Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಮ್ಮಾ ನನಗೆ ಚಾಕಲೇಟ್ ಕಾರ್ನ್ ಫ್ಲೇಕ್ಸ್ ಕೇಕ್ ಬೇಕು

ಚಿಂತೆ ಬಿಡಿ, ಚಾಕಲೇಟ್ ಕಾರ್ನ್ ಫ್ಲೇಕ್ಸ್ ಕೇಕ್ ಮಾಡಿ ನಿಮ್ಮ ಮಗುವಿಗೆ ಕೊಡಿ ಖಂಡಿತ ಇದು ನಿಮ್ಮ ಮಗುವಿಗೆ ಇಷ್ಟವಾಗುವುದು. ಇದನ್ನು ಮೈಕ್ರೋವೇವ್ ನಲ್ಲಿ ತಯಾರಿಸಬಹುದಾಗಿದ್ದು ಇದನ್ನು ಮಾಡುವ ವಿಧಾನ ಸರಳವಾಗಿದೆ.
ಚಾಕಲೇಟ್ ಕಾರ್ನ್ ಫ್ಲೇಕ್ಸ್ ಕೇಕ್ ಮಾಡಲು ಬೇಕಾಗುವ ಸಾಮಾಗ್ರಿಗಳು
1. 1 1/2 ಕಪ್ ಕಡಲೆಹಿಟ್ಟು
2. 1/2 ಕಪ್ ಸಕ್ಕರೆ
3. 1 ಕಪ್ ಕಾರ್ನ್ ಫ್ಲೇಕ್ಸ್
4. 2 ಮೊಟ್ಟೆ
5. ಒಣ ಹಣ್ಣುಗಳಾದ ಗೋಡಂಬಿ, ದ್ರಾಕ್ಷಿ, ಬಾದಾಮಿ
6. ಲಿಕ್ವಿಡ್ ಕೊಕೊ 4 ಚಮಚ
7. 1 ಕಪ್ ಹಾಲು
8. 50 ಗ್ರಾಂ ಬೆಣ್ಣೆ
9. 1 ದೊಡ್ಡ ಚಾಕಲೇಟ್ ಬಾರ್
ಮಾಡುವ ವಿಧಾನ:
1. ಬೆಣ್ಣೆಯನ್ನು 2 ನಿಮಿಷಗಳ ಅಧಿಕ ಉಷ್ಣತೆಯಲ್ಲಿ ಮೈಕ್ರೋವೇವ್ ನಲ್ಲಿ ಇಡಿ.
2. ಒಂದು ಪಾತ್ರೆಗೆ ಕಡಲೆ ಹಿಟ್ಟು, ಸಕ್ಕರೆ, ಕೊಕೊ, ಕಾರ್ನ್ ಪ್ಲೇಕ್ಸ್ ಕಾಕಿ ಚೆನ್ನಾಗಿ ಕಲಸಿ ಅದಕ್ಕೆ ಗೋಡಂಬಿ, ದ್ರಾಕ್ಷಿ, ಬಾದಮಿಯನ್ನು ಕಾಕಿ , ಅದಕ್ಕೆ ಮೊಟ್ಟೆಯನ್ನು ಹಾಕಿ ಕಲಸಿ.
3. ಕರಗಿದ ಬೆಣ್ಣೆಯನ್ನು ಆ ಮಿಶ್ರಣದ ಮೇಲೆ ಸುರಿದು ಚೆನ್ನಾಗಿ ಕಲಸಿ.
4. ಅದನ್ನು ಮೈಕ್ರೋವೇವ್ ಓವನ್ ನಲ್ಲಿ ಇಟ್ಟು 200 ಡಿಗ್ರಿ ಉಷ್ಣತೆಗೆ ಬೇಯಿಸಿ
5. ಬೇಯಿಸಿದ ಪದಾರ್ಥವನ್ನು ಬೆಣ್ಣೆಯಿಂದ ಸವರಿ.
6. ನಂತರ 20 ನಿಮಿಷಗಳ ಕಾಲ ಓವನ್ ನಲ್ಲಿ ಬೇಯಲು ಬಿಡಿ. ನಂತರ 10 ನಿಮಿಷಗಳ ಕಾಲ ತಣ್ಣೆಗಾಗಲು ಬಿಡಿ.
7. ಅದೇ ಸಮಯದಲ್ಲಿ ಹಾಲನ್ನು ಚೆನ್ನಾಗಿ ಕುದಿಸಿ ಅದಕ್ಕೆ ಚಾಕಲೇಟ್ ಬಾರ್ ಹಾಕಿ ಚೆನ್ನಾಗಿ ಕರಗಿಸಿ.
8. ಈ ಹಾಲು ಚಾಕಲೇಟ್ ಮಿಶ್ರಣವನ್ನು ತಣ್ಣಗಾದ ಪದಾರ್ಥದ ಮೇಲೆ ಸುರಿದು ಫ್ರಿಜ್ ನಲ್ಲಿ ಒಂದು ಗಂಟೆಗಳ ಇಡಿ.
ನಂತರ ತೆಗೆದು ನೋಡಿದರೆ ರುಚಿಕರವಾದ ಕಾರ್ನ್ ಫ್ಲೇಕ್ಸ್ ಕೇಕ್ ರೆಡಿ.



Click it and Unblock the Notifications
