Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಟ್ಸ್ ಕುಕ್ಕೀಸ್ - ವಿಶ್ವ ನಟ್ಸ್ ದಿನದ ಸ್ಪೆಷೆಲ್
ನಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೊಡ್ಡವರು ನಟ್ಸ್ ಅನ್ನು ಪ್ರತಿದಿನ ತಿನ್ನುವುದರಿಂದ ಹೃದಯ ಸ್ವಾಸ್ಥ್ಯವನ್ನು ಕಾಪಾಡಬಹುದು. ಆದರೆ ತುಂಬಾ ಚಿಕ್ಕ ಮಕ್ಕಳಿಗೆ ನಟ್ಸ್ ಕೊಡಬೇಡಿ, ಅಲರ್ಜಿ ಉಂಟಾಗಬಹುದು.
ನಿಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದರೆ ಅವರಿಗೆ ಸ್ನ್ಯಾಕ್ಸ್ ಬಾಕ್ಸ್ ಗೆ ನಟ್ಸ್ ಕುಕ್ಕೀಸ್ ಅನ್ನು ಬೇಕರಿಯಿಂದ ಕೊಳ್ಳುವ ಬದಲು ಮನೆಯಲ್ಲಿಯೇ ಮಾಡಿ. ಈ ನಟ್ಸ್ ಕುಕ್ಕೀಸ್ ಅನ್ನು ಸುಲಭವಾಗಿ ಮಾಡಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಗೋಧಿ ಹಿಟ್ಟು 2 ಕಪ್
* ಸಕ್ಕರೆ ಒಂದೂವರೆ ಕಪ್
* ಮೊಟ್ಟೆ 3
* ಒಣದ್ರಾಕ್ಷಿ 2 ಚಮಚ
* ಗೋಡಂಬಿ ಅರ್ಧ ಕಪ್
* ಅಡುಗೆ ಸೋಡಾ ಅರ್ಧ ಚಮಚ
* ವೆನಿಲ್ಲಾ ಎಸ್ಸೆನ್ಸ್
* ಎಣ್ಣೆ 1 ಕಪ್
ತಯಾರಿಸುವ ವಿಧಾನ:
1. ಓವನ್ ಅನ್ನು 350F ಉಷ್ಣತೆಯಲ್ಲಿ ಬಿಸಿ ಮಾಡಿರಬೇಕು.
2. ಈಗ ಒಂದು ಬಟ್ಟಲಿನಲ್ಲಿ ಸಕ್ಕರೆ, ಅಡುಗೆ ಸೋಡಾ, ನಟ್ಸ್, ಒಣ ದ್ರಾಕ್ಷಿ ಇವುಗಳನ್ನು ಗೋಧಿ ಹಿಟ್ಟಿನ ಜೊತೆ ಹಾಕಿ ಮಿಶ್ರಣ ಮಾಡಬೇಕು.
3. ಮತ್ತೊಂದು ಬಟ್ಟಲಿನಲ್ಲಿ ಮೊಟ್ಟೆಯನ್ನು ಒಡೆದು ಚೆನ್ನಾಗಿ ಕಲೆಸಬೇಕು, ಅದಕ್ಕೆ ಎಣ್ಣೆ, ಸಕ್ಕರೆ ಹಾಗೂ ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಕಲೆಸಿ ಅದನ್ನು ಗೋಧಿ ಹಿಟ್ಟಿನ ಜೊತೆ ಹಾಕಿ ಚೆನ್ನಾಗಿ ಕಲೆಸಬೇಕು. ನಂತರ ಅದನ್ನು ಕುಕ್ಕೀಸ್ ಶೀಟ್ ನಲ್ಲಿಟ್ಟು ಬೇಯಿಸಿದರೆ ನಟ್ಸ್ ಕುಕ್ಕೀಸ್ ರೆಡಿ. ಅದನ್ನು ಕುಕ್ಕೀಸ್ ಸೀಟ್ ನಿಂದ ತೆಗೆದು ಕಟ್ ಮಾಡಿದರೆ ಆರೋಗ್ಯಕರವಾದ ಹಾಗೂ ಸವೆಯಲು ರುಚಿಕರವಾದ ನಟ್ಸ್ ಕುಕ್ಕೀಸ್ ರೆಡಿ.



Click it and Unblock the Notifications
