Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪಾಸ್ತಾ ಬ್ರೊಕೋಲಿ ರೆಸಿಪಿ
ಪಾಸ್ತಾವನ್ನು ಅನೇಕ ರುಚಿಯಲ್ಲಿ ಸ್ವಾದಿಷ್ಟಕರವಾಗಿ ತಯಾರಿಸಬಹುದು. ಒಂದು ವೇಳೆ ನೀವು ಪಾಸ್ತಾ ಪ್ರಿಯರಾಗಿದ್ದರೆ ಈ ಬ್ರೊಕೋಲಿ ಪಾಸ್ತಾ ಟ್ರೈ ಮಾಡಬಹುದು.
ಈ ಪಾಸ್ತಾವನ್ನು ತಯಾರಿಸುವ ವಿಧಾನ ಸರಳವಾಗಿದ್ದು, ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
ಪಾಸ್ತಾ 1 ಕಪ್
ಬ್ರೊಕೋಲಿ 1
ಬೆಳ್ಳುಳ್ಳಿ 4-5 ಎಸಳು
ಕೆಂಪು ಮೆಣಸಿನ ಬೀಜ ಅರ್ಧ ಚಮಚ
ಸ್ವಲ್ಪ ದೊಡ್ಡ ಪತ್ರೆ
ಸ್ವಲ್ಪ ಕರಿ ಮೆಣಸಿನ ಪುಡಿ
ಚೀಸ್ ಚಮಚ
ಆಲೀವ್ ಎಣ್ಣೆ 1 ಚಮಚ ಮತ್ತು ಸ್ವಲ್ಪ ಪಿಸ್ತಾ
ತಯಾರಿಸುವ ವಿಧಾನ:
* ಪಾಸ್ತಾ ಮುಳುಗುವಷ್ಟು ನೀರು ಹಾಕಿ ಬೇಯಿಸಬೇಕು. ಪಾಸ್ತಾ ಬೇಯುವಾಗ ಸ್ವಲ್ಪ ಉಪ್ಪು 1/4 ಚಮಚ ಎಣ್ಣೆ ಬೇಯಿಸಿ. ಪಾಸ್ತಾವನ್ನು ತುಂಬಾ ಮೃದುವಾಗುವವರೆಗೆ ಬೇಯಿಸಬೇಡಿ.
* ಬ್ರೊಕೋಲಿಯನ್ನು ಚಿಕ್ಕದಾಗಿ ಕತ್ತರಿಸಿ, ಬಿಸಿ ನೀರಿನಲ್ಲಿ 5 ನಿಮಿಷ ಹಾಕಿ ನಂತರ ಅದರ ನೀರನ್ನು ಬಸಿಯಿರಿ.
* ಈಗ ನೀರನ್ನು ಕುದಿಸಿ, ಅದರಲ್ಲಿ ಬ್ರೊಕೋಲಿ ಹಾಕಿ ಮೆತ್ತಗಾಗುವವರೆಗೆ ಬೇಯಿಸಿ.
* ಪಿಸ್ತಾವನ್ನು ರೋಸ್ಟ್ ಮಾಡಿ ಗ್ರೈಂಡ್ ಮಾಡಿ.
* ಈಗ ಬಾಣಲೆಗೆ ಎಣ್ಣೆ ಹಾಕಿ ಅದರಲ್ಲಿ ಬೆಳ್ಳುಳ್ಳಿ, ಒಣ ಮೆಣಸಿನ ಬೀಜ ಹಾಕಿ ಫ್ರೈ ಮಾಡಿ. ನಂತರ ಬ್ರೊಕೋಲಿ ಹಾಕಿ, ಕರಿ ಮೆಣಸಿನ ಪುಡಿ ಹಾಕಿ 5 ನಿಮಿಷ ಫ್ರೈ ಮಾಡಿ.
* ನಂತರ ಬೇಯಿಸಿದ ಪಾಸ್ತಾ ಹಾಕಿ ಅದರ ಜೊತೆ ದೊಡ್ಡ ಪತ್ರೆ, ಬ್ರೊಕೋಲಿ ಬೇಯಿಸಿದ ಸ್ವಲ್ಪ ನೀರು ಹಾಕಿ ಚೆನ್ನಾಗಿ ತಿರುಗಿಸಿ, ಬೇಕಿದ್ದರೆ ಸ್ವಲ್ಪ ಉಪ್ಪು ಸೇರಿಸಿ. ನಂತರ ಪಾಸ್ತಾ ಪುಡಿ, ಚೀಸ್, ಹಾಕಿ ಒಮ್ಮೆ ತಿರುಗಿಸಿ, ಉರಿಯಿಂದ ಪಾತ್ರೆಯನ್ನು ಇಳಿಸಿದರೆ ಬ್ರೊಕೋಲಿ ಪಾಸ್ತಾ ರೆಡಿ.



Click it and Unblock the Notifications
