Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ವಿಶ್ವ ಪಾಸ್ತಾ ದಿನಕ್ಕೆ ಸ್ಪೆಷೆಲ್-ಟೊಮೆಟೊ ಪಾಸ್ತಾ
ಇಟಲಿಯ ಅಡುಗೆ ಜಗತ್ತಿನಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ಇಟಲಿಯ ಪಿಜ್ಜಾ, ಪಾಸ್ತಾದಂತಹ ಅಡುಗೆಗಳು ಭಾರತದಲ್ಲಿ ಕೂಡ ಜನಪ್ರಿಯತೆಯನ್ನು ಗಳಿಸಿವೆ. ಅದರಲ್ಲಿ ಪಾಸ್ತಾ ಆರೋಗ್ಯಕ್ಕೆ ಒಳ್ಳೆಯದು ಹಾಗೂ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ಇಂದು(ಅ. 25) ವಿಶ್ವ ಪಾಸ್ತಾ ದಿನ. ಈ ದಿನದ ವಿಶೇಷವಾಗಿ ಪಾಸ್ತಾ ಪ್ರಿಯರಿಗೆ ರುಚಿಕರವಾದ ಟೊಮೆಟೊ ಪಾಸ್ತಾದ ರೆಸಿಪಿ ನೀಡಲಾಗಿದೆ ನೋಡಿ:

ಬೇಕಾಗುವ ಸಾಮಾಗ್ರಿಗಳು:
* ಪಾಸ್ತಾ 1 ಪ್ಯಾಕೆಟ್
* ಬೆಳ್ಳುಳ್ಳಿ 7-8 ಎಸಳು
* ಈರುಳ್ಳಿ 1
* ದುಂಡು ಮೆಣಸಿನ ಕಾಯಿ 1
* ಟೊಮೆಟೊ 2
* ಹಸಿಮೆಣಸಿನ ಕಾಯಿ 2-3 (ಖಾರಕ್ಕೆ ತಕ್ಕಷ್ಟು)
* ಟೊಮೆಟೊ ಪೇಸ್ಟ್ ಅರ್ಧ ಕಪ್
* ಪುದೀನಾ ಪೇಸ್ಟ್ 1 ಚಮಚ
* ಕೆಂಪು ಮೆಣಸಿನ ಪುಡಿ ಅರ್ಧ ಚಮಚ
* ಕರಿಮೆಣಸಿನ ಪುಡಿ 1 ಚಮಚ
* ಸಕ್ಕರೆ 1 ಚಮಚ
* ನೀರು
* ಉಪ್ಪು
* ಎಣ್ಣೆ
ತಯಾರಿಸುವ ವಿಧಾನ:
* ಪಾಸ್ತಾವನ್ನು ತೊಳೆದು ಅದಕ್ಕೆ ನೀರು ಹಾಗೂ ಸ್ವಲ್ಪ ಉಪ್ಪು ಹಾಕಿ ಬೇಯಿಸಿ. ಬೇಯಿಸುವಾಗ 2 ಹನಿ ಎಣ್ಣೆ ಹಾಕಿ ಆಗ ಪಾಸ್ತಾ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಬೆಂದ ಪಾಸ್ತಾದ ನೀರು ಬಸಿದು ಒಂದು ಪಾತ್ರೆಯಲ್ಲಿ ಹಾಕಿಡಿ.
* ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಕಾದ ನಂತರ ಅದಕ್ಕೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾಕಿ ಈರುಳ್ಳಿ ಕಂದು ಬಣ್ಣವವರೆಗೆ ಹುರಿಯಿರಿ. ನಂತರ ದುಂಡು ಮೆಣಸಿನಕಾಯಿ ಹಾಕಿ ಅದು ಬೇಯುವವರೆಗೆ ಹುರಿಯಿರಿ.
* ಈಗ ಹಸಿಮೆಣಸಿನಕಾಯಿ, ರುಚಿಗೆ ತಕ್ಕ ಉಪ್ಪು, ಸಕ್ಕರೆ, ಕರಿಮೆಣಸಿನ ಪುಡಿ ಹಾಗೂ ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಹುರಿಯಬೇಕು. ನಂತರ ಟೊಮೆಟೊ ಪೇಸ್ಟ್ ಹಾಕಿ 2 ನಿಮಿಷ ಕುದಿಸಿ ನಂತರ ಅದಕ್ಕೆ ಸಕ್ಕರೆ ಹಾಗೂ ಪುದೀನಾ ಪೇಸ್ಟ್ ಒಂದು ಚಮಚ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಬೇಕು.
* ಈ ಮಿಶ್ರಣ ಗಟ್ಟಿಯಾದ ಗ್ರೇವಿ ರೀತಿಯಾದ ಮೇಲೆ ಅದಕ್ಕೆ ಬೇಯಿಸಿದ ಪಾಸ್ತಾವನ್ನು ಹಾಕಿ 2 ನಿಮಿಷ ಸೌಟ್ ನಿಂದ ತಿರುಗಿಸುತ್ತಾ ಬಿಸಿ ಮಾಡಿ ಉರಿಯಿಂದ ಇಳಿಸಿದರೆ ರುಚಿಕರವಾದ ಟೊಮೆಟೊ ಪಾಸ್ತಾ ರೆಡಿ.



Click it and Unblock the Notifications
