Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಗರಿಗರಿ ಮರಗೆಣಸಿನ ಚಿಪ್ಸ್ ಮಾಡಲು ಟಿಪ್ಸ್!

ಅದೇ ಸ್ವಲ್ಪ ಸಮಯ ಮತ್ತು 100-150 ರೂಪಾಯಿ ಖರ್ಚು ಮಾಡಿದರೆ ಅಂಗಡಿಯಲ್ಲಿ 1000 ರೂಪಾಯಿ ಕೊಟ್ಟರೆ ಸಿಗುವಷ್ಟು ಚಿಪ್ಸ್ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಈ ಚಿಪ್ಸ್ ಅನ್ನು ಅಡುಗೆ ಬಗ್ಗೆ ಏನೂ ಗೊತ್ತಿಲ್ಲದವರು ಕೂಡ ತಯಾರಿಸಬಹುದಾಗಿದ್ದು ತಯಾರಿಸುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* ಮರಗೆಣಸು 1 ಕೆಜಿ
* ಚಿಪ್ಸ್ ಮಸಾಲಾ ಪುಡಿ ಒಂದು ಪ್ಯಾಕೆಟ್ ಅಥವಾ ಅರಿಶಿಣ ಪುಡಿ 1/ 2 ಚಮಚ, ಮೆಣಸಿನ ಪುಡಿ ಒಂದೂವರೆ ಚಮಚ
* ಕರಿಯಲು ಎಣ್ಣೆ
ತಯಾರಿಸುವ ವಿಧಾನ :
1. ಗೆಣಸಿನ ಸಿಪ್ಪೆ ತೆಗೆದು ಅದನ್ನು ಚೆನ್ನಾಗಿ ತೊಳೆದು ತೆಳ್ಳನೆಯ ಚಿಕ್ಕ -ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು.
2. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಮಸಾಲಾ ಪುಡಿ ಸೇರಿಸಿ ಮಿಶ್ರ ಮಾಡಬೇಕು (ಚಿಪ್ಸ್ ಮಸಾಲಕ್ಕೆ ಉಪ್ಪು ಸೇರಿಸಬೇಕಾಗಿಲ್ಲ). ಚಿಪ್ಸ್ ಮಸಾಲ ಇಲ್ಲದಿದ್ದರೆ ರುಚಿಗೆ ತಕ್ಕ ಉಪ್ಪು, ಕೆಂಪು ಮೆಣಸಿನ ಪುಡಿ ಮತ್ತು ಅರಿಶಿಣ ಹಾಕಿ ಮಿಶ್ರ ಮಾಡಿ ಒಂದು ಗಂಟೆ ಕಾಲ ಇಡಬೇಕು.
3. ನಂತರ ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಗೆಣಸಿನ ತೆಳುವಾದ ತುಂಡುಗಳನ್ನು ಕಂದು ಬಣ್ಣ ಬರುವವರೆಗೆಗೆ ಕರಿಯಿರಿ.
4. ಕರಿದ ಚಿಪ್ಸ್ ನ್ನು ಒಂದು ಒಂದು ಪೇಪರ್ ಮೇಲೆ ಹರವಿ ತಣ್ಣಗಾಗಲು ಬಿಡಬೇಕು.
ಈ ರೀತಿ ಕರಿದ ಚಿಪ್ಸ್ ಅನ್ನು ಗಾಳಿ ಸೇರದ ಡಬ್ಬದಲ್ಲಿ ಹಾಕಿಟ್ಟರೆ ತುಂಬಾ ಕಾಲ ಇಡಬಹುದಾಗಿದ್ದು, ಇದನ್ನು ಟೀ ಜೊತೆ ತಿನ್ನಲು ರುಚಿಕರವಾಗಿರುತ್ತದೆ.



Click it and Unblock the Notifications
