Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಟೊಮೆಟೊ ಸೇವ್ ಪುರಿ ಚಾಟ್ಸ್ ರುಚಿ ನೋಡಿದ್ದೀರಾ?
ಬೇಲ್ ಪುರಿ, ಪಾನಿ ಪುರಿ, ಸೇವ್ ಪುರಿ ಈ ರೀತಿಯ ಚಾಟ್ಸ್ ಗಳನ್ನು ತಿನ್ನುತ್ತಾ ಇರುತ್ತೇವೆ. ಇದಕ್ಕಿಂತ ಸ್ವಲ್ಪ ಭಿನ್ನವಾದ ಚಾಟ್ಸ್ ಟ್ರೈ ಮಾಡಬೇಕು ಎಂದು ಬಯಸುವುದಾದರೆ ಈ ಟೊಮೆಟೊ ಸೇವ್ ಪುರಿ ಚಾಟ್ಸ್ ಟ್ರೈ ಮಾಡಬಹುದು.
ಈ ಚಾಟ್ಸ್ ಅನ್ನು ಬಲು ಸುಲಭವಾಗಿ ತಯಾರಿಸಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಈರುಳ್ಳಿ 2
* ಕ್ಯಾರೆಟ್ 1
* ಟೊಮೆಟೊ 3-4
* ದುಂಡು ಮೆಣಸಿನ ಕಾಯಿ 1
* ಸೇವ್ ಪುರಿ 7-8
* ಚಾಟ್ ಮಸಾಲ1 ಚಮಚ
* ಜೀರಿಗೆ 1 ಚಮಚ
* ಕೆಂಪು ಮೆಣಸಿನ ಪುಡಿ 1ಚಮಚ
* ಅಮೆಚ್ಯೂರ್ ಅರ್ಧ ಚಮಚ
* ನಿಂಬೆರಸ 1 ಚಮಚ
* ಸೇವ್ 5 ಚಮಚ
* ರುಚಿಗೆ ತಕ್ಕ ಉಪ್ಪು
* ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ:
* ಬಟ್ಟಲಿನಲ್ಲಿ ಈರುಳ್ಳಿ, ಕ್ಯಾರೆಟ್, ದುಂಡು ಮೆಣಸಿನಕಾಯಿ ಇವುಗಳನ್ನು ಮಿಶ್ರಣ ಮಾಡಬೇಕು.
* ನಂತರ ಕೆಂಪು ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು, ಜೀರಿಗೆ, ಅಮೆಚ್ಯೂರ್ ಹಾಗೂ ತರಕಾರಿಗಳನ್ನು ಹಾಕಿ ಮಿಶ್ರ ಮಾಡಬೇಕು.
* ಒಂದು ಟೊಮೆಟೊವನ್ನು 4 ತಂಡುಗಳಂತೆ ಎಲ್ಲಾ ಟೊಮೆಟೊವನ್ನು ಕತ್ತರಿಸಬೇಕು.
* ಈಗ ಸೇವ್ ಪುರಿ ತುಂಡುಗಳನ್ನು ಹಾಗೂ ಸೇವ್ಸ್ ಹಾಕಿ ಕೈಯಿಂದ ಮಿಶ್ರಣ ಮಾಡಬೇಕು. ಅದರ ಮೇಲೆ ಸ್ವಲ್ಪ ಚಾಟ್ ಮಸಾಲ ಹಾಗೂ ಹಾಗೂ ಸೇವ್ ಉದುರಿಸಿ ಮಿಶ್ರಣ ಮಾಡಿ ನಂತರ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬೇಕು. ನಂತರ ಇದನ್ನು ಟೊಮೆಟೊ ತುಂಡಿನ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
