Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಟೀ ಜೊತೆ ಸವಿಯಲು ಈರುಳ್ಳಿ ಸಮೋಸ

ಬೇಕಾಗುವ ಸಾಮಾಗ್ರಿಗಳು:
ಮೈದಾ 1 ಕಪ್
ಒಂದು ಚಮಚ ಬಿಸಿ ಎಣ್ಣೆ
ಈರುಳ್ಳಿ 4 (ಕತ್ತರಿಸಿದ್ದು)
ಅರಿಶಿಣ ಪುಡಿ 1/4 ಚಮಚ
ಕೊತ್ತಂಬರಿ ಪುಡಿ 1/4 ಚಮಚ
ಗರಂ ಮಸಾಲ 1 ಚಮಚ
ಕೆಂಪು ಮೆಣಸಿನ ಪುಡಿ 1 ಚಮಚ
ಜೀರಿಗೆ ಪುಡಿ 1 ಚಮಚ
ಸಕ್ಕರೆ 3 ಚಮಚ
ನಿಂಬೆ ರಸ 3 ಚಮಚ
ಚಿಟಿಕೆಯಷ್ಟು ಇಂಗು
ರುಚಿಗೆ ತಕ್ಕ ಉಪ್ಪು
ಎಣ್ಣೆ
ತಯಾರಿಸುವ ವಿಧಾನ:
1. ಮೈದಾ, ರುಚಿಗೆ ತಕ್ಕ ಉಪ್ಪು, ಒಂದು ಚಮಚ ಬಿಸಿ ಎಣ್ಣೆಯನ್ನು ಹಾಕಿ ಮಿಶ್ರ ಮಾಡಿ ಚೆನ್ನಾಗಿ ಕಲೆಸಬೇಕು.
2. ಈಗ ಬಾಣಲೆಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ಹುರಿಯಬೇಕು. ನಂತರ ಈರುಳ್ಳಿಗೆ ಅರಿಶಿಣ ಪುಡಿ, ಗರಂ ಮಸಾಲ, ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಚಿಟಿಕೆಯಷ್ಟು ಇಂಗು, ಸಕ್ಕರೆ, ನಿಂಬೆ ರಸ ಹಾಕಿ ಮಿಶ್ರ ಮಾಡಿ ಉರಿಯಿಂದ ಪಾತ್ರೆಯನ್ನು ತೆಗೆಯಬೇಕು.
3. ನಂತರ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಬೇಕು.
4. ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಕಾಯಲು ಇಡಬೇಕು.
5. ಉಂಡೆಯನ್ನು ವೃತ್ತಾಕಾರವಾಗಿ ಒತ್ತಿಕೊಂಡು ಚಾಕುವಿನ ಸಹಾಯದಿಂದ ಅರ್ಧ ಕತ್ತರಿಸಬೇಕು.
6. ಅರ್ಧ ಭಾಗಕ್ಕೆ ಹುರಿದ ಈರುಳ್ಳಿ ಮಿಶ್ರಣ ತುಂಬಿ ಇನ್ನರ್ಧ ಭಾಗವನ್ನು ಸುರುಳಿ ಸುತ್ತಿ ತ್ರಿಕೋನಾಕಾರವಾಗಿ ಮಾಡಿ ಎಣ್ಣೆಗೆ ಬಿಡಬೇಕು.
ಎಣ್ಣೆಯಲ್ಲಿ ಸಮೋಸ ಕೆಂಪಗಾಗುವವರೆಗೂ ಕರಿದು ಆಮೇಲೆ ಪೇಪರ್ ಮೇಲೆ ಎಣ್ಣೆ ಹೀರಿಕೊಳ್ಳಲು ಬಿಡಬೇಕು. ಈ ರೀತಿ ಮಾಡಿದರೆ ಈರುಳ್ಳಿ ಸಮೋಸಾ ಸಾಯಾಂಕಾಲದ ಟೀ ಜೊತೆ ಸವಿಯಲು ರೆಡಿ.



Click it and Unblock the Notifications
