲು 1 ಕಪ್
4. ಒಂದು ಚೂರು ಏಲಕ್ಕಿ
5. ಸ್ವಲ್ಪ ಉಪ್ಪು
6. 2-3 ಚಮಚ ಅಕ್ಕಿ ಹಿಟ್ಟು
7. 8-10 ಗೇರು ಬೀಜ
8. 10-12 ಒಣ ದ್ರಾಕ್ಷಿ
ಮಾಡುವ ವಿಧಾನ:
1.ಒಂದು ಪಾತ್ರೆಗೆ ಪುಡಿ ಮಾಡಿದ ಬೆಲ್ಲವನ್ನು ಹಾಕಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ಕುದಿಸಿ. ಈಗ ಬೆಲ್ಲದ ಪಾನಕ ರೆಡಿ.
2. ಬೆಲ್ಲದ ಪಾನಕಕ್ಕೆ ತೆಂಗಿನ ಕಾಯಿ ಹಾಲು ಹಾಕಿ ತಿರುಗಿಸಿ.
3. ಒಂದು ಚಮಚ ತುಪ್ಪ ಹಾಕಿ ಹಲಸಿನ ಹಣ್ಣನ್ನು ಅದರ ಬಣ್ಣ ಬದಲಾಗುವರೆಗೆ ಹುರಿಯಿರಿ
4. ಹಲಸಿನ ರಸವನ್ನು ಬೆಲ್ಲ ಹಾಗೂ ತೆಂಗಿನ ಕಾಯಿ ಮಿಶ್ರಣಕ್ಕೆ ಸುರಿದು ಚೆನ್ನಾಗಿ ತಿರುಗಿಸಿ. ಗಟ್ಟಿ ಪಾಯಾಸ ಬೇಕಾದರೆ ಸ್ವಲ್ಪ ಅಕ್ಕಿ ಪುಡಿ ಸೇರಿಸಿ.
5.ಅದರ ಮೇಲೆ ಗೋಡಂಬಿ ಹಾಗೂ ಒಣದ್ರಾಕ್ಷಿಯನ್ನು ಹಾಕಿ. ರುಚಿರುಚಿಯಾದ ಹಲಸಿನ ಹಣ್ಣಿನ ಪಾಯಸ ನವರಾತ್ರಿಯ ಹಬ್ಬದ ಊಟಕ್ಕೆ ರೆಡಿ.



Click it and Unblock the Notifications
