Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಯಮ್ಮೀ ಸಿಜ್ವನ್ ಚಿಕನ್ ನೂಡಲ್ಸ್ ರೆಸಿಪಿ
ನೀವು ಚೈನೀಸ್ ತಿನಿಸನ್ನು ತಿನ್ನುವ ಮೂಡ್‌ನಲ್ಲಿದ್ದೀರಾ? ನಿಮಗೆ ಖಾರದ ಆಹಾರ ತುಂಬಾ ಇಷ್ಟವೆಂದಾದಲ್ಲಿ, ಈ ಚಿಕನ್ ಸಿಜ್ವನ್ ನೂಡಲ್ ರೆಸಿಪಿ ನಿಮ್ಮ ನಾಲಗೆಯ ರುಚಿಯನ್ನು ತಣಿಸಲು ಸಹಕಾರಿಯಾಗಿದೆ. ಹಾಗಾದರೆ ಇಂದಿನ ರಾತ್ರಿ ನಿಮ್ಮ ಸರ್ವಿಂಗ್ ಟೇಬಲ್ ಮೇಲೆ ಈ ನೂಡಲ್ಸ್ ರೆಸಿಪಿ ಸಿದ್ಧವಾಗಿರಲೇಬೇಕು.
ನೀವು ಯಾವಾಗಲಾದರೂ ಚೈನೀಸ್ ಹೋಟೆಲ್‌ಗಳಿಗೆ ಭೇಟಿ ನೀಡಿದಾಗ, ನಿಮ್ಮ ತಲೆಯಲ್ಲಿ ಮೊದಲು ಬರುವ ತಿನಿಸು ನೂಡಲ್ಸ್ ಆಗಿದೆ. ಹಾಗಿದ್ದರೆ ಇದೇ ರೆಸಿಪಿಯನ್ನು ನಿಮಗೆ ಮನೆಯಲ್ಲಿ ಟ್ರೈ ಮಾಡಬಹುದಲ್ಲವೇ?

ಸಿಜ್ವನ್ ನೂಡಲ್ಸ್ ರೆಸಿಪಿ ಟೇಸ್ಟೀ ಕೂಡ ಹೌದು ಮತ್ತು ನಿಮ್ಮ ಮನೆಯಲ್ಲಿ ಪ್ರತಿಯೊಬ್ಬರೂ ಇದನ್ನು ಇಷ್ಟಪಡುವುದು ಖಂಡಿತ. ಈ ರುಚಿರವಾದ ಚಿಕನ್ ಸಿಜ್ವನ್ ನೂಡಲ್ಸ್ ರೆಸಿಪಿಯನ್ನು ಸಂಪೂರ್ಣಗೊಳಿಸಲು ನಿಮಗೆ ಬೇಕಾಗಿರುವುದು ಬೆಳ್ಳುಳ್ಳಿ ಸಾಸ್‌ನ ರುಚಿಯಾಗಿದೆ. ಟೊಮೇಟೊ ಸಾಸ್‌ಗಿಂತ ಇದು ಹೇಳಿ ಮಾಡಿಸಿದ್ದಾಗಿದೆ.
ಹಾಗಿದ್ದರೆ ಈ ಸಂಜೆಯನ್ನು ಇನ್ನಷ್ಟು ಚೇತೋಹಾರಿಯಾಗಿಸುವ ಚಿಕನ್ ಸಿಜ್ವನ್ ನೂಡಲ್ಸ್ ರೆಸಿಪಿಯ ತಯಾರಿ ವಿಧಾನ ಈ ಕೆಳಗಿನಂತಿದ್ದು ಮಾಡಲು ಮುಂದುವರಿಯಿರಿ.
ಬಾಯಿಯಲ್ಲಿ ನೀರೂರಿಸುವ ಭಾರತೀಯ ಶೈಲಿಯ ನೂಡಲ್ಸ್
ಪ್ರಮಾಣ: 4
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು
ಹಕ್ಕಾ ರೈಸ್ ನೂಡಲ್ಸ್: ಚೈನೀಸ್ ರೆಸಿಪಿ
ಸಾಮಾಗ್ರಿಗಳು
*ಹಕ್ಕಾ ನೂಡಲ್ಸ್ - 4 ಕಪ್‌ಗಳು (ಬೇಯಿಸಿದ್ದು)
*ಚಿಕನ್ - 500 ಗ್ರಾಮ್ಸ್ (ಬೇಯಿಸಿದ್ದು ಮತ್ತು ಕುಯ್ದಿದ್ದು)
*ಬೆಳ್ಳುಳ್ಳಿ - 2 ಸ್ಪೂನ್
*ಸಿಲೆರಿ - 1 ಸ್ಪೂನ್
*ಮಿಶ್ರ ಮಾಡಿದ ತರಕಾರಿಗಳು - 3 ಕಪ್‌ಗಳು (ಕ್ಯಾರೆಟ್ಸ್, ಕ್ಯಾಪ್ಸಿಕಂ, ಬೀನ್ಸ್ ಮತ್ತು ಕ್ಯಾಬೇಜ್)
*ಸಿಜ್ವುನ್ ಸಾಸ್ - 1/2 ಕಪ್
*ಬೀನ್ ಸ್ಪ್ರೌಟ್ಸ್ - 1/2 ಕಪ್
*ತೋಪು - 1/2 ಕಪ್ (ತುಂಡುಗಳಲ್ಲಿ ಕಟ್ ಮಾಡಿರುವಂಥದ್ದು)
*ಎಣ್ಣೆ - 2 ಸ್ಪೂನ್
*ಮೆಣಸಿನ ಎಣ್ಣೆ - 1 ಸ್ಪೂನ್
*ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
*ಮೊದಲಿಗೆ ನೀವು ಎಣ್ಣೆಯನ್ನು ಬಿಸಿ ಮಾಡಿಕೊಳ್ಳಬೇಕು ಇದರೊಂದಿಗೆ ಚಿಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ, ಬೆಳ್ಳುಳ್ಳಿಯನ್ನು ಇದಕ್ಕೆ ಸೇರಿಸಿ ಮತ್ತು ಚಿನ್ನದ ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
*ಇದೀಗ ಸಿಲೆರಿ ಮತ್ತು ತರಕಾರಿಗಳನ್ನು ಸೇರಿಸಿ 4 ರಿಂದ 5 ನಿಮಿಷಗಳ ಕಾಲ ಬೇಯಿಸಿ.
*ಈಗ ಡಿಶ್‌ಗೆ, ಚಿಕನ್ ತುಂಡುಗಳನ್ನು ಹಾಕಿ ಮತ್ತು ಮಸಾಲೆ ಚೆನ್ನಾಗಿ ಮಿಶ್ರವಾಗುವವರೆಗೆ ಮಿಶ್ರಗೊಳಿಸಿ.
*ಡಿಶ್‌ಗೆ ಸಿಜ್ವನ್ ಸಾಸ್ ಸೇರಿಸಿ ಮತ್ತು ಸ್ವಲ್ಪ ನಿಮಿಷಗಳ ಕಾಲ ಬೇಯಿಸಿ.
*ಈಗ ಬೇಯಿಸಿದ ನೂಡಲ್ಸ್‌ಗಳನ್ನು ಸೇರಿಸಿ, ಇದಕ್ಕೆ ಟೋಫು ಮತ್ತು ಉಪ್ಪು ಹಾಕಿ ಚೆನ್ನಾಗಿ ತಿರುಗಿಸಿ.
*ಸ್ವಲ್ಪ ನಿಮಷಗಳ ಕಾಲ ಬೇಯಿಸಿ ಮತ್ತು ಬಿಸಿಯಾಗಿ ಬಡಿಸಿ.
ಚಿಕನ್ ಸಿಜ್ವನ್ ನೂಡಲ್ಸ್ ಸವಿಯಲು ಸಿದ್ಧವಾಗಿದೆ. ಈ ರುಚಿಕರ ನೂಡಲ್ಸ್ ಡಿಶ್‌ನೊಂದಿಗೆ, ನೀವು ತರಕಾರಿ ಡ್ರೈ ಚೈನೀಸ್ ಡಿಶ್ ಅಥವಾ ಮಾಂಸಾಹಾರಿ ಗ್ರೇವಿಯನ್ನು ಸವಿಯಬಹುದು.



Click it and Unblock the Notifications
