Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಚಾಕಲೇಟ್ ಡೇಗೆ ಪ್ರೀತಿಯ ಉಡುಗೊರೆ

ನೀವೇ ತಯಾರಿಸಿದ ಚಾಕಲೇಟ್ ಆದರೆ ಅವರಿಗೆ ನಿಮ್ಮ ಮೇಲೆ ಮತ್ತಷ್ಟು ಪ್ರೀತಿ ಮತ್ತಷ್ಟು ಹೆಚ್ಚಾಗುವುದು. ನಿಮ್ಮ ಪ್ರೀತಿಗೆ ಬೋಲ್ಡ್ ಸ್ಕೈ ಕೊಡುವ ಪುಟ್ಟ ಕಾಣಿಕೆಯೆಂದರೆ ಈ ಚಾಕಲೇಟ್ ಪೇಸ್ಟ್ರೀ ರೆಸಿಪಿ. ಈ ಪೇಸ್ಟ್ರೀ ಸವಿಯುತ್ತಾ ನಿಮ್ಮ ಪ್ರೀತಿಯ ಸವಿ ಮತ್ತಷ್ಟು ಹೆಚ್ಚಲಿ.
ಬೇಕಾಗುವ ಸಾಮಾಗ್ರಿಗಳು:
* ಕೇಕ್ ಮಿಕ್ಸ್ 1 ಪ್ಯಾಕ್ ( ಯಾವುದೇ ಕೇಕ್ ಮಿಕ್ಸ್ ಆಗಬಹುದು)
* ಬೆಣ್ಣೆ 50 ಗ್ರಾಂ
* ಕೋಕಾ ಪುಡಿ 2 ಚಮಚ
* ಚಾಕಲೇಟ್ ಡ್ರಿಂಕ್ ಪುಡಿ 2 ಚಮಚ
* ಮೊಟ್ಟೆ 2
* ಒಣ ದ್ರಾಕ್ಷಿ, ಬಾದಾಮಿ
* ಅಡುಗೆ ಸೋಡಾ ಒಂದ ಚಿಟಿಕೆ
* ಚಾಕಲೇಟ್ ಸಾಸ್ 1 ಕಪ್
ತಯಾರಿಸುವ ವಿಧಾನ:
1. ಒಂದು ಕಪ್ ನೀರಿನಲ್ಲಿ ಕೇಕ್ ಮಿಕ್ಸ್ ಹಾಕಿ ಅದಕ್ಕೆ ಕೋಕಾ ಪುಡಿ, ಚಾಕಲೇಟ್ ಡ್ರಿಂಕ್ ಪುಡಿ ಮತ್ತು ಸಕ್ಕರೆ ಸೇರಿಸಿ ಮಿಶ್ರ ಮಾಡಬೇಕು.
(ಕೇಕ್ ಮಿಕ್ಸ್ ನೀರಿನಲ್ಲಿ ಹಾಕಿ ಸಿಹಿ ಎಷ್ಟಿದೆ ಎಂದು ನೋಡಿ ನಂತರ ಸಕ್ಕರೆ ಹಾಕಬೇಕು. ಇಲ್ಲದಿದ್ದರೆ ಸಕ್ಕರೆ ಜಾಸ್ತಿಯಾಗುವುದು.)
2. ಈಗ ಬೆಣ್ಣೆ ಮತ್ತು ಮೊಟ್ಟೆಯನ್ನು ಸೇರಿಸಬೇಕು. ನಂತರ 5 ನಿಮಿಷ ಕಾಲ ಚೆನ್ನಾಗಿ ಕದಡಬೇಕು.
3. ಈ ಮಿಶ್ರಣಕ್ಕೆ ಒಣ ದ್ರಾಕ್ಷಿ ಮತ್ತು ನಟ್ಸ್( ಬಾದಾಮಿ) ಹಾಕಿ ಚಿಟಿಕೆ ಅಡುಗೆ ಸೋಡಾವನ್ನು ಸೇರಿಸಬೇಕು.
4.ಮೈಕ್ರೋವೇವ್ ಅನ್ನು 350 ಡಿಗ್ರಿಗೆ ಬಿಸಿ ಮಾಡಬೇಕು. ನಂತರ ಮೈಕ್ರೋವೇವ್ ಪಾತ್ರೆಯಲ್ಲಿ ಈ ಮಿಶ್ರಣವನ್ನು ಸುರಿದು 20 ನಿಮಿಷ ಬೇಯಿಸಬೇಕು.
5. ನಂತರ ಚಾಕಲೇಟ್ ಕೇಕ್ ತೆಗೆದು ಅದನ್ನು ಆಯಾತಾಕಾರದಲ್ಲಿ ಕತ್ತರಿಸಿ ಅದರ ಮೇಲೆ ಚಾಕಲೇಟ್ ಸಾಸ್ ಹಾಕಿದರೆ ಚಾಕಲೇಟ್ ಪೇಸ್ಟ್ರೀ ರೆಡಿ.



Click it and Unblock the Notifications
