Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಬಾಯಿಯಲ್ಲಿ ನೀರೂರಿಸುವ ಬ್ರೆಡ್ ಒಗ್ಗರಣೆ ರೆಸಿಪಿ
ಸಂಜೆಯ ಸಮಯದಲ್ಲಿ ಚಹಾ ಅಥವಾ ಕಾಫಿಯೊಂದಿಗೆ ಕುರುಕಲು ಮೆಲ್ಲವುದು ಸರ್ವೇ ಸಾಮಾನ್ಯ. ಆರೋಗ್ಯಕರ ಕುರುಕಲು ತಿಂಡಿಗಳು ಆರೋಗ್ಯಕ್ಕೆ ಸಂಚಕಾರ ಉಂಟು ಮಾಡುವುದಿಲ್ಲ ಮತ್ತು ನಮ್ಮ ತೂಕ ಕೂಡ ಇದರಿಂದ ನಿಯಂತ್ರಣದಲ್ಲಿರುತ್ತದೆ. ಅಂಗಡಿಯ ಎಣ್ಣೆ ಕುರುಕಲುಗಿಂತ ಮನೆಯಲ್ಲೇ ತಯಾರಿಸಬಹುದಾದ ತಿಂಡಿಯನ್ನು ಸವಿಯುವ ಸುಖವೇ ಬೇರೆ.
ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ನೀಡಿರುವ ಅತಿ ಸರಳ ಮತ್ತು ರುಚಿಕರ ಬ್ರೆಡ್ ಒಗ್ಗರಣೆ ಕಡೆಗೆ ನಿಮ್ಮ ಒಲವು ಹರಿಯಲಿ. ಹೌದು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಸ್ವಾದಿಷ್ಟ ಕುರುಕಲು ಅಸಾಮಾನ್ಯ ರುಚಿಯ ರಸಗವಳವನ್ನು ನೀಡುತ್ತದೆ. ಅತಿ ಸುಲಭವಾಗಿ ತಯಾರಿಸಬಹುದಾದ ಈ ಬ್ರೆಡ್ ಒಗ್ಗರಣೆ ರೆಸಿಪಿ ನಿಮ್ಮ ಆರೋಗ್ಯಕ್ಕೂ ಅತ್ಯುತ್ತಮವಾಗಿದೆ.
ಬರಿಯ ಬ್ರೆಡ್ ಮಾತ್ರವಲ್ಲದೆ ತರಕಾರಿಯನ್ನು ಸೇರಿಸಿ ತಯಾರಿಸುವ ಈ ಒಗ್ಗರಣೆ ಖಾದ್ಯ ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುವುದು ಸತ್ಯ. ಹಾಗಿದ್ದರೆ ತಡ ಮಾಡದೇ ಇಲ್ಲಿ ನಾವು ನೀಡಿರುವ ಸರಳ ಬ್ರೆಡ್ ಒಗ್ಗರಣೆ ರೆಸಿಪಿಯತ್ತ ಕಣ್ಣು ಹಾಯಿಸಿ ಮತ್ತು ದಿನವನ್ನು ರಸಮಯಗೊಳಿಸಿ.
ಬಾಯಿ ರುಚಿ ಹೆಚ್ಚಿಸುವ ಖಾರದ ಮೆಣಸಿನ ಪಕೋಡಾ ರೆಸಿಪಿ

ಪ್ರಮಾಣ: 4
*ಸಿದ್ಧತಾ ಸಮಯ: 1/2 ಗಂಟೆ
*ಅಡುಗೆಗೆ ಬೇಕಾದ ಸಮಯ: 1 ಗಂಟೆ
ಸಾಮಾಗ್ರಿಗಳು
*ಈರುಳ್ಳಿ - 2 ಸಣ್ಣದಾಗಿ ಕತ್ತರಿಸಿದ್ದು
*ಟೊಮೇಟೊ - 2 ಸಣ್ಣದಾಗಿ ಹೆಚ್ಚಿದ್ದು
*ಹಸಿಮೆಣಸು - 1 ಉದ್ದಕ್ಕೆ ಸೀಳಿದ್ದು
*ಕ್ಯಾರೇಟ್ - 1
*ಬೀನ್ಸ್ - ಮುಷ್ಟಿಯಷ್ಟು
*ಆಲೂಗಡ್ಡೆ - 1
*ಕ್ಯಾಪ್ಸಿಕಮ್ - 1
*ಲಿಂಬೆ ರಸ - 1/2 ಚಮಚ
*ಬ್ರೆಡ್ - 1 ಪ್ಯಾಕೇಟ್
*ಅರಶಿನ - 1/2 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - 2 ಚಮಚ
*ಗರಮ್ ಮಸಾಲೆ - 1/2 ಚಮಚ
ಮಾಡುವ ವಿಧಾನ
1. ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಒಗ್ಗರಣೆ ಮಾಡಿಕೊಳ್ಳಿ. ಇದಕ್ಕೆ ಈರುಳ್ಳಿ ಮತ್ತು ಟೊಮೇಟೊವನ್ನು ಹಾಕಿ ಕೆಂಪಾಗಾಗುವರೆಗೆ ಹುರಿದುಕೊಳ್ಳಿ.
2. ಕುಕ್ಕರ್‌ನಲ್ಲಿ ನೀರು ಹಾಕಿ ಮೇಲೆ ತಿಳಿಸಿದ ತರಕಾರಿಗಳನ್ನು ಎರಡು ವಿಶಲ್‌ನಲ್ಲಿ ಬೇಯಿಸಿಕೊಳ್ಳಿ.
3. ಇದೇ ಸಮಯದಲ್ಲಿ ಬ್ರೆಡ್ ಅನ್ನು ಸಣ್ಣಗೆ ತುಂಡುಗಳನ್ನಾಗಿ ಮಾಡಿಕೊಳ್ಳಿ
4. ಕುಕ್ಕರ್ ತಣಿದ ಒಡನೆ ತರಕಾರಿಗಳನ್ನು ಬಾಣಲೆಯಲ್ಲಿರುವ ಈರುಳ್ಳಿ ಮಿಶ್ರಣಕ್ಕೆ ಹಾಕಿ. ಇದಕ್ಕೆ ಅರಶಿನ ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
5. ತರಕಾರಿ ಬೆಚ್ಚಗಾಗುತ್ತಿದ್ದಂತೆ ಈಗಾಗಲೇ ಹೆಚ್ಚಿಟ್ಟಿರುವ ಬ್ರೆಡ್ ತುಂಡುಗಳನ್ನು ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
6. ಕೊತ್ತಂಬರಿ ಸೊಪ್ಪಿನ ಅಲಂಕಾರವನ್ನು ಮಾಡಿ ಲಿಂಬೆ ರಸವನ್ನು ಹಿಂಡಿ ಮಿಶ್ರ ಮಾಡಿ
ಬಿಸಿಯಾದ ರುಚಿಯಾದ ಬ್ರೆಡ್ ಒಗ್ಗರಣೆ ರೆಸಿಪಿ ಸವಿಯಲು ಸಿದ್ಧವಾಗಿದೆ. ಸಾಸ್‌ನೊಂದಿಗೆ ಈ ಬ್ರೆಡ್ ಒಗ್ಗರಣೆ ರೆಸಿಪಿಯನ್ನು ಸವಿಯಲು ನೀಡಿ.



Click it and Unblock the Notifications