Latest Updates
-
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ
ಮಲ್ಲುಗಳಿಗೆ ಹಬ್ಬ ಮಲ್ಲೇಶನಿಗೆ ಪಾಯಸ

ಇಂಥ ಆಹಾರ ವಿಹಾರದ ಕಲ್ಪನೆ ನೆರೆಯ ಕೇರಳದಲ್ಲೂ ಹೇರಳವಾಗುಂಟು. ಇವತ್ತಿನ ದಿನ ಕೇರಳಿಗರಿಗೆ ದೊಡ್ಡ ಹಬ್ಬ. ಓಣಂ ಹಬ್ಬವನ್ನು ಪ್ರತಿಯೊಬ್ಬ ಕೇರಳಿಗ ಸಂಭ್ರಮದಿಂದ ಆಚರಿಸುತ್ತಾನೆ. ಇತರ ರಾಜ್ಯದ ಜನರು ಕೇರಳಿಗರನ್ನು ಮಲ್ಲು ಎಂದು ಸಂಭೋಧಿಸಿತ್ತಾರೆ.ವಿಶ್ವಾಸ ಉಕ್ಕಿದಾಗಲೂ ಮಲ್ಲು ಎನ್ನುವರು,ಯಾವುದೋ ಒಂದು ಕಾರಣಕ್ಕೆ ಕೋಪಬಂದಾಗಲೂ ಮಲ್ಲು ಎನ್ನುವರು. ಓಣಂ ಮಲ್ಲುಗಳಿಗೆ ನಾಡಹಬ್ಬ. ಥಾಮಸ್ ಕುಟ್ಟಿಗೆ, ಉನ್ನಿಕೃಷ್ಣನ್ನಿಗೆ, ಆಂಟೊನಿಗೆ, ಅಪ್ಪು ಪಪ್ಪುಗೆ ಮತ್ತೆಲ್ಲರಿಗೆ ಇವತ್ತು ಹಬ್ಬ. ಈ ಹಬ್ಬಕ್ಕೆ ಜಾತಿ, ಧರ್ಮ,ಪಂಗಡದ ಸೋಂಕಿಲ್ಲ. ಕೇರಳಿಗರಂತೆ ಇಡೀ ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯನ್ನು ಒಳಗೊಳ್ಳುವ ಒಂದು ಹಬ್ಬ ಕನ್ನಡನಾಡಿಗರಿಗೆ ಇಲ್ಲವಾಯಿತಲ್ಲಾ ಎಂದು ಅನಿಸುತಿದೆ.
ಸಿಎನ್ ಎನ್ ಸಂಪಾದಕ ರಾಜದೀಪ್ ಸರ್ದೇಸಾಯಿ ಅವರು ಇವತ್ತಿನ ಟ್ವೀಟ್ ನಲ್ಲಿ ಹೀಗೆ ಬರೆದಿದ್ದಾರೆ. happy onam everyone! given the strong kerala brigade in office no surprise that we are doing a special on cnn ibn at 8.30 pm "mallu power". ನಮ್ಮ ಕಚೇರಿಯಲ್ಲೂ ಮಲ್ಲುಗಳಿಗೆ ಕೊರತೆಯಿಲ್ಲ. ಬಹುತೇಕ ಇವತ್ತು ಎಲ್ಲರೂ ರಜೆ ಹಾಕಿ ಕೊಚ್ಚಿ, ಕೊಟ್ಟಾಯಂ, ಅಲ್ಲಪುಜ, ಪಾಲಕ್ಕಾಡ್, ತ್ರಿಸ್ಸೂರು ಕಡೆ ಹಾಯುವ ಬಸ್ಸು ರೈಲು ಹತ್ತಿಹೋಗಿದ್ದಾರೆ. ನಿನ್ನೆ ಕಚೇರಿಯಿಂದ ಬಸ್ ಸ್ಟ್ಯಾಂಡಿಗೆ ಹೊರಡುವ ಮುನ್ನ ನನ್ನ ಸಹೋದ್ಯೋಗಿ ಧನ್ಯ ಸಿಕ್ಕಳು. ಹಬ್ಬದ ವಿಶೇಷ ಏನು ಎಂದು ಕೇಳಿದೆ. ಅವಳು ತನ್ನೂರು ನೆಲ್ಲಿಕುಜಿಯಲ್ಲಿ ಚಕ್ಕ ಪ್ರಥಮನ್ ಮೆಲ್ಲುವುದಾಗಿಯೂ ನೀವು ನಿಮ್ಮ ಮನೆಯಲ್ಲಿ ತಯಾರು ಮಾಡಿಕೊಳ್ಳಿ ಶಾಮ್, ತುಂಬಾ ಸಿಂಪಲ್ ರೆಸಿಪಿ ಎಂದು ಹೇಳಿಹೊರಟಳು.
ಓಣಂ ದಿವಸ ಅಕ್ಕಿ ಮತ್ತು ಕಾಯಿಹಾಲು ಬಳಸಿ ಮಾಡುವ ಅಡ ಪ್ರಥಮನ್ ವಿಶೇಷ ಖಾದ್ಯವಂತೆ. ಇನ್ನೊಂದು ಓಣಂ ತಿಂಡಿಯ ಹೆಸರು ಕಾಳನ್. ತಾಜಾ ಹಲಸಿನ ಹಣ್ಣು ಮಾರುಕಟ್ಟೆಯಲ್ಲಿ ಸಿಕ್ಕರೆ ತಯಾರಿಸುವ ಸಿಹಿ ತಿನಿಸು ಚಕ್ಕ ಪ್ರಥಮನ್. ಹಲಸು ಪೊಗದಸ್ತಾಗಿ,ಗೊಂಚಲುಗೊಂಚಲಾಗಿ ಅರಳುವ ಋತುವಿನಲ್ಲಿ ಹಣ್ಣಿನ ತೊಳೆಗಳನ್ನು ಮಿಕ್ಸಿಗೆ ಹಾಕಿ ಜಾಮ್ ರೀತಿ ರುಬ್ಬಿಕೊಂಡು ಸೀಕರಣೆಯನ್ನು ಶೀಶೆಯಲ್ಲಿ ಶೇಖರಿಸಿ ಪ್ರಿಜ್ ನಲ್ಲಿ ಇಡಬಹುದು. ಬೇಕೆಂದಾಗಲೆಲ್ಲ ಚಕ್ಕ ಪ್ರಥಮನ್ (ಹಲಸಿನ ಪಾಯಸ )ಮಾಡಿ ಸವಿಯಬಹುದು.
ಧನ್ಯಳ ರೆಸಿಪಿ ಪ್ರಕಾರ ಎರಡು ಅಚ್ಚು ಬೆಲ್ಲವನ್ನು ನೀರಿನಲ್ಲಿ ಮುಳುಗಿಸಿ ಒಲೆಯ ಮೇಲಿಡಿ. ಚೆನ್ನಾಗಿ ಕುದಿಬಂದು ಬೆಲ್ಲದ ರಸ ಆದಾಗ ಕೆಳಗಿಳಿಸಿ ಫಿಲ್ಟರ್ ಬಳಸಿ ಸೋಸಿರಿ. ಬೆಲ್ಲದಲ್ಲಿನ ಮಣ್ಣಿನ ಅಂಶ ಹೋಗಬೇಕು. ಸ್ವಲ್ಪ ಅಕ್ಕಿ ಮತ್ತು ತೆಂಗಿನಕಾಯಿಯನ್ನು ರುಬ್ಬಿಕೊಂಡು ಬೆಲ್ಲದ ರಸಕ್ಕೆ ಹಾಕಿ ಮತ್ತೆ ಕುದಿಸಬೇಕು. ಅದಕ್ಕೆ ಎರಡು ಲೋಟದಷ್ಟು ಹಲಸಿನ ಜಾಮ್ ಹಾಕಿ ಸೌಟಿನಿಂದ ಚೆನ್ನಾಗಿ ಕಲಕಿ ಪಾತ್ರೆ ಇಳಿಸಬೇಕು. ಕೊನೆಗೆ ಗೋಡಂಬಿ, ದ್ರಾಕ್ಷಿ ಸಮೇತ ತುಪ್ಪದ ಒಗ್ಗರಣೆ ಕೊಡಬೇಕು. ಅಲ್ಲಿಗೆ ಚಕ್ಕ (ಹಲಸು) ಪ್ರಥಮನ್ (ಪಾಯಸ ಅಥವಾ ಖೀರು) ಸಿದ್ಧ.ತಾಜಾ ಹಲಸಿನ ಹಣ್ಣು ಲಭ್ಯವಿದ್ದರೆ ಹಲಸಿನಹಣ್ಣನ್ನು ಸಣ್ಣಗೆ ಹೆಚ್ಚಿ ಹಾಕಬೇಕು. ಹಲಸಿನ ಪಾಯಸ ಸವಿಯಿರಿ, ಇಂಥ ಸಿಹಿ ಕಲ್ಪನೆಗಳು ದಶದಿಕ್ಕುಗಳಿಂದಲೂ ಬರಲಿ ಎಂದು ಬಯಸುತ್ತಿರಿ.



Click it and Unblock the Notifications











