Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಧಾರವಾಡದ ದೂಧ್ ಪೇಡಾ ಅಥವಾ ಹಾಲಿನ ಪೇಡೆ

ಬೇಕಾಗುವ ಸಾಮಾನು :
ಹಾಲು- 2 ಲೀಟರ್
ಸಕ್ಕರೆ- 1/ 4 ಕೇಜಿ
ಘಮಕ್ಕೆ- ರುಚಿಗೆ ತಕ್ಕಷ್ಟು ಏಲಕ್ಕಿ ಪುಡಿ
ಮಾಡುವ ವಿಧಾನ :
ಹಾಲನ್ನು ಒಂದು ಸ್ಟೀಲ್ ಪಾತ್ರೆಯಲ್ಲಿ ಹಾಕಿ ಕುದಿಯಲು ಬಿಡಿ. ಕುದಿಯುವ ಹಾಲಿನಲ್ಲಿ ಸೌಟ್ ಹಾಕಿ ತಿರುವುತ್ತಾ ಇರಬೇಕು. ಹಾಲು ಗಟ್ಟಿಯಾಗುತ್ತಾ ಬರುವಾಗ ಎಡೆಬಿಡದೆ ಕಲಕುತ್ತಿರಬೇಕು. ಈ ಹಾಲು, ಖೋವಾ ರೂಪದಲ್ಲಿ ಗಟ್ಟಿಯಾದ ನಂತರ ಕೆಳಗಿಳಿಸಿ, ತಣ್ಣಗಾಗಲು ಬಿಡಿ.
ನಂತರ ಸಕ್ಕರೆಗೆ 1 ಕಪ್ ನೀರು ಹಾಕಿ ಪಾಕಕ್ಕಿಡಿ. ಪಾಕ ಹದಕ್ಕೆ ಬಂದ ಮೇಲೆ, ಖೋವಾವಾದ ಹಾಲನ್ನು ಪಾಕಕ್ಕೆ ಬೆರೆಸಿ, ಉಂಡೆ ಮಾಡಿ, ಬೇಕಾದ ಆಕಾರಕ್ಕೆ ತಟ್ಟಿಕೊಳ್ಳಿ. ಗಟ್ಟಿಯಾಗದಿದ್ದಲ್ಲಿ ಸ್ವಲ್ಪ ಹೊತ್ತು ಒಲೆಯ ಮೇಲಿಟ್ಟು ಮತ್ತೊಮ್ಮೆ ಬೆಚ್ಚಗೆ ಮಾಡಿ. ನಂತರ ಪ್ರಯತ್ನಿಸಿ. 2 ಲೀಟರ್ ಹಾಲಿನಲ್ಲಿ ಸುಮಾರು 30 ಪೇಡಾ ಮಾಡಬಹುದು.
ದೂಧ್ ಪೇಡ ತುಂಬಾ ರುಚಿಕರ. ಆರೋಗ್ಯಕ್ಕೂ ಒಳ್ಳೆಯದು. ಪೇಡಾದ ಮೇಲೆ ಬಾದಾಮಿ ತುಂಡುಗಳನ್ನು ಉದುರಿಸಿದರೆ ಇನ್ನೂ ಚೆನ್ನ.
ಚಿಕ್ಕಮಕ್ಕಳಿಗೆ ಅಚ್ಚುಮೆಚ್ಚಾಗಿರುವ ಮಿಲ್ಕಿ ಬಾರ್ ತಯಾರಿಸಿವುದು ಹೇಗೆಂದು ನಂತರ ತಿಳಿಸುತ್ತೇನೆ. ನಿಮಗೂ ಗೊತ್ತಿದ್ದರೆ ತಿಳಿಸಿರಿ.



Click it and Unblock the Notifications
