Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕ್ಯಾಬೇಜ್ ಕಟ್ಲೇಟ್-ಸ್ನ್ಯಾಕ್ಸ್ ರೆಸಿಪಿ
ಮೃದುವಾದ ಬಿಸಿ-ಬಿಸಿ ಕಟ್ಲೇಟ್ ಅನ್ನು ಸವಿಯುವುದೇ ಚೆನ್ನ. ಈಗಾಗಲೇ ನಾನಾ ಬಗೆಯ ಕಟಗಲೇಟ್ ರೆಸಿಪಿ ನೀಡಿದ್ದೇವೆ. ಇಲ್ಲಿ ನಾವು ಕ್ಯಾಬೇಜ್ ಕಟ್ಲೇಟ್ ಮಾಡುವ ವಿಧಾನದ ಬಗ್ಗೆ ಹೇಳಿದ್ದೇವೆ.
ಕ್ಯಾಬೇಜ್ ಕಟ್ಲೇಟ್ ಅನ್ನು ಇತರ ಕಟ್ಲೇಟ್ ಗಳಂತೆ ಸುಲಭದಲ್ಲಿ ತಯಾರಿಸಬಹುದಾಗಿದ್ದು, ಈ ವಾರದ ವಿಶೇಷ ತಿಂಡಿಯಾಗಿ ಇದನ್ನು ಟ್ರೈ ಮಾಡಿ, ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ.

ಬೇಕಾಗುವ ಸಾಮಾಗ್ರಿಗಳು
ಎಲೆಕೋಸು 1 ಕಪ್
ಆಲೂಗಡ್ಡೆ 2(ಬೇಯಿಸಿದ ಆಲೂಗಡ್ಡೆ)
ಹಸಿ ಮೆಣಸಿನಕಾಯಿ 2
ಕರಿ ಬೇವಿನ ಎಲೆ 5-6
ಕೊತ್ತಂಬರಿ ಸೊಪ್ಪು 2 ಚಮಚ
ಚಾಟ್ ಮಸಾಲ 1 ಚ,ಚ
ಮೈದಾ 2 ಚಮಚ
ಬ್ರೆಡ್ ಚುರುಗಳು ಅರ್ಧ ಕಪ್
ಎಣ್ಣೆ 1 ಕಪ್
ರುಚಿಗೆ ತಕ್ಕ ಉಪ್ಪು
ನೀರು ಅರ್ಧ ಕಪ್
ತಯಾರಿಸುವ ವಿಧಾನ:
1. ಚಿಕ್ಕದಾಗಿ ಕತ್ತರಿಸಿದ ಎಲೆಕೋಸು, ಹಸಿ ಮೆಣಸಿನಕಾಯಿ, ಕರಿ ಬೇವಿನ ಎಲೆ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕ ಉಪ್ಪು, ಚಾಟ್ ಮಸಾಲವನ್ನು ಒಂದು ಬಟ್ಟಲಿನಲ್ಲಿ ಹಾಕಿ ಮಿಕ್ಸ್ ಮಾಡಿ.
2. ನಂತರ ಅವುಗಳಿಂದ ಉಂಡೆ ಕಟ್ಟಿ, ಕೈಯಲ್ಲಿ ತಟ್ಟಿ.
3. ಮೈದಾಕ್ಕೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ. (ಮಿಶ್ರಣ ಗಟ್ಟಿಯಾಗಿರಲಿ).
4. ಈಗ ಎಣ್ಣೆಯನ್ನು ಬಾಣಲೆಗೆ ಹಾಕಿ ಕಾಯಿಸಿ, ನಂತರ ಕಾದ ಎಣ್ಣೆಗೆ ತಟ್ಟಿದ ಎಲೆಕೋಸು ಮಿಶ್ರಣವನ್ನು ಮೈದಾದಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ.
ರೆಡಿಯಾದ ಕಟ್ಲೇಟ್ ಅನ್ನು ಪುದೀನಾ ಚಟ್ನಿ ಜೊತೆ ಸವಿಯಲು ರುಚಿಕರವಾಗಿರುತ್ತದೆ.



Click it and Unblock the Notifications
