Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೆಜಿಟೆಬಲ್ ಟಿಕ್ಕಿ ರೆಸಿಪಿ
ಈ ದಿನ ಸ್ಪೆಷಲ್ ಆಗಿ ಮಿಶ್ರ ವೆಜಿಟೆಬಲ್ ಟಿಕ್ಕಿ ಮಾಡಲು ರೆಡಿನಾ? ಇದನ್ನು ಮಾಡಲು ಹೆಚ್ಚು ಸಮಯವೇನು ಬೇಕಾಗಿಲ್ಲ, ಸ್ಪೆಷಲ್ ಪದಾರ್ಥಗಳೂ ಬೇಕಾಗಿಲ್ಲ, ಅಡುಗೆ ಮನೆಯಲ್ಲಿರುವ ತರಕಾರಿಗಳಿಂದಲೇ ಆರೋಗ್ಯಕರವಾದ, ಸ್ವಾದಿಷ್ಟಕರವಾದ ಟಿಕ್ಕಿ ತಯಾರಿಸಬಹುದು.
ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಾಗ್ರಿಗಳು
ಮಿಶ್ರ ತರಕಾರಿ 1 ಕಪ್
ಈರುಳ್ಳಿ 1(ಸಾಧಾರಣ ಗಾತ್ರದ್ದು)
ಹಸಿ ಮೆಣಸಿನಕಾಯಿ 2
ಎಣ್ಣೆ 2 ಚಮಚ
ಖಾರದ ಪುಡಿ ಅರ್ಧ ಚಮಚ
ರೋಸ್ಟ್ ಮಾಡಿದ ಜೀರಿಗೆ ಪುಡಿ ಅರ್ಧ ಚಮಚ
ಗರಂ ಮಸಾಲ ಅರ್ಧ ಚಮಚ
ಚಾಟ್ ಮಸಾಲ 1 ಚಮಚ
ರುಚಿಗೆ ತಕ್ಕ ಉಪ್ಪು
ಆಲೂಗಡ್ಡೆ2 (ಬೇಯಿಸಿ, ಸಿಪ್ಪೆ ಸುಲಿದಿದ್ದು)
ಬ್ರೆಡ್ ಚೂರುಗಳು ಅರ್ಧ ಚಮಚ
ಅಲಂಕಾರಕ್ಕೆ
ಸ್ವಲ್ಪ ಪುದೀನಾ ಮತ್ತು ಕೊತ್ತಂಬರಿ ಸೊಪ್ಪು
ರೌಂಡಾಗಿ ಕತ್ತರಿಸಿದ ಈರುಳ್ಳಿ
1 ಕೆಂಪು ಬಣ್ಣದ ಕ್ಯಾಪ್ಸಿಕಂ(ಚಿಕ್ಕ ಗಾತ್ರದ್ದು)
ಹಳದಿ ಕ್ಯಾಪ್ಸಿಕಂ( ಕ್ಯಾಪ್ಸಿಕಂ ಅನ್ನು ಬೇಕಿದ್ದರೆ ಬಳಸಬಹುದು)
ಮಾಡುವ ವಿಧಾನ:
* ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ಕತ್ತರಿಸಿ.
* ಪ್ಯಾನ್ ಗೆ 2 ಚಮಚ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಉಳಿದ ತರಕಾರಿಗಳನ್ನು ಹಾಕಿ, ಬೇಯಲು ತಕ್ಕ ನೀರು ಹಾಕಿ , ರುಚಿಗೆ ತಕ್ಕ ಉಪ್ಪು, ಖಾರದ ಪುಡಿ, ಗರಂ ಮಸಾಲ, ಜೀರಿಗೆ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ತರಕಾರಿ ಬೆಂದು ಮಿಶ್ರಣ ಸಂಪೂರ್ಣ ಡ್ರೈಯಾದ ನಂತರ ಅದನ್ನು ಗ್ಯಾಸ್ ನಿಂದ ತೆಗೆದು ಒಂದು ಬಟ್ಟಲಿಗೆ ಹಾಕಿ, ಈಗ ಹಸಿ ಮೆಣಸಿನಕಾಯಿಯನ್ನು ಹಾಕಿ, ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ಉಪ್ಪು ಬೇಕಿದ್ದರೆ ಸ್ವಲ್ಪ ಉಪ್ಪು ಸೇರಿಸಿ ನಂತರ ಚಾಟ್ ಮಸಾಲ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಹಾಕಿ ಮಿಕ್ಸ್ ಮಾಡಿ, ಉಂಡೆ ಕಟ್ಟಿ, ಕೈಯಿಂದಲೇ ವೃತ್ತಾಕಾರವಾಗಿ ಅಂಗೈ ಅಗಲದಲ್ಲಿ ತಟ್ಟಿ.
* ಈಗ ತವಾವನ್ನು ಬಿಸಿ ಮಾಡಿ, ಎಣ್ಣೆ ಸವರಿ, ಈಗ ತಟ್ಟಿದ ಮಿಶ್ರಣವನ್ನು ಬ್ರೆಡ್ ಚೂರುಗಳ ಮೇಲೆ ಸವರಿ, ನಂತರ ತವಾದಲ್ಲಿ ಹಾಕಿ 3-4 ನಿಮಿಷ ಬೇಯಿಸಿ. ಅದರ ಎರಡು ಬದಿ ಬೆಂದ ಮೇಲೆ ತೆಗೆದು ಪಾತ್ರೆಗೆ ಹಾಕಿ, ಈ ರೀತಿ ಉಳಿದ ಟಿಕ್ಕಿಗಳನ್ನು ತಯಾರಿಸಿ. ಅದನ್ನು ತಟ್ಟೆಯಲ್ಲಿ ಹಾಕಿ ಈರುಳ್ಳಿ ಮತ್ತು ಬಣ್ಣದ ಕ್ಯಾಪ್ಸಿಕಂನಿಂದ ಅಲಂಕರಿಸಿ.
ಟಿಕ್ಕಿ ಬಿಸಿ-ಬಿಸಿ ಇರುವಾಗಲೇ ಪುದೀನಾ ಚಟ್ನಿ ಅಥವಾ ಟೊಮೆಟೊ ಸಾಸ್ ನೊಂದಿಗೆ ಸವಿಯಿರಿ.



Click it and Unblock the Notifications
