Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಬಾಯಲ್ಲಿ ಇಟ್ಟರೆ ಕರಗುವಂತೆ ಇರಬೇಕು-ಮಂಡಕ್ಕಿ

ಬೇಕಾಗುವ ಸಾಮಗ್ರಿಗಳು:
* ಕಡಲೆ ಪುರಿ - 1 ದೊಡ್ಡ ಬಟ್ಟಲು
* ಶೇಂಗಾ (ಹುರಿಗಡಲೆ) - 1/ 2 ಕಪ್
* ಸಾಸಿವೆ - 1 / 2 ಚಮಚ
* ಪುಡಿ ಉಪ್ಪು - ರುಚಿಗೆ ತಕ್ಕಷ್ಟು
* ಆಮ್ ಚೂರ್ ಪುಡಿ - ಒಂದು ದೊಡ್ಡ ಚಿಟಿಕೆ
* ಸಕ್ಕರೆ ಪುಡಿ - 1 / 2 ಚಮಚ
* ಜಜ್ಜಿದ ಬೆಳ್ಳುಳ್ಳಿ - 1 ಚಮಚ ಅಥವಾ ಇಂಗು
* ಹಸಿಮೆಣಸಿನ ಕಾಯಿ 2 (ಚಿಕ್ಕದಾಗಿ ಕತ್ತರಿಸಿರಬೇಕು)
* ಅರಿಶಿಣ - 1 / 4 ಚಮಚ
* ಮೆಣಸಿನಪುಡಿ - 1 / 2 ಚಮಚ (ಖಾರಕ್ಕೆ ತಕ್ಕಂತೆ)
* ಎಣ್ಣೆ - 4 ರಿಂದ 5 ಚಮಚ
* ಸ್ವಲ್ಪ ಕರಿಬೇವು
ಮಾಡುವ ವಿಧಾನ:
1. ಮೊದಲು ಮಂಡಕ್ಕಿಯನ್ನು ಕಾದ ಬಾಣಲೆಯಲ್ಲಿ ಹಾಕಿ 5 ನಿಮಿಷ ಸಣ್ಣ ಬೆಂಕಿಯಲ್ಲಿ ಹುರಿದು ಗರಿಗರಿಯಾಗಿ ಮಾಡಿ ತೆಗೆದಿಟ್ಟುಕೊಳ್ಳಬೇಕು.
2. ನಂತರ ಅದೇ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಶೇಂಗಾ, ಸಾಸಿವೆ, ಹಸಿಮೆಣಸಿನ ಕಾಯಿ ಹಾಕಿ ಎಲ್ಲವನ್ನೂ ಚೆನ್ನಾಗಿ ಹುರಿಯಬೇಕು. ನಂತರ ಇದಕ್ಕೆ ಮೆಣಸಿನಪುಡಿ, ಅರಿಶಿಣ, ಕರಿಬೇವು ಹಾಕಿ, ಜಜ್ಜಿಕೊಂಡ ಬೆಳ್ಳುಳ್ಳಿಯನ್ನು ಸೇರಿಸಿ. ಬೆಳ್ಳುಳ್ಳಿ ಚೆನ್ನಾಗಿ ಹುರಿದ ನಂತರ ಉರಿಯಿಂದ ತೆಗೆಯಬೇಕು.
3. ಈ ಮಿಶ್ರಣಕ್ಕೆ ಉಪ್ಪು, ಸಕ್ಕರೆ, ಆಮ್ ಚೂರ್ ಪುಡಿ ಸೇರಿಸಿ ಕಲೆಸಿಕೊಂಡು, ನಂತರ ಹುರಿದಿಟ್ಟ ಮಂಡಕ್ಕಿ ಸೇರಿಸಿ ಚೆನ್ನಾಗಿ ಕೈಯಿಂದ ಕಲೆಸಬೇಕು.
4. ಕಲೆಸಿದ ನಂತರ ಉಪ್ಪು ಅಥವಾ ಸಕ್ಕರೆ ಬೇಕಿದ್ದರೆ ಸೇರಿಸಿ. ಈಗ ತಯಾರಾದ ಮಂಡಕ್ಕಿಯ ರುಚಿ ಸವಿಯಿರಿ.
ಸಲಹೆ: ಇದಕ್ಕೆ ತಿನ್ನುವಾಗ ಟೊಮೆಟೊ ಕತ್ತರಿಸಿ ಹಾಕಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಮಿಶ್ರ ಮಾಡಿ ತಿನ್ನಬಹುದು.



Click it and Unblock the Notifications
