Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೆಜ್ ರೋಲ್: ಮಕ್ಕಳಿಗೆ ಸ್ಪೆಷಲ್ ಸ್ನ್ಯಾಕ್ಸ್
ಶಾಲೆಗೆ ಹೋಗುವ ಮಕ್ಕಳು ಮನೆಯಲ್ಲಿದ್ದರೆ ಸಂಜೆ ಅವರು ಶಾಲೆ ಬಿಟ್ಟು ಬಂದ ತಕ್ಷಣ ಹುಡುಕುವುದು ಅಮ್ಮ ಇವತ್ತು ಏನು ವಿಶೇಷ ತಿಂಡಿ ಮಾಡಿದ್ದಾಳೆ ಎಂದು. ಬೇಕರಿಯಿಂದ ತಂದಿಟ್ಟ ಬಿಸ್ಕೆಟ್, ಬನ್ ಅಂತ ಕೊಡುವ ಬದಲು ನೀವೇ ಮಾಡಿದ ಸ್ಪೆಷಲ್ ಸ್ಯಾಕ್ಸ್ ಕೊಟ್ಟರೆ ಅವರಿಗೆ ತುಂಬಾ ಖುಷಿಯಾಗುವುದು.
ಇಲ್ಲಿ ನಾವು ವೆಜ್ ರೋಲ್ ರೆಸಿಪಿ ನೀಡಿದ್ದೇವೆ. ಇದನ್ನು ಮಾಡುವ ವಿಧಾನ ಸರಳವಾಗಿದೆ, ಮಕ್ಕಳ ಆರೋಗ್ಯಕ್ಕೂ ಒಳ್ಳೆಯದು, ಅವರ ಹೊಟ್ಟೆಯೂ ತುಂಬುವುದು, ಹಾಗಾದರೆ ತಡವೇಕೆ? ಬನ್ನಿ ಈ ಸ್ನ್ಯಾಕ್ಸ್ ಮಾಡೋಣ...
ಬೇಕಾಗುವ ಸಾಮಾಗ್ರಿಗಳು
ಗೋಧಿ ಹಿಟ್ಟು 2 ಕಪ್
ಮೈದಾ ಅರ್ಧ ಕಪ್
ರುಚಿಗೆ ತಕ್ಕ ಉಪ್ಪು
ತರಕಾರಿಗಳು( ಕ್ಯಾರೆಟ್, ಕ್ಯಾಪ್ಸಿಕಂ, ಬೀನ್ಸ್) 1 ಕಪ್
ಈರುಳ್ಳಿ 1
ಚಿಟಿಕೆಯಷ್ಟು ಅರಿಶಿಣ ಪುಡಿ
ಚಾಟ್ ಮಸಾಲ 1 ಚಮಚ
ಎಣ್ಣೆ 1 ಚಮಚ
ನೀರು 1 ಕಪ್
ನಿಂಬೆ ರಸ 1 ಚಮಚ
ತಯಾರಿಸುವ ವಿಧಾನ:
* ಗೋಧಿ, ಮೈದಾವನ್ನು ಮಿಕ್ಸ್ ಮಾಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಕಲೆಸಿ. ಕಲೆಸಿದ ಹಿಟ್ಟು ಮೃದುವಾಗಿರಲಿ.ಹೀಗೆ ಹಿಟ್ಟು ಕಲೆಸುವಾಗ ತರಕಾರಿಗಳನ್ನು ಬೇಯಲು ಇಡಿ.
* ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಬೇಯಿಸಿದ ಎಲ್ಲಾ ತರಕಾರಿಗಳನ್ನು ಹಾಕಿ 2-3 ನಿಮಿಷ ಹುರಿಯಿರಿ.
* ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ, ಚಾಟ್ ಮಸಾಲ, ನಿಂಬೆ ರಸ, ರುಚಿಗೆ ತಕ್ಕ ಉಪ್ಪು ಹಾಕಿ 5 ನಿಮಿಷ ಫ್ರೈ ಮಾಡಿ, ಬೇಕಿದ್ದರೆ ಸ್ವಲ್ಪ ನೀರು ಚಿಮುಕಿಸಿ ಫ್ರೈ ಮಾಡಿ. ನಂತರ ಉರಿಯಿಂದ ಇಳಿಸಿ ಇಡಿ.
* ಈಗ ಕಲೆಸಿದ ಹಿಟ್ಟಿನಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ತಯಾರಿಸಿ ಚಪಾತಿಗೆ ತಟ್ಟುವ ರೀತಿಯಲ್ಲಿ ತಟ್ಟಿ ತವಾಕ್ಕೆ ಹಾಕಿ ಎರಡೂ ಬದಿ ಬೇಯಿಸಿ, ನಂತರ ಚಪಾತಿ ಮಧ್ಯಕ್ಕೆ ಮಸಾಲೆ ಮಿಕ್ಸ್ ಮಾಡಿದ ತರಕಾರಿ ಹಾಕಿ ರೋಲ್ ಮಾಡಿ silver foilನಿಂದ ಸುತ್ತಿದರೆ ವೆಜ್ ರೋಲ್ ರೆಡಿ.



Click it and Unblock the Notifications

