Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸರ್ವರ ಅಚ್ಚುಮೆಚ್ಚಿನ ಸಿಹಿತಿನಿಸು ಕಲಾಕಂದ್

* ರಶ್ಮಿ ಸುದೀಂದ್ರ, ಹ್ಯೂಸ್ಟನ್
ತಯಾರಿಕೆಗೆ ಅಗತ್ಯವಾದ ಸಾಮಾಗ್ರಿಗಳು :
ಹಾಲು : 1 ಲೀಟರ್
ಕೋವಾ : 1ಬಾರ್
ಮಿಲ್ಕ್ಮೇಡ್ : 1 1/2 ಕಪ್
ಬಾದಾಮಿ ಮತ್ತು ಗೋಡಂಬಿ : ಸ್ವಲ್ಪ
(ಇಷ್ಟು ನಾಲ್ಕು ಮಂದಿಗೆ ಸಾಕಾಗುತ್ತದೆ)
ಮಾಡುವ ವಿಧಾನ :
ಒಂದು ಉದ್ದನೆಯ ಪಾತ್ರೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ಲೀಟರ್ ಹಾಲನ್ನು ಸುರಿಯಿರಿ. ಕಡಿಮೆ ಬಿಸಿಯಲ್ಲಿ ಕಾಯಿಸೋದಿಕ್ಕೆ ಶುರುಮಾಡಿ. ಪಾತ್ರೆಯಲ್ಲಿನ ಹಾಲು 3/4 ಭಾಗಕ್ಕೆ ಬರುವವರೆಗೂ ಕಾಯಿಸಿ. ಅನಂತರ ಹಾಲಿಗೆ ಕೋವಾ ಹಾಕಿ ಕಲಕಿ.
ಅದರೊಟ್ಟಿಗೆ ಮಿಲ್ಕ್ಮೇಡ್ ಹಾಕಿ, ಐದು ನಿಮಿಷಗಳಿಗೊಮ್ಮೆ ಚೆನ್ನಾಗಿ ಕಲುಕುತ್ತೀರಿ. ಚೆನ್ನಾಗಿ ಎಲ್ಲವೂ ಬೆರೆತಮೇಲೆ 425 ಡಿಗ್ರಿ ಶಾಖದಲ್ಲಿ ಓವನ್ನಲ್ಲಿಟ್ಟು ಕಾಯಿಸಿ. ಅದಕ್ಕೂ ಮೊದಲು ದಾಕ್ಷಿ, ಗೋಡಂಬಿ, ಬಾದಾಮಿ ಸೇರಿಸಿ.
ನಂತರ ನಾಲ್ಕು ಮೂಲೆಗಳ ಬಾಣಲೆಗೆ ಎಣ್ಣೆ ಅಥವಾ ತುಪ್ಪ ಸವರಿ ಮಿಶ್ರಣವನ್ನು ಸುರಿಯಿರಿ. ಮತ್ತೆ ಹತ್ತು ನಿಮಿಷಗಳ ಕಾಲ ಓವನ್ನಲ್ಲಿಟ್ಟು ಬೇಯಿಸಿ. ಅರ್ಧ ಗಂಟೆ ನಂತರ ಬಾಣಲೆ ಹೊರತೆಗೆದು, ಬೇಕಾದ ರೂಪಕ್ಕೆ ಕತ್ತರಿಸಿ.
ಸಿದ್ದವಾಗಿರುವ ಕಲಾಕಂದ್ ಮೊದಲ ನೋಟಕ್ಕೆ ನಿಮ್ಮನ್ನು ಸೆಳೆಯುತ್ತದೆ. ರುಚಿರುಚಿಯ ಹಾಲುಭರಿತ ಪೌಷ್ಠಿದಾಯಕ ತಿನಿಸು. ಇದನ್ನು ಐದು ದಿನಗಳ ಕಾಲ ಮನೆಯ ತಂಗಲು ಪೆಟ್ಟಿಗೆಯಲ್ಲಿ ಕೆಡದಂತೆ ರಕ್ಷಿಸಬಹುದು.



Click it and Unblock the Notifications
