Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬರೀ ಮ್ಯಾಗಿಗಿಂತ ಪನ್ನೀರ್ ಮ್ಯಾಗಿಯ ರುಚಿ ಚೆನ್ನ!
ಮ್ಯಾಗಿ ತಂದು ಅದನ್ನು ನೀರಿನಲ್ಲಿ ಹಾಕಿ ಬೇಯಿಸಿ ತಿನ್ನುವ ಬದಲು ಅದಕ್ಕೆ ಸ್ವಲ್ಪ ಸಾಮಾಗ್ರಿಗಳನ್ನು ಸೇರಿಸಿದರೆ ತುಂಬಾ ರುಚಿಕರವಾಗಿರುತ್ತದೆ. ಅದರಲ್ಲೂ ಮ್ಯಾಗಿ ಜೊತೆ ಪನ್ನೀರ್ ಹಾಕಿ ತಯಾರಿಸಿ ತಿಂದರೆ ತುಂಬಾ ರುಚಿಕರವಾಗಿರುತ್ತದೆ.
ಇದನ್ನು ಬಲು ಸುಲಭವಾಗಿ ತಯಾರಿಸಬಹುದಾಗಿದ್ದು ಪನ್ನೀರ್ ಮ್ಯಾಗಿಯ ರೆಸಿಪಿ ನೀಡಲಾಗಿದೆ ನೋಡಿ:

ಬೇಕಾಗುವ ಸಾಮಗ್ರಿಗಳು:
ಮ್ಯಾಗಿ ಪ್ಯಾಕೆಟ್ 2
ಈರುಳ್ಳಿ 2
ದುಂಡು ಮೆಣಸಿನ ಕಾಯಿ 1 (ಕತ್ತರಿಸಿದ್ದು)
ಟೊಮೆಟೊ 1 (ಕತ್ತರಿಸಿದ್ದು)
ಕ್ಯಾರೆಟ್ 1(ಕತ್ತರಿಸಿದ್ದು)
ಸ್ವಲ್ಪ ಪನ್ನೀರ್
ಹಸಿಮೆಣಸಿನಕಾಯಿ 2 (ಕತ್ತರಿಸಿದ್ದು)
ಬೆಳ್ಳುಳ್ಳಿ ಎಸಳು 3-4
ಜೀರಿಗೆ ಅರ್ಧ ಚಮಚ
ಪುದೀನಾ ಪುಡಿ 1 ಚಮಚ
ಎಣ್ಣೆ 2 ಚಮಚ
ನೀರು 2 ಕಪ್
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ ನಂತರ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಹುರಿಯಬೇಕು, ನಂತರ ದುಂಡು ಮೆಣಸಿನ ಕಾಯಿ ಹಾಗೂ ಕ್ಯಾರೆಟ್ ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು, ಈಗ ಹಸಿ ಮೆಣಸಿನಕಾಯಿ ಹಾಗೂ ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಹುರಿಯಬೇಕು. ನಂತರ ಪನ್ನೀರ್ ಹಾಕಿ ಸ್ವಲ್ಪ ಹೊತ್ತು ಹುರಿದು ನಂತರ ಎರಡು ಕಪ್ ನೀರು ಹಾಕಬೇಕು.
2. ನೀರು ಕುದಿ ಬರುವಾಗ ಅದಕ್ಕೆ ಮ್ಯಾಗಿಯ ಮಸಾಲೆ ಪುಡಿ ಹಾಗೂ ಪುದೀನಾ ಪುಡಿ ಹಾಕಿ ಚಿಟಿಕೆಯಷ್ಟು ಉಪ್ಪು ಹಾಕಿ ನೀರು ಕುದಿ ಬಂದ ಮೇಲೆ ಮ್ಯಾಗಿ ಹಾಕಿ ಬೇಯಿಸಿ ಉರಿಯಿಂದ ತೆಗೆದು ಬಿಸಿ-ಬಿಸಿ ಇರುವಾಗ ತಿಂದರೆ ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
