Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ವೆಜ್ ಕಟ್ಲೇಟ್-ಬಲು ಸುಲಭದ ಸ್ನ್ಯಾಕ್ ರೆಸಿಪಿ
ಮೃದುವಾದ ಬಿಸಿ-ಬಿಸಿ ಕಟ್ಲೇಟ್ ಅನ್ನು ಸವಿಯುವುದೇ ಚೆನ್ನ. ಕಟ್ಲೇಟ್ ಅನ್ನು ಸಂಜೆ ತಿಂಡಿಗೆ ಮಾಡಬಹುದು ಅದರಲ್ಲೂ ಹಬ್ಬ, ಹರಿದಿನಗಳಲ್ಲಿ ವಿಶೇಷ ತಿಂಡಿಯಾಗಿಯೂ ಮಾಡಬಹುದು.
ಕಟ್ಲೇಟ್ ಅನ್ನು ವೆಜ್ ಹಾಗೂ ನಾನ್ ವೆಜ್ ನಿಂದ ತಯಾರಿಸಬಹುದು. ವೆಜ್ ನಲ್ಲೂ ನಾನಾ ರುಚಿಯ ಕಟ್ಲೇಟ್ ತಯಾರಿಸಬಹುದು. ಇಲ್ಲಿ ನಾವು ವೆಜ್ ಕಟ್ಲೇಟ್ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು
* ಕ್ಯಾರೆಟ್ 1 ಕಪ್ (ಬೇಯಿಸಿದ್ದು)
* ಆಲೂಗಡ್ಡೆ ಒಂದೋವರೆ ಕಪ್ (ಬೇಯಿಸಿ, ಹಿಸುಕಿದ್ದು)
* ಬಟಾಣಿ 1 ಕಪ್(ಬೇಯಿಸಿದ್ದು)
* ಖಾರದ ಪುಡಿ ಅರ್ಧ ಚಮಚ
* ಈರುಳ್ಳಿ 2-3
* ಹಸಿ ಮೆಣಸಿನಕಾಯಿ 2
* ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ನೆಲ ಕಡಲೆ ಅರ್ಧ ಕಪ್
* ಜೋಳದ ಹಿಟ್ಟು 1-2 ಕಪ್
* ಬಿಸ್ಕೆಟ್ ಪುಡಿ 2 ಕಪ್
* ಎಣ್ಣೆ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
* ಒಂದು ಬಟ್ಟಲಿನಲ್ಲಿ ಕ್ಯಾರೆಟ್, ಆಲೂಗಡ್ಡೆ, ಬಟಾಣಿ ಹಾಕಿ, ನಂತರ ನಿಂಬೆ ರಸ ಸೇರಿಸಿ, ಖಾರದ ಪುಡಿ ಹಾಗೂ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬದಿಯಲ್ಲಿಡಿ.
* ಈಗ ಬಾಣಲಿಯನ್ನು ಉರಿ ಮೇಲೆ ಇಟ್ಟು ಅದರಲ್ಲಿ 7-8 ಚಮಚ ಎಣ್ಣೆ ಸೇರಿಸಿ , ಗ್ಯಾಸ್ ಅನ್ನು ಸಾಧಾರಣ ಉರಿಯಲ್ಲಿಡಿ. ಎಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ, ನಂತರ ನೆಲಗಡಲೆ, ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ನಂತರ ಕಡಿಮೆ ಉರಿಯಲ್ಲಿ 2-3 ನಿಮಿಷ ಉರಿಯಿರಿ.
* ಈಗ ಮಿಶ್ರಣ ಮಾಡಿಟ್ಟ ತರಕಾರಿ ಸೇರಿಸಿ, 2-3 ನಿಮಿಷ ಹುರಿಯಿರಿ. ನಂತರ ಉರಿಯಿಂದ ಇಳಿಸಿ ತಣ್ಣಗಾಗಲು ಇಡಿ.
* ಈಗ ಜೋಳದ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಕಲೆಸಿ (ಮಿಶ್ರಣ ತುಂಬಾ ನೀರು ಆಗದಿರಲಿ).
* ಬಾಣಲಿಯಲ್ಲಿ ಅರ್ಧದಷ್ಟು ಎಣ್ಣೆ ಕಾಯಿಸಿ.
* ತರಕಾರಿ ಮಿಶ್ರಣವನ್ನು ಬಾಲ್ ರೀತಿ ಮಾಡಿ, ಅದನ್ನು ಸ್ವಲ್ಪ ತಟ್ಟಿ, ಬಿಸ್ಕೆಟ್ ಪುಡಿಯಲ್ಲಿ ಹೊರಳಾಡಿಸಿ, ಎಣ್ಣೆಯಲ್ಲಿ ಕರಿಯಿರಿ.
*ಮಿಶ್ರಣ ಸ್ವಲ್ಪ ಕಂದು ಬಣ್ಣ ಬರುವಾಗ ಎಣ್ಣೆಯಿಂದ ತೆಗೆಯಿರಿ. ಇಷ್ಟು ಮಾಡಿದರೆ ರುಚಿಯಾದ ವೆಜ್ ಕಟ್ಲೇಟ್ ರೆಡಿ. ಇದನ್ನು ಸಾಸ್ ಜೊತೆ ತಿನ್ನಲು ರುಚಿಕರವಾಗಿರುತ್ತದೆ.



Click it and Unblock the Notifications
