Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಸುಲಭವಾಗಿ ತಯಾರಿಸಬಹುದು ಪನ್ನೀರ್ ರೋಲ್
ಪನ್ನೀರ್ ಅನ್ನು ಸಾಮಾನ್ಯವಾಗಿ ಎಲ್ಲಾ ಬಗೆಯ ಖಾದ್ಯಗಳಲ್ಲಿ ಬಳಸಬಹುದು. ಇದರಿಂದ ಸ್ಟಾಟರ್ಸ್ ತಯಾರಿಸಬಹುದು, ತಿಂಡಿ, ಗ್ರೇವಿ, ದೋಸೆ, ಪರೋಟ ಹೀಗೆ ಅನೇಕ ಬಗೆಯ ರುಚಿಕರವಾದ ಖಾದ್ಯಗಳನ್ನು ತಯಾರಿಸಬಹುದು. ಪನ್ನೀರ್ ನಲ್ಲಿ ಕ್ಯಾಲ್ಸಿಯಂ ಅಂಶ ಇರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಇವತ್ತು ಪನ್ನೀರ್ ಬಳಸಿ ಬಾಯಲ್ಲಿ ನೀರೂರಿಸುವಂತಹ ಪರೋಟ ಮಾಡುವ ವಿಧಾನದ ಬಗ್ಗೆ ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು:
ಮಸಾಲೆಗೆ:
* ಪುಡಿ ಮಾಡಿದ ಪನ್ನೀರ್ ಒಂದು ಕಪ್
* ಕತ್ತರಿಸಿದ ಈರುಳ್ಳಿ 1
* ಕತ್ತರಿಸಿದ ದುಂಡು ಮೆಣಸಿನ ಕಾಯಿ 1
* ಕತ್ತರಿಸಿದ ಹಸಿ ಮೆಣಸಿನ ಕಾಯಿ 3 ಅಥವಾ ಖಾರಕ್ಕೆ ತಕ್ಕಷ್ಟು
* ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಅರಿಶಿಣ ಪುಡಿ 1/4 ಚಮಚ
ಗರಂ ಮಸಾಲ ಅರ್ಧ ಚಮಚ
* ಜೀರಿಗೆ 1 ಚಮಚ
* ಎಣ್ಣೆ 2 ಚಮಚ
* ರುಚಿಗೆ ತಕ್ಕ ಉಪ್ಪು
ಪರೋಟಕ್ಕೆ ಬೇಕಾಗುವ ಸಾಮಾಗ್ರಿಗಳು:
* ಮೈದಾ 2 ಕಪ್
* ನೀರು
* ರುಚಿಗೆ ತಕ್ಕ ಉಪ್ಪು
* 1 ಚಮಚ ತುಪ್ಪ
ತಯಾರಿಸುವ ವಿಧಾನ:
1. ಮೈದಾ ಹಿಟ್ಟನ್ನು ಪರೋಟಕ್ಕೆ ಕಲೆಸಬೇಕು. ಹೀಗೆ ಕಲೆಸುವಾಗ ಒಂದು ಚಮಚ ತುಪ್ಪ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕಲೆಸಬೇಕು. ನಂತರ ಆ ಹಿಟ್ಟನ್ನು ಬದಿಯಲ್ಲಿ ತೆಗೆದಿಡಬೇಕು.
2. ಈಗ ಪಾತ್ರೆಯನ್ನು ಬಿಸಿಮಾಡಿ, ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಕತ್ತರಿಸಿದ ಈರುಳ್ಳಿ ಮತ್ತು ದುಂಡು ಮೆಣಸಿನ ಕಾಯಿ, ಹಸಿಮೆಣಸಿನ ಕಾಯಿ ಹಾಕಿ, ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಬೇಕು.
3. ನಂತರ ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ, ಗರಂ ಮಸಾಲ, ಪುಡಿ ಮಾಡಿದ ಜೀರಿಗೆ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನಂತರ ಪನ್ನೀರ್ ಹಾಕಿ ಪನ್ನೀರ್ ಬುರ್ಜಿ ರೀತಿ ಮಾಡಿ ಒಂದು ಪಾತ್ರೆಯಲ್ಲಿ ಹಾಕಬೇಕು.
4. ಈಗ ಕಲೆಸಿದ ಹಿಟ್ಟಿನಿಂದ ತೆಳುವಾಗ ಪರೋಟಕ್ಕೆ ತಟ್ಟಿ ತವಾ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ ಪರೋಟವನ್ನು ಅದರಲ್ಲಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಬೇಯಿಸಬೇಕು.
5. ಪರೋಟ ರೆಡಿಯಾದ ಮೇಲೆ ಅದನ್ನು ಸುರುಳಿಯಾಕಾರದಲ್ಲಿ ಹಾಕಿ, ಅದರಲ್ಲಿ ಪನ್ನೀರ್ ಬುರ್ಜಿ ಹಾಕಿ ಅದರಲ್ಲಿ ಟೊಮೆಟೊ ಸಾಸ್ ಹಾಕಿ ತವಾದಲ್ಲಿ ಹಾಕಿ ರೋಸ್ಟ್ ಮಾಡಬೇಕು. ರೋಸ್ಟ್ ಆಗಿ ಕಂದು ಬಣ್ಣಕ್ಕೆ ಬರುವಾಗ ಸ್ವಲ್ಪ ಎಣ್ಣೆ ಹಾಕಬೇಕು. ನಂತರ ಇದನ್ನು ತವಾದಿಂದ ತೆಗೆದು ಬಿಸಿಯಾಗಿರುವಾಗಲೇ ತಿನ್ನಲು ಕೊಡಬೇಕು. ಮಳೆಗಾಲದಲ್ಲಿ ತಿನ್ನಲು ಬೆಸ್ಟ್ ತಿಂಡಿಯಾಗಿದೆ.



Click it and Unblock the Notifications
